ಮುಂಬೈ: ಸಿದ್ದರಾಮಯ್ಯ (Siddaramaiah) ಅವರ ಬಗ್ಗೆ ನನಗಿದ್ದ ಗೌರವ ಮತ್ತಷ್ಟು ಹೆಚ್ಚಾಯ್ತು ಎಂದು ಮಹಾರಾಷ್ಟ್ರದ ಉದ್ಧವ್‌ಠಾಕ್ರೆ ಬಣದ ಶಿವಸೇನೆ ನಾಯಕ ಸಂಜಯ್ ರಾವತ್ (Sanjay Raut) ಕೊಂಡಾಡಿದ್ದಾರೆ.
ಸಿದ್ದರಾಮಯ್ಯರಂತೆ ಸುಗಮ ಅಧಿಕಾರ ಹಸ್ತಾಂತರ (Karnataka leadership Change) ಅಪರೂಪ. ರಾಜಕಾರಣಿಗಳು ಸಾಮಾನ್ಯವಾಗಿ ತಮ್ಮ ಅಧಿಕಾರ ಮತ್ತು ಸ್ಥಾನಗಳನ್ನು ಬಿಟ್ಟುಕೊಡಲು ಹಿಂಜರಿಯುತ್ತಾರೆ. ಆದರೆ, ಸಿದ್ದರಾಮಯ್ಯ ನಡೆಸಿದ ಈ “ಸುಗಮ ಅಧಿಕಾರ ಹಸ್ತಾಂತರ” ಅತ್ಯಂತ ಅಪರೂಪವಾಗಿ ಕಂಡುಬರುತ್ತದೆ. ಯಾವುದೇ ಹಠ ಹಿಡಿಯದೇ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವ ಮೂಲಕ ರಾಜಕಾರಣದಲ್ಲಿ ಅಪರೂಪದ ಮಾದರಿಯನ್ನು ಹಾಕಿಕೊಟ್ಟಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ರಾಜ್ಯ ರಾಜಕಾರಣದಲ್ಲಿರುವುದು ಡಿಕೆಶಿಗೆ ತೂಗುಗತ್ತಿ: ಬಸವರಾಜ ಬೊಮ್ಮಾಯಿ
ರಾಜಕೀಯದಲ್ಲಿ ಅಧಿಕಾರ ತ್ಯಜಿಸುವುದು ಸಾಮಾನ್ಯ ವಿಷಯವಲ್ಲ. “ಸಾಮಾನ್ಯವಾಗಿ ಯಾರೂ ಸ್ವಯಂಪ್ರೇರಿತವಾಗಿ ತಮ್ಮ ಸ್ಥಾನ ಬಿಟ್ಟುಕೊಡುವುದಿಲ್ಲ. ಆದರೆ, ಇದು ದೇಶದ ರಾಜಕೀಯದಲ್ಲಿ ಅಪರೂಪದ ಬೆಳವಣಿಗೆ. ಪಕ್ಷದ ತೀರ್ಮಾನಕ್ಕೆ ಬದ್ಧತೆ ತೋರಿರುವುದು ರಾಜಕೀಯ ಪ್ರೌಢತೆಯ ಸಂಕೇತ. ಅವರ ಬಗ್ಗೆ ಗೌರವ ಮತ್ತಷ್ಟು ಹೆಚ್ಚಾಗಿದೆ ಎಂದು ಅವರು ಮುಕ್ತವಾಗಿ ಶ್ಲಾಘಿಸಿದ್ದಾರೆ. ಇದನ್ನೂ ಓದಿ: ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಪದಗ್ರಹಣ – 8 ಸಚಿವರ ಜೊತೆ ಪ್ರಮಾಣವಚನ?
