– ಅಮೆರಿಕಕ್ಕೆ ನೂರಾರು ಕೋಟಿ ರೂ. ನಷ್ಟ
ಟೆಹ್ರಾನ್/ವಾಷಿಂಗ್ಟನ್: ಶ್ವೇತಭವನದಲ್ಲಿ 2 ಗಂಟೆಗಳ ಕಾಲ ನಡೆದ ಸಭೆಯ ಹೊರತಾಗಿಯೂ, ಇರಾನ್ ಜೊತೆಗಿನ ಮಾತುಕತೆ ವಿಫಲವಾಗಿದೆ. ಇದಾದ ಕೆಲ ಗಂಟೆಗಳಲ್ಲೇ ಇರಾನ್ ಅಮೆರಿಕದ ವಾಯುನೆಲೆಯ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ (Iran Ballistic Missile Strikes) ನಡೆಸಿದೆ.
ದಾಳಿಯಲ್ಲಿ ಅಮೆರಿಕದ (America) ಅತ್ಯಾಧುನಿಕ ರೀಪರ್ ಡ್ರೋನ್‌ಗಳು (Reaper Drones) ಹಾನಿಯಾಗಿದ್ದು, ನೂರಾರು ಕೋಟಿ ರೂಪಾಯಿ ಸಂಪತ್ತು ನಷ್ಟವಾದಂತಾಗಿದೆ. ಹಲವು ಅಮೆರಿಕನ್ನರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಅಮೆರಿಕದಿಂದ ಇರಾನ್ ಸೇನಾಧಿಕಾರಿ ಹತ್ಯೆ- ಡೆಡ್ಲಿ ಡ್ರೋನ್ ವಿಶೇಷತೆ ಏನು? ಬೆಲೆ ಎಷ್ಟು?- ವಿಡಿಯೋ ನೋಡಿ
ಕುವೈತ್‌ನಲ್ಲಿರುವ ಅಮೆರಿಕ ಅಲಿ ಅಲ್ ಸಲೇಂ ವಾಯುನೆಲೆಯ ಮೇಲೆ ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿದೆ. ವಾಯುನೆಲೆ ಗುರಿಯಾಗಿಸಿಕೊಂಡು ಇರಾನ್ ಫತೇಹ್-110 ಕ್ಷಿಪಣಿ (Fateh-110 Missile) ಉಡಾಯಿಸಿತ್ತು. ಕುವೈತ್‌ನ ವಾಯು ರಕ್ಷಣಾ ವ್ಯವಸ್ಥೆಗಳು ಕ್ಷಿಪಣಿಯನ್ನ ಯಶಸ್ವಿಯಾಗಿ ತಡೆದಿತ್ತು. ಆದ್ರೆ ಕ್ಷಿಪಣಿ ಹೊಡೆದುರುಳಿಸಿದಾಗ ಬಿದ್ದ ಅವಶೇಷಗಳು ಮಿಲಿಟರಿ ನೆಲೆಗೆ ಅಪ್ಪಳಿಸಿವೆ.

ಇರಾನ್‌ನ ಮಿಸೈಲ್ ಅವಶೇಷಗಳು ಅಪ್ಪಳಿಸಿದ್ದರಿಂದ ವಾಯುನೆಲೆಯಲ್ಲಿದ್ದ ಎರಡು MQ-9 ರೀಪರ್ ಸ್ಟ್ರೈಕ್ ಡ್ರೋನ್‌ಗಳಿಗೆ ಭಾರೀ ಹಾನಿಯಾಗಿದೆ. ಇದರೊಂದಿಗೆ ಹಲವು ಮಿಲಿಟರಿ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ದೊಡ್ಡ ದೊಡ್ಡ ಡ್ರೋನ್ ಬಳಸಿ ಹವಾಯ್‌ಗೆ ಸೊಳ್ಳೆಗಳ ಬಿಡುಗಡೆ – ಇಲ್ಲದಿದ್ರೆ ಈ ಪ್ರಭೇದವೇ ನಾಶವಾಗುತ್ತಂತೆ!
MQ-9 ರೀಪರ್ ಸ್ಟ್ರೈಕ್ ಡ್ರೋನ್ ವಿಶೇಷತೆ ಏನು?
ಅಮೆರಿಕ ಸೇನೆ ತನ್ನ ವಿರೋಧಿಗಳ ವಿರುದ್ಧದ ಪ್ರಮುಖ ಕಾರ್ಯಾಚರಣೆಗಳಲ್ಲಿ ಎಂಕ್ಯೂ-9 ಹೆಸರಿನ ರೀಪರ್ ಡ್ರೋನ್ ಬಳಕೆ ಮಾಡುತ್ತದೆ. ಇದು ಪ್ರಿಡೇಟರ್ ಡ್ರೋನ್ ಎಂದೇ ಖ್ಯಾತವಾಗಿದ್ದು, ಪ್ರಿಡೇಟರ್ ಎಂದರೇ ಬೇಟೆಗಾರ ಎಂಬರ್ಥವನ್ನು ಹೊಂದಿದೆ. ಎದುರಾಳಿನ ನೆಲದಲ್ಲಿ ಗೂಢಾಚಾರ ಮತ್ತು ನಿಖರ ದಾಳಿ ನಡೆಸುವ 2 ಸಾಮರ್ಥ್ಯಗಳನ್ನು ಹೊಂದಿರುವುದು ಎಂಕ್ಯೂ-9 ಡ್ರೋನ್‍ನ ವಿಶೇಷತೆಯಾಗಿದೆ.
MQ-9 ರೀಪರ್ ಡ್ರೋನ್ ನಲ್ಲಿ ‘M’ ಅಕ್ಷರ ಅಮೆರಿಕ ರಕ್ಷಣಾ ಪಡೆಗಳ ಬಹುಪಾತ್ರವನ್ನು (Multi Role) ಪ್ರತಿನಿಧಿಸಿದರೆ, ‘Q’ ಅಕ್ಷರವೂ ಮಾನವ ರಹಿತ ಹಾಗೂ 9 ಸಂಖ್ಯೆಯೂ ಈ ಮಾದರಿಯ ಡ್ರೋನ್ ವಿಮಾನಗಳ 9ನೇ ಸರಣಿಯನ್ನು ಪ್ರತಿನಿಧಿಸುತ್ತದೆ. ಎಂಕ್ಯೂ-9 ರೀಪರ್ ಡ್ರೋನ್ ಸುಧಾರಿತ ಕ್ಯಾಮೆರಾ ಮತ್ತು ಕ್ಷಿಪಣಿ ವ್ಯವಸ್ಥೆಯನ್ನು ಹೊಂದಿದೆ. ಆಧುನಿಕ ತಂತ್ರಜ್ಞಾನ ಹೊಂದಿರುವ ಡ್ರೋನ್ ನಿರ್ಧಿಷ್ಟ ಗುರಿಯನ್ನು ತಲುಪಲು ವಿಷ್ಯುವಲ್ ಸೆನ್ಸಾರ್ ಹೊಂದಿದೆ. ದೂರದಲ್ಲಿದ್ದುಕೊಂಡೇ ಇಬ್ಬರ (ಒಬ್ಬರು ಪೈಲಟ್, ಸೆನ್ಸರ್ ಆಪರೇಟರ್) ಮೂಲಕ ಈ ಡ್ರೋನ್ ನಿಯಂತ್ರಿಸಬಹುದಾಗಿದೆ.

ಡ್ರೋನ್ ವಿಶೇಷತೆಗಳು?
ಎಂಕ್ಯೂ-9 ರೀಪರ್ ಡ್ರೋನ್ 2,200 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಹೊಂದಿದೆ. ಟೇಕ್ ಆಫ್ ವೇಳೆ ಗರಿಷ್ಠ 4,760 ಕೆಜಿ ತೂಕ ಆಗಿದ್ದು, 1,701 ಕೆಜಿ ತೂಕ ಶಸ್ತ್ರಾಸ್ತ್ರಗಳನ್ನು ಹೊತ್ತು ಸಾಗುವ ಸಾಮರ್ಥ್ಯ ಹೊಂದಿದೆ. ಭೂಮಿಯಿಂದ 50 ಸಾವಿರ ಅಡಿ ಎತ್ತರದಲ್ಲಿ ಹಾರಾಟ ಮಾಡುವ ಸಾಮರ್ಥ್ಯ ಹೊಂದಿದ್ದು, 1,150 ಮೈಲಿ (1,850 ಕಿ.ಮೀ) ದೂರದ ಗುರಿಯನ್ನು ಹೊಡೆಯುವ ಸಾಮರ್ಥ್ಯ ಪಡೆದುಕೊಂಡಿದೆ. ಡ್ರೋನ್ 66 ಅಡಿ ಅಗಲ, 36 ಅಡಿ ಉದ್ದ ಹಾಗೂ 12.5 ಅಡಿ ಎತ್ತರವನ್ನು ಹೊಂದಿದೆ.
ಜನರಲ್ ಆಟೋವಿಕ್ಸ್ ಏರೋನಾಟಿಕಲ್ ಸಿಸ್ಟಮ್ಸ್ ಐಎನ್‍ಸಿ ಸಂಸ್ಥೆಯೂ ಎಂಕ್ಯೂ-9 ರೀಪರ್ ಡ್ರೋನ್‍ಗಳನ್ನು ಉತ್ಪಾದಿಸುತ್ತಿದೆ. 1 ಡ್ರೋನ್ ಯ್ಯೂನಿಟ್‍ಗೆ 2016 ರಂತೆ 56 ದಶಲಕ್ಷ ಡಾಲರ್ (ಅಂದಾಜು 531 ಕೋಟಿ ರೂ.) ವೆಚ್ಚವಾಗಲಿದ್ದು, 1 ಯ್ಯೂನಿಟ್ ಏರ್ ಕ್ರಾಫ್ಟ್ ಹಾಗೂ ಸೆನ್ಸರ್ ಗಳನ್ನು ಹೊಂದಿರುತ್ತದೆ. ಇದನ್ನೂ ಓದಿ: ಭಾರತ – ಯುಎಸ್ ವ್ಯಾಪಾರ ಒಪ್ಪಂದ 99% ಪೂರ್ಣ – ಶೀಘ್ರದಲ್ಲೇ ಫೈನಲ್ ಡೀಲ್ ನಿರೀಕ್ಷೆ
ಎಂಕ್ಯೂ-9 ರೀಪರ್ ಡ್ರೋನ್ ಮೂಲಕ ಲೇಸರ್ ಗೈಡೆಡ್ ಕ್ಷಿಪಣಿಗಳನ್ನು ಉಡಾಯಿಸಬಹುದಾಗಿದೆ. ಈ ಕ್ಷಿಪಣಿಗಳು ನಿಖರ ಹಾಗೂ ಕಡಿಮೆ ಹಾನಿಯನ್ನು ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಗಂಟೆಗೆ 400 ಕಿಮೀ ವೇಗದಲ್ಲಿ ಹಾರುವ ಹಾಗೂ ಸತತ 27 ಗಂಟೆ ಹಾರಬಲ್ಲದು. ಅಮೆರಿಕ ನೌಕಾ ಪಡೆಯಲ್ಲಿ ಎಂಕ್ಯೂ-9 ರೀಪರ್ ಡ್ರೋನ್ ಗಳನ್ನು ಬಳಕೆ ಮಾಡಲಾಗುತ್ತಿದೆ. ವಿಶ್ವದ ಅತಿಹೆಚ್ಚು ಶಕ್ತಿಶಾಲಿ ಡ್ರೋನ್‍ಗಳಲ್ಲಿ ಎಂಕ್ಯೂ-9 ಸ್ಥಾನ ಪಡೆದಿದೆ.
