ನವದೆಹಲಿ/ವಾಷಿಂಗ್ಟನ್: ಭಾರತ ಮತ್ತು ಅಮೆರಿಕದ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದ ಮಾತುಕತೆಗಳು 99% ಪೂರ್ಣಗೊಂಡಿದೆ. ಶೀಘ್ರದಲ್ಲೇ ಅಂತಿಮ ಒಪ್ಪಂದ ಏರ್ಪಡುವ ನಿರೀಕ್ಷೆಯಿದೆ ಎಂದು ಯುಎಸ್ ರಾಯಭಾರಿ ಸೆರ್ಗಿಯೊ ಗೋರ್ ಹೇಳಿದ್ದಾರೆ.
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ದೆಹಲಿಯಲ್ಲಿ ʻಯುಎಸ್ ಇಂಡಿಯಾ ಟ್ರಸ್ಟ್ ಇನಿಶಿಯೇಟಿವ್: ಅಡ್ವಾನ್ಸಿಂಗ್ ಪಾರ್ಟ್‌ನರ್‌ಶಿಪ್ ಇನ್ ರಿಸರ್ಚ್ ಅಂಡ್ ಇನ್ನೋವೇಶನ್ʼ ವಿಷಯ ಕುರಿತು ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇದನ್ನೂ ಓದಿ: ಹಾರ್ಮುಜ್‌ನಲ್ಲಿ ಜಲಬಾಂಬ್ ಇಡುತ್ತಿದ್ದ ಬೋಟ್, ಇರಾನ್ ಕ್ಷಿಪಣಿ ಉಡಾವಣಾ ತಾಣಗಳ ಮೇಲೆ US ವಾಯುದಾಳಿ
ಭಾರತ – ಅಮೆರಿಕ ನಡುವೆ 99% ಮಾತುಕತೆಗಳು ಪೂರ್ಣಗೊಂಡಿದ್ದು, 1% ಮಾತ್ರ ಬಾಕಿಯಿದೆ. ಉಭಯ ರಾಷ್ಟ್ರಗಳು ಶೀಘ್ರದಲ್ಲೇ ಒಪ್ಪಂದಗಳಿಗೆ ಸಹಿ ಹಾಕಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಒಪ್ಪಂದ ಉಳಿದ ವಿವರಗಳನ್ನ ಫೈನಲ್ ಮಾಡಲು ಭಾರತೀಯ ಸಮಾಲೋಚಕರು ಇತ್ತೀಚೆಗೆ ವಾಷಿಂಗ್ಟನ್‌ಗೆ ಭೇಟಿ ನೀಡಿದ್ದರು. ಅದೇ ರೀತಿ ಮುಖ್ಯ ವ್ಯಾಪಾರ ಸಮಾಲೋಚಕರನ್ನೊಳಗೊಂಡ ಯುಎಸ್ ನಿಯೋಗವು ಜೂನ್ 1 ರಿಂದ 4 ರ ವರೆಗೆ ಒಪ್ಪಂದಗಳ ಕುರಿತು ಚರ್ಚೆ ಮುಂದುವರಿಸಲು ಭಾರತಕ್ಕೆ ಭೇಟಿ ನೀಡಲಿದೆ ಎಂದು ತಿಳಿಸಿದ್ದಾರೆ.
ಮುಂಬರುವ ಸುತ್ತಿನ ಮಾತುಕತೆಗಳಲ್ಲಿ ಎರಡೂ ದೇಶಗಳು ಹೆಚ್ಚಿನ ಪ್ರಗತಿ ಸಾಧಿಸುವ ನಿರೀಕ್ಷೆಯಲ್ಲಿವೆ ಎಂದಿದ್ದಾರೆ. ಇದು ಕಳೆದ ಏಪ್ರಿಲ್‌ನಲ್ಲಿ ಉಭಯ ದೇಶದ ಅಧಿಕಾರಿಗಳ ನಡುವೆ ವಾಷಿಂಗ್ಟನ್‌ನಲ್ಲಿ ನಡೆದ ಮಾತುಕತೆಗಳ ಮುಂದುವರಿದ ಭಾಗವಾಗಿದೆ. ಇದನ್ನೂ ಓದಿ: I Love India, Modi | ಭಾರತ ಬಯಸಿದ್ದೆಲ್ಲವೂ ಸಿಗುತ್ತೆ, ನನ್ನನ್ನ 100% ನಂಬಬಹುದು: ಟ್ರಂಪ್
ಮುಂದುವರಿದು.. ಭಾರತ ಮತ್ತು ಯುಎಸ್ ನಡುವಿನ ಆರ್ಥಿಕ ಸಂಬಂಧಗಳಲ್ಲಿನ ಗಮನಾರ್ಹ ಬೆಳವಣಿಗೆಯನ್ನ ಗೋರ್ ಎತ್ತಿ ತೋರಿಸಿದರು. ಕಳೆದ 2 ದಶಕಗಳಲ್ಲಿ ಸರಕು ಮತ್ತು ಸೇವೆಗಳಲ್ಲಿನ ದ್ವಿಪಕ್ಷೀಯ ವ್ಯಾಪಾರವು ಸುಮಾರು 20 ಶತಕೋಟಿ ಡಾಲರ್‌ನಿಂದ 220 ಶತಕೋಟಿ ಡಾಲರ್‌ಗಿಂತಲೂ ಹೆಚ್ಚಾಗಿದೆ. ಈ ಹೆಚ್ಚಳವು ಆರ್ಥಿಕತೆ ಬಲಪಡಿಸುವ ಜೊತೆಗೆ, 2 ರಾಷ್ಟ್ರಗಳ ನಡುವಿನ ಪಾಲುದಾರಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಶ್ಲಾಘಿಸಿದ್ದಾರೆ
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕದ ವ್ಯವಹಾರಗಳು ಮತ್ತು ಕಾರ್ಮಿಕರಿಗೆ ಹೆಚ್ಚಿನ ಅವಕಾಶಗಳನ್ನ ಸೃಷ್ಟಿಸುವ ರೀತಿಯಲ್ಲಿ ವ್ಯಾಪಾರ ವಿಸ್ತರಿಸಲು ಗಮನಹರಿಸಿದ್ದಾರೆ. ಅದಕ್ಕಾಗಿ ಭಾರತವನ್ನು ತಮ್ಮ ಪ್ರಮುಖ ವ್ಯಾಪಾರ ಪಾಲುದಾರರಲ್ಲಿ ಒಬ್ಬರೆಂದು ಪರಿಗಣಿಸಿರುವುದಾಗಿ ಹೇಳಿದ್ದಾರೆ.
