– ಭಾರತಕ್ಕೆ ಯಾವುದೇ ಸಹಾಯ ಬೇಕಿದ್ದರೆ ಎಲ್ಲಿಗೆ ಕರೆ ಮಾಡಬೇಕೆಂಬುದು ಅವರಿಗೆ ಗೊತ್ತಿದೆ
– ಅಮೆರಿಕದ 250ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಟ್ರಂಪ್ ಫೋನ್ ಕಾಲ್
ನವದೆಹಲಿ: ನಾನು ಭಾರತವನ್ನು, ಪ್ರಧಾನಿ ಮೋದಿಯನ್ನು (PM Modi) ಪ್ರೀತಿಸುತ್ತೇನೆ. ಭಾರತ ಬಯಸಿದ್ದೆಲ್ಲವೂ ಅವರಿಗೆ ಸಿಗುತ್ತದೆ, ನನ್ನನ್ನ 100% ನಂಬಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ದೂರವಾಣಿ ಕರೆಯಲ್ಲಿ ಹೇಳಿದ್ದಾರೆ.
ನವದೆಹಲಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿಯಲ್ಲಿಂದು ನಡೆದ ಅಮೆರಿಕದ 250ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಸಂದರ್ಭದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದಲ್ಲಿರುವ ಅಮೆರಿಕದ ರಾಯಭಾರಿ ಸೆರ್ಗಿಯೊ ಗೋರ್ (Sergio Gor) ಅವರಿಗೆ ದೂರವಾಣಿ ಕರೆ ಮಾಡಿದ್ದರು. ಈ ವೇಳೆ ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸುವ ಮಾತುಗಳನ್ನಾಡಿದರು. ಇದನ್ನೂ ಓದಿ:ಬೇರೆ ರಾಷ್ಟ್ರಗಳಿಗೆ ಹೋಲಿಸಿದ್ರೆ ಭಾರತದಲ್ಲೇ ಅತ್ಯಂತ ಕಡಿಮೆ ದರ ಏರಿಕೆ – ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳಕ್ಕೆ ಕೇಂದ್ರ ಸಮರ್ಥನೆ

ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಉದ್ದೇಶಿಸಿ ಮಾತನಾಡಿದ ಸೆರ್ಗಿಯೊ ಗೋರ್, ರಾಜತಾಂತ್ರಿಕರು, ಅಧಿಕಾರಿಗಳು ಮತ್ತು ವ್ಯಾವಹಾರಿಕ ನಾಯಕರು ಹಾಗೂ ಪ್ರೇಕ್ಷಕರ ಸಮ್ಮುಖದಲ್ಲಿರುವಾಗಲೇ ಟ್ರಂಪ್ ಅವರಿಗೆ ಫೋನ್ ಕಾಲ್ ಮಾಡಿದ್ರು. ಈ ವೇಳೆ ಲೈವ್‌ನಲ್ಲೇ ಮಾತನಾಡಿದ ಟ್ರಂಪ್, ಭಾರತ ಮತ್ತು ಪ್ರಧಾನಿ ಮೋದಿ ಅವರನ್ನು ಹಾಡಿಹೊಗಳಿದರು.
ನಾನು ʻಭಾರತ ಮತ್ತು ಪ್ರಧಾನಿ ಮೋದಿ ಅವರನ್ನು ಪ್ರೀತಿಸುತ್ತೇನೆ. ಮೋದಿ ಶ್ರೇಷ್ಠ ನಾಯಕ ಹಾಗೂ ನನ್ನ ಸ್ನೇಹಿತ, ನಾನು ಅವರ ದೊಡ್ಡ ಅಭಿಮಾನಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಟ್ರಂಪ್ ಪುತ್ರಿ ಇವಾಂಕಾ ಹತ್ಯೆಗೆ ಸಂಚು ರೂಪಿಸಿದ್ದ ಐಆರ್‌ಜಿಸಿ – ಸ್ಫೋಟಕ ಮಾಹಿತಿ ಬಹಿರಂಗ
ಮುಂದುವರಿದು… ಭಾರತ 100% ನನ್ನ ಮೇಲೆ ನಂಬಿಕೆ ಇಡಬಹುದು. ಭಾರತಕ್ಕೆ ಯಾವುದೇ ಸಹಾಯ ಬೇಕಿದ್ದರೆ, ಎಲ್ಲಿಗೆ ಕರೆ ಮಾಡಬೇಕೆಂದು ಅವರಿಗೆ ತಿಳಿದಿದೆ. ಅವರು ಖಂಡಿತಾ ಇಲ್ಲಿಗೇ ಕರೆ ಮಾಡುತ್ತಾರೆ. ಏಕೆಂದ್ರೆ ನಾವು ಚೆನ್ನಾಗಿದ್ದೇವೆ, ದಾಖಲೆಗಳನ್ನ ನಿರ್ಮಿಸುತ್ತಿದ್ದೇವೆ. ನಮ್ಮಲ್ಲಿ ದಾಖಲೆಯ ಆರ್ಥಿಕತೆಯಿದೆ, ದಾಖಲೆಯ ಷೇರು ಮಾರುಕಟ್ಟೆ ಇದೆ. ಹಾಗಾಗಿ ಭಾರತ ಬಯಸಿದ್ದೆಲ್ಲವೂ ಅವರಿಗೆ ಸಿಗುತ್ತೆ ಎಂದು ಆಶ್ವಾಸನೆ ನೀಡಿದರು.
ಇದಕ್ಕೂ ಮುನ್ನ ಟ್ರಂಪ್ ಅವರ ಪರವಾಗಿ ಪ್ರಧಾನಿ ಮೋದಿ ಅವರನ್ನು ಶ್ವೇತಭವನಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದರು. ಇದನ್ನೂ ಓದಿ: ಟ್ರಂಪ್ ಇರುವಾಗಲೇ ಶ್ವೇತ ಭವನದ ಬಳಿ ಗುಂಡಿನ ದಾಳಿ – ಬಂದೂಕುಧಾರಿ ಸಾವು
