ಕನ್ನಡಪರ ಸಂಘಟನೆಗಳು ನಾಳೆ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದು, ಈ ಹೋರಾಟಕ್ಕೆ ಕನ್ನಡ ಚಿತ್ರರಂಗ ಕೂಡ ಬೆಂಬಲ ಸೂಚಿಸಿತ್ತು. ಚಿತ್ರೋದ್ಯಮ ಬಂದ್ (Film Industry) ಮಾಡುವ ಮೂಲಕ ಹೋರಾಟಕ್ಕೆ ಇಳಿಯುವುದಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿನ್ನೆ ಹೇಳಿಕೆ ನೀಡಿತ್ತು. ಆದರೆ, ಈ ಹೋರಾಟದ ನೇತೃತ್ವವನ್ನು ವಹಿಸುವವರು ಯಾರು ಎನ್ನುವ ಪ್ರಶ್ನೆ ಕೂಡ ಮೂಡಿತ್ತು.

ಸಾಕಷ್ಟು ವರ್ಷಗಳಿಂದ ಕಾವೇರಿ ನೀರಿಗಾಗಿ ಹೋರಾಟ ನಡೆಯುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಸೆ.29ರಂದು ಕರ್ನಾಟಕ ಬಂದ್ ಕರೆ ನೀಡಿದ್ದು, ಸೀರಿಯಲ್, ಸಿನಿಮಾ ಚಿತ್ರೀಕರಣ, ಚಿತ್ರ ಪ್ರದರ್ಶನ ಸೇರಿದಂತೆ ಎಲ್ಲಾ ಚಟುವಟಿಕೆಗಳು ಬಂದ್ ಮೂಲಕ ಚಿತ್ರೋದ್ಯಮ ಸಾಥ್ ನೀಡುತ್ತಿದೆ. ಇದನ್ನೂ ಓದಿ:ನಿಮ್ಮನ್ನು ಪತಿಯಾಗಿ ಪಡೆಯಲು ಪುಣ್ಯ ಮಾಡಿದ್ದೇನೆ- ತೇಜಸ್ವಿನಿ ಪ್ರಕಾಶ್
ನಾಳೆಯ ಪ್ರತಿಭಟನೆಯಲ್ಲಿ ಶಿವಣ್ಣ, ಉಪೇಂದ್ರ, ರಾಘಣ್ಣ, ನೆನಪಿರಲಿ ಪ್ರೇಮ್, ಅಜಯ್ ರಾವ್, ಪ್ರಜ್ವಲ್ ದೇವರಾಜ್, ರಂಗಾಯಣ ರಘು, ಸಾಧು ಕೋಕಿಲಾ ಸೇರಿದಂತೆ ಕಿರುತೆರೆ ನಟ- ನಟಿಯರು ಭಾಗಿಯಾಗುವ ಸಾಧ್ಯತೆ ಇದೆ.
ಫಿಲ್ಮ್ ಚೇಂಬರ್ ಅಂಗ ಸಂಸ್ಥೆಗಳಾದ, ನಿರ್ಮಾಪಕರ ಸಂಘ, ಕಲಾವಿದರ ಸಂಘ, ನಿರ್ದೇಶಕರ ಸಂಘದಿಂದ, ಒಕ್ಕೂಟದಿಂದಲೂ ಕರ್ನಾಟಕ ಬೆಂಬಲಿಸಲಿದ್ದಾರೆ.


