ಕನ್ನಡದ ಖ್ಯಾತ ನಟಿ ಹಾಗೂ ನಿರ್ಮಾಪಕಿ ಶರ್ಮಿಳಾ ಮಾಂಡ್ರೆ(Sharmiela Mandre) ಹೊಸ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ತಮಿಳು ಚಿತ್ರರಂಗದ ನಿರ್ಮಾಪಕ ಸುಧನ್ ಸುಂದರಂ(Sudhan Sundaram) ಅವರೊಂದಿಗೆ ಸರಳವಾಗಿ ನಿಶ್ಚಿತಾರ್ಥ(Engagement) ಮಾಡಿಕೊಂಡಿರುವ ಜೋಡಿ ಸಂತಸ ಹಂಚಿಕೊಂಡಿದೆ.
ಬಿಳಿ ಹೂವುಗಳ ಅಲಂಕಾರ ಮತ್ತು ಆಕರ್ಷಕ ವೇದಿಕೆ ಸಮಾರಂಭದ ಮೆರುಗನ್ನು ಹೆಚ್ಚಿಸಿತು. ಸರಳತೆಯಲ್ಲೇ ನಡೆದ ಈ ಸಮಾರಂಭದ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. 2007ರಲ್ಲಿ ಬಿಡುಗಡೆಯಾದ ‘ಸಜನಿ’ ಚಿತ್ರದ ಮೂಲಕ ಶರ್ಮಿಳಾ ಮಾಂಡ್ರೆ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಎಂಟ್ರಿ ಕೊಟ್ಟರು.
ನಂತರ ‘ಕೃಷ್ಣ’, ‘ನವಗ್ರಹ’, ‘ಸ್ವಯಂವರ’, ‘ಆಕೆ’, ‘ಗಾಳಿಪಟ 2’, ‘ಪೌಡರ್’, ‘ಡೆವಿಲ್’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ. ಸುಮಾರು 35ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಶರ್ಮಿಳಾ, ಶರ್ಮಿಳಾ ಮಾಂಡ್ರೆ ಪ್ರೊಡಕ್ಷನ್ಸ್ ಮೂಲಕ ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಕಂಟೆಂಟ್ ಆಧಾರಿತ ಸಿನಿಮಾಗಳಿಗೆ ಅವರು ವಿಶೇಷ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ.
ಇನ್ನು ಸುಧನ್ ಸುಂದರಂ ಅವರು ಪ್ಯಾಶನ್ ಸ್ಟುಡಿಯೋಸ್ ಸಂಸ್ಥೆಯ ಸಂಸ್ಥಾಪಕರಾಗಿದ್ದಾರೆ. ಅವರ ನಿರ್ಮಾಣದಲ್ಲಿ ‘ಕಪ್ಪಲ್’, ‘ನಿಬುಣನ್’, ‘ಸೀತಕಾತಿ’, ‘ಅನಬೆಲ್ ಸೇತುಪತಿ’, ರಾಷ್ಟ್ರ ಪ್ರಶಸ್ತಿ ವಿಜೇತ ‘ಪಾರ್ಕಿಂಗ್’ ಹಾಗೂ ವಿಜಯ್ ಸೇತುಪತಿ ಅಭಿನಯದ ಸೂಪರ್ ಹಿಟ್ ‘ಮಹಾರಾಜ’ ಸೇರಿದಂತೆ ಹಲವು ಯಶಸ್ವಿ ಸಿನಿಮಾಗಳು ಮೂಡಿಬಂದಿವೆ.ಇದನ್ನೂ ಓದಿ: ಬಿಡುಗಡೆಗೂ ಮುನ್ನವೇ ಶ್ರದ್ಧಾ ಕಪೂರ್ ಸಿನಿಮಾಗೆ ಸಂಕಷ್ಟ
ನಿಶ್ಚಿತಾರ್ಥದ ಬಳಿಕ ಸಂತಸ ಹಂಚಿಕೊಂಡ ಶರ್ಮಿಳಾ ಮಾಂಡ್ರೆ, ಇದು ನಮ್ಮ ಜೀವನದ ಅತ್ಯಂತ ಸುಂದರ ಹಾಗೂ ವಿಶೇಷ ಕ್ಷಣ. ನಮ್ಮ ಮೇಲೆ ಪ್ರೀತಿ ಮತ್ತು ಆಶೀರ್ವಾದ ತೋರಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು. ನಮ್ಮ ಹೊಸ ಜೀವನದ ಪಯಣವನ್ನು ಎದುರು ನೋಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಸುಧನ್ ಸುಂದರಂ ಕೂಡ, ನಮ್ಮ ಕುಟುಂಬ, ಸ್ನೇಹಿತರು ಮತ್ತು ಹಿತೈಷಿಗಳು ನೀಡುತ್ತಿರುವ ಪ್ರೀತಿ ಹಾಗೂ ಬೆಂಬಲಕ್ಕೆ ನಾವು ಸದಾ ಚಿರಋಣಿಯಾಗಿರುತ್ತೇವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ದಿವ್ಯಾ ಸುರೇಶ್ ಎದುರೇ ನಡೆಯಿತು ಬೆಚ್ಚಿಬೀಳಿಸೋ ಘಟನೆ – ವಿಡಿಯೋ ಹಂಚಿಕೊಂಡು ನಟಿ ಆಕ್ರೋಶ
