ನಟಿ ದಿವ್ಯಾ ಸುರೇಶ್ ಅವರ ಎದುರಲ್ಲಿ ಯುವಕನೊಬ್ಬ ಅಸಭ್ಯವಾಗಿ ವರ್ತಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಈ ವಿಡಿಯೋವನ್ನು ಪೋಸ್ಟ್ ಮಾಡಿರುವ ನಟಿ ಕಾಮುಕನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಬಿಗ್‌ಬಾಸ್ ಕನ್ನಡ ಸೀಸನ್ 8ರ ಸ್ಪರ್ಧಿ/ ನಟಿ ದಿವ್ಯಾ ಸುರೇಶ್‌ಗೆ ಭಾನುವಾರ ರಾತ್ರಿ 11:30 ಕ್ಕೆ ಕೆಟ್ಟ ಅನುಭವ ಆಗಿದೆ. ಇದನ್ನೂ ಓದಿ: ಹೃದಯಕ್ಕೆ ಹತ್ತಿರವಾದ ವ್ಯಕ್ತಿಯನ್ನ ಕಳೆದುಕೊಂಡಿದ್ದೇನೆ ವದಂತಿಗಳನ್ನು ನಿಲ್ಲಿಸಿ – ಕೃಷಿ ತಾಪಂಡ ಫಸ್ಟ್ ರಿಯಾಕ್ಷನ್
ಏನಿದು ಘಟನೆ?
ಭಾನುವಾರ ತಡರಾತ್ರಿ ಕಸಿನ್ ಜೊತೆ ರಸ್ತೆಯಲ್ಲಿ ನಡೆದುಕೊಂಡು ಕಾರಿನ ಬಳಿ ಹೋಗುವ ವೇಳೆ ಈ ಘಟನೆ ನಡೆದಿದೆ. ಇಬ್ಬರು ಹುಡುಗಿಯರು ಹೋಗ್ತಿರೋದನ್ನ ನೋಡಿ ಯುವಕ ಅಸಭ್ಯವಾಗಿ ತನ್ನ ಖಾಸಗಿ ಅಂಗ ಮುಟ್ಟಿಕೊಳ್ಳುತ್ತಾ ಹಿಂಬಾಲಿಸಿದ್ದಾನೆ.
ಸಹಜವಾಗೇ ಆತಂಕಗೊಂಡ ನಟಿ ಹಾಗೂ ಆಕೆಯ ಕಸಿನ್ ಕಾರಿನೊಳಗೆ ಬಂದು ಕುಳಿತುಕೊಂಡು ಡೋರ್ ಹಾಕಿಕೊಳ್ತಾರೆ. ಕಾರಿನೊಳಗೆ ಕುಳಿತ ಬಳಿಕವೂ ವ್ಯಕ್ತಿ ನೀಚತನ ಪ್ರದರ್ಶಿಸುತ್ತಿದ್ದ. ಈ ವೇಳೆ ದ್ವಿಚಕ್ರ ವಾಹನ ಸವಾರನೋರ್ವ ಬಂದು ಬೈದು ಕಳಿಸುತ್ತಾರೆ. ಆ ವ್ಯಕ್ತಿ ಬೈಯುತ್ತಿದ್ದರೂ ತನ್ನ ಚಾಳಿ ಬಿಡದ ವ್ಯಕ್ತಿ ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸುತ್ತಲೇ ಇದ್ದ. ಅದರ ಸಾಕ್ಷಿಯ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಬೆಂಗಳೂರು ಪೊಲೀಸರಿಗೂ ವಿಡಿಯೋ ಟ್ಯಾಗ್ ಮಾಡಿದ್ದಾರೆ. ಇದನ್ನೂ ಓದಿ: ಬಾಯ್‌ಫ್ರೆಂಡ್ ಜೊತೆ ಬ್ರೇಕಪ್ ಮಾಡಿಕೊಂಡ್ರಾ ಕೃತಿ ಸನೋನ್?
