– ವೈರಲ್ ಫೋಟೋ ಹಿಂದಿನ ಸತ್ಯವೇನು?
ಬಾಲಿವುಡ್ ನಟಿ ಕೃತಿ ಸನೋನ್ (kriti Sanon) ಮತ್ತು ಉದ್ಯಮಿ ಕಬೀರ್ ಬಹಿಯಾ(Kabir Bahia) ಬ್ರೇಕಪ್(Breakup rumors) ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಆದರೆ ಈ ವದಂತಿಗಳಿಗೆ ಈಗ ಸ್ಪಷ್ಟನೆ ಸಿಕ್ಕಿದೆ.
ಕೆಲವು ದಿನಗಳ ಹಿಂದೆ ನಟಿ ಕೃತಿ ಸನೋನ್ ಅವರ ಬಾಯ್‌ಫ್ರೆಂಡ್, ಉದ್ಯಮಿ ಕಬೀರ್ ಬಹಿಯಾ ಮತ್ತೊಬ್ಬ ಯುವತಿಯೊಂದಿಗೆ ಕಾಣಿಸಿಕೊಂಡಿದ್ದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಈ ವಿಡಿಯೋ ನೋಡಿದ ನೆಟ್ಟಿಗರು, ಕೃತಿ ಮತ್ತು ಕಬೀರ್ ಬ್ರೇಕಪ್ ಮಾಡಿಕೊಂಡಿದ್ದಾರಾ ಎಂಬ ಪ್ರಶ್ನೆಯನ್ನು ಎತ್ತಿದ್ದರು. ಆದರೆ ಈ ಎಲ್ಲ ಸುದ್ದಿಗಳು ಸುಳ್ಳು ಎಂದು ಕಬೀರ್‌ಗೆ ಆಪ್ತ ಮೂಲಗಳು ಸ್ಪಷ್ಟಪಡಿಸಿವೆ.
Kriti Sanon’s boyfriend Kabir with another girl? Did they break Up?
by
u/dontsharegossip in
BollyBlindsNGossip
ವೈರಲ್ ಆಗಿರುವ ಫೋಟೋವನ್ನು ತಪ್ಪಾಗಿ ಅರ್ಥೈಸಲಾಗಿದೆ. ಆ ಯುವತಿ ಕಬೀರ್ ಅವರ ಕುಟುಂಬದ ಆಪ್ತ ಸ್ನೇಹಿತೆ. ಅವರು ಆಕೆಯನ್ನು ಸಹೋದರಿಯಂತೆ ಕಾಣುತ್ತಾರೆ. ಬ್ರೇಕಪ್ ವದಂತಿ ಕೇವಲ ಊಹಾಪೋಹವಷ್ಟೇ ಎಂದು ಮೂಲಗಳು ತಿಳಿಸಿವೆ.
ಇನ್ನು ಕಳೆದ ಒಂದು ವರ್ಷದಿಂದ ಕೃತಿ ಸನೋನ್ ಮತ್ತು ಕಬೀರ್ ಬಹಿಯಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಜೋರಾಗಿದೆ. ಕೃತಿ ಬರ್ತ್‌ಡೇ ವೇಳೆ ಇಬ್ಬರೂ ಗ್ರೀಸ್‌ಗೆ ಪ್ರವಾಸ ಹೋಗಿದ್ದ ಫೋಟೋಗಳು, ಕೃತಿ ಸಹೋದರಿ ನೂಪುರ್ ಸನೋನ್ ಮದುವೆ ಸಮಾರಂಭದಲ್ಲೂ ಕಬೀರ್ ಭಾಗಿಯಾಗಿದ್ದ ವಿಡಿಯೋಗಳು ಆಗಾಗ ವೈರಲ್ ಆಗಿ ನೆಟ್ಟಿಗರನ್ನು ಸೆಳೆದಿದ್ದವು. ಅಲ್ಲದೇ ಹಲವು ಬಾರಿ ಇಬ್ಬರೂ ಡಿನ್ನರ್ ಹಾಗೂ ಕುಟುಂಬದ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು.
ಕೃತಿ ಸನೋನ್ ನಟನೆಯ `ಕಾಕ್‌ಟೇಲ್ 2′ ಸಿನಿಮಾದಿಂದ ಕೃತಿ ಸದ್ಯ ಹಾಟ್ ಟಾಪಿಕ್ ಆಗಿದ್ದು, ಅವರ ಫಿಟ್‌ನೆಸ್ ಮತ್ತು ನ್ಯಾಚುರಲ್ ಬ್ಯೂಟಿ ಕೂಡ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ವಿಷಯಗಳಾಗಿವೆ.ಇದನ್ನೂ ಓದಿ: ಕೆಂಪಾಂಬುಧಿ ಟೀಸರ್ ಬಿಡುಗಡೆ – ಕೆಂಪೇಗೌಡ ಪಾತ್ರದಲ್ಲಿ ಪ್ರೇಮ್
ಹೊಮಿ ಅಡಜಾನಿಯಾ ನಿರ್ದೇಶಿಸಿರುವ ಈ ಚಿತ್ರದಲ್ಲಿ ಶಾಹಿದ್ ಕಪೂರ್ ಹಾಗೂ ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 2012ರಲ್ಲಿ ಬಿಡುಗಡೆಯಾದ ‘ಕಾಕ್‌ಟೇಲ್’ ಚಿತ್ರದ ಸ್ಪಿರಿಚುವಲ್ ಸೀಕ್ವೆಲ್ ಆಗಿರುವ ಈ ಸಿನಿಮಾ ಇದೀಗ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.ಇದನ್ನೂ ಓದಿ: ಇಡೀ ಪ್ರಯಾಣ ಯುದ್ಧದಂತೆ ಭಾಸವಾಗಿತ್ತು – ʻಬಾಹುಬಲಿʼ ದಿನಗಳ ನೆನೆದು ಭಾವುಕರಾದ ಪ್ರಭಾಸ್
