– ಗೆಳೆಯ ವೈಶಾಕ್ ಸಾವಿನ ಬಳಿಕ ನಟಿ ಮೊದಲ ಪ್ರತಿಕ್ರಿಯೆ
ಸ್ಯಾಂಡಲ್ ವುಡ್ ನಟಿ ಕೃಷಿ ತಾಪಂಡ (Krishi Thapanda) ವಾಸವಿದ್ದ ಅಪಾರ್ಟ್ಮೆಂಟ್ನಲ್ಲಿ ಅವರ ಗೆಳೆಯ ಹಾಗೂ ಉದ್ಯಮಿ ವೈಶಾಕ್ ಆತ್ಮಹತ್ಯೆ ಮಾಡಿಕೊಂಡಿದ್ದು, ಜೂ.25 ರ ಸಂಜೆ ಚಾಮರಾಜಪೇಟೆ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಿತು. ಈ ಎಲ್ಲಾ ಬೆಳವಣಿಗೆಯ ಬಳಿಕ ನಟಿ ಕೃಷಿ ತಾಪಂಡ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ತಮ್ಮ ಸೋಷಿಯಲ್ ಮೀಡಿಯಾ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸುದೀರ್ಘ ಪೋಸ್ಟ್‌ವೊಂದನ್ನ ಹಂಚಿಕೊಳ್ಳುವ ಮೂಲಕ ನಟಿ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ನಟಿ ಕೃಷಿ ತಾಪಂಡ ಜೊತೆ ನನ್ನ ಪತಿಗೆ ಸಂಬಂಧ ಇತ್ತು – ವೈಶಾಕ್ ಪತ್ನಿ ಮೇಘನಾ ಕೊಟ್ಟ ದೂರಿನಲ್ಲೇನಿದೆ?
View this post on Instagram
ಕೃಷಿ ತಾಪಂಡ ಪೋಸ್ಟ್‌ನಲ್ಲಿ ಏನಿದೆ?
ನಾನು ಈ ರೀತಿ ಬರೆಯಬೇಕಾಗುತ್ತದೆ ಎಂದು ಎಂದಿಗೂ ಊಹಿಸಿರಲಿಲ್ಲ. ಅಲ್ಲದೇ ಈ ವಿಷಯವನ್ನ ಜಗತ್ತಿಗೆ ತಿಳಿಸಲು ನನಗೆ ಶಕ್ತಿಯೂ ಇಲ್ಲ, ಮಾನಸಿಕ ಶಕ್ತಿಯೂ ಇಲ್ಲ. ಇಂತಹ ಸಮಯದಲ್ಲಿ ನಾನು ಮಾಡಲು ಬಯಸುವುದೇನೆಂದ್ರೆ ಸಾರ್ವಜನಿಕವಾಗಿ ಹೇಳಿಕೆ ನೀಡುವುದು. ನನ್ನ ಮೇಲೆ, ನನ್ನ ಸ್ನೇಹಿತರ ಮೇಲೆ ಹಾಗೂ ನಮ್ಮ ಕುಟುಂಬಗಳ ಮೇಲೆ ಅಪಾರ ಒತ್ತಡ, ನಿರಂತರ ಊಹಾಪೋಹಗಳು ಮತ್ತು ಪದೇ ಪದೇ ಕೇಳಲಾಗುವ ಪ್ರಶ್ನೆಗಳಿಂದಾಗಿ ನಾನು ಈ ಕೆಲಸ ಮಾಡಬೇಕಾಗಿದೆ.
ಕಳೆದ ಕೆಲ ದಿನಗಳು ನಾನು ಎಂದಿಗೂ ಊಹಿಸದ ರೀತಿಯಲ್ಲಿ ನನ್ನ ಜೀವನವನ್ನ ಬದಲಾಯಿಸಿವೆ. ಜೊತೆಗೆ ನನ್ನ ಹೃದಯಕ್ಕೆ ಅತ್ಯಂತ ಹತ್ತಿರವಾಗಿದ್ದ ವ್ಯಕ್ತಿಯೊಬ್ಬರನ್ನ ನಾನು ಕಳೆದುಕೊಂಡಿದ್ದೇನೆ. ಯಾವಾಗಲೂ ನನ್ನ ಜೊತೆಗಿದ್ದು, ನನ್ನನ್ನ ರಕ್ಷಿಸಿ, ಕೇವಲ ಪ್ರೀತಿಯಿಂದ ನನ್ನನ್ನು ನೋಡಿಕೊಂಡ ವ್ಯಕ್ತಿ ಅವರು. ಅವರನ್ನು ಕಳೆದುಕೊಂಡಿರುವ ನೋವನ್ನು ಕೇವಲ ಮಾತುಗಳಲ್ಲಿ ವಿವರಿಸಲು ಸಾಧ್ಯವಾಗದು. ಈ ನಷ್ಟವನ್ನು ಒಪ್ಪಿಕೊಂಡು ನಾನು ಸಹಜ ಸ್ಥಿತಿಗೆ ಬರಲು ಸಾಧ್ಯವೇ ಎಂದು ನನಗೆ ತಿಳಿಯುತ್ತಿಲ್ಲ ಎಂದು ನಟಿ ಕೃಷಿ ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಗೆಳೆಯನ ಆತ್ಮಹತ್ಯೆ ವಿಚಾರ ಪೊಲೀಸರಿಗೆ ತಿಳಿಸಿದ್ದೇ ಕೃಷಿ ತಾಪಂಡ

ಜೊತೆಗೆ ನಾನು ಬಹಳ ಸಮಯದಿಂದ ನೋವನ್ನು ಹೊತ್ತುಕೊಂಡೇ ಸಾಗುತ್ತಿದ್ದೇನೆ. ಈಗ ನಾನು ಮತ್ತೊಂದು ಊಹಿಸಲೂ ಸಾಧ್ಯವಾಗದ ನಷ್ಟದಿಂದ ದುಃಖ ಪಡುವಂತಾಗಿದೆ. ದಯವಿಟ್ಟು ಅವರ ಅಗಲಿಕೆಗೆ ಶಾಂತಿಯಿಂದ ದುಃಖಿಸಲು ನಮಗೆ ಕನಿಷ್ಠ ಗೌರವ ಮತ್ತು ಗೌಪ್ಯತೆಯನ್ನು ನೀಡಿ ಎಂದು ನಟಿ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:
ನಟಿ ಕೃಷಿ ತಾಪಂಡ ಮನೆಯಲ್ಲಿ ಗೆಳೆಯ ಆತ್ಮಹತ್ಯೆ
ಇಂತಹ ಹೊತ್ತಿನಲ್ಲಿ ಅವರ ಕುಟುಂಬ, ಸ್ನೇಹಿತರು ಮತ್ತು ಪ್ರೀತಿಪಾತ್ರರು ಊಹಿಸಲಾಗದ ನಷ್ಟವನ್ನ ನಿಭಾಯಿಸಲು ಪ್ರಯತ್ನಿಸುತ್ತಿದ್ದಾರೆ. ಹೀಗಿರುವಾಗ ನಿರಂತರ ವದಂತಿ, ಊಹಾಪೋಹಗಳು, ಯಾರದ್ದೋ ಒಬ್ಬರ ಸಾವನ್ನ ಕಥೆಯನ್ನಾಗಿ ಪರಿವರ್ತಿಸುವ ಪ್ರಯತ್ನಗಳು ನಡೆಯುತ್ತಿವೆ. ಕೆಲವು ಮಾಧ್ಯಮಗಳು ತಿಳಿವಳಿಕೆ, ಗೌರವ ತೋರಿಸುತ್ತಿದ್ದರೂ, ಕೆಲ ಮಾಧ್ಯಮಗಳು ಮಾತ್ರ ಪ್ರಚೋದಿಸುತ್ತಲೇ ಇವೆ.

ಮೊದಲ ಪ್ರಶ್ನೆ ಸಾಮಾನ್ಯವಾಗಿ, ನೀವು ಚೆನ್ನಾಗಿದ್ದೀರಾ? ಅಥವಾ ನೀವು ಹೇಗೆ ಹಿಡಿದಿಟ್ಟುಕೊಂಡಿದ್ದೀರಿ? ಎಂಬ ಬದಲು ನಿಮ್ಮ ಪ್ರತಿಕ್ರಿಯೆ ಏನು? ಎಂದೆಲ್ಲಾ ಕೇಳಲಾಗುತ್ತಿದೆ. ನಾನು ಒಬ್ಬ ವ್ಯಕ್ತಿ ಅಥವಾ ಒಂದು ವೇದಿಕೆಯನ್ನ ಉದ್ದೇಶಿಸಿ ಮಾತನಾಡುತ್ತಿಲ್ಲ, ಬದಲಾಗಿ ಸತ್ಯವನ್ನು ತಿಳಿಯದೇ ಅಥವಾ ತಮ್ಮ ಕ್ರಿಯೆಗಳು ಬಿಟ್ಟುಹೋದ ಜನರ ಮೇಲೆ ಬೀರುವ ಪರಿಣಾಮವನ್ನು ಅರ್ಥಮಾಡಿಕೊಳ್ಳದೇ ಉತ್ತರ ಹುಡುಕುತ್ತಲೇ ಇರುವ ಯಾರನ್ನಾದರೂ ಉದ್ದೇಶಿಸಿ ಮಾತನಾಡುತ್ತಿದ್ದೇನೆ. ಯಾವುದೇ ದುಃಖಿತ ವ್ಯಕ್ತಿಯು ತಮ್ಮ ನೋವನ್ನ ಸಮರ್ಥಿಸಿಕೊಳ್ಳಬೇಕೆಂದು ಎಂದಿಗೂ ನಿರೀಕ್ಷಿಸಬಾರದು.
ನನಗಾಗಿ ಪ್ರಾರ್ಥಿಸುತ್ತಿರುವ, ನನ್ನನ್ನು ಸಂಪರ್ಕಿಸುತ್ತಿರುವ, ನನ್ನ ಸ್ನೇಹಿತರ ಮೂಲಕ ತಲುಪುತ್ತಿರುವ ಮತ್ತು ಆಶೀರ್ವಾದಿಂದ ಕೂಡಿದ ಸಂದೇಶ ಕಳುಹಿಸುತ್ತಿರುವ ಪ್ರತಿಯೊಬ್ಬರಿಗೂ ಧನ್ಯವಾದಗಳು. ನನಗೆ ಈಗ ಪ್ರತಿಕ್ರಿಯಿಸಲು ಶಕ್ತಿ ಇಲ್ಲದಿರಬಹುದು, ಆದರೆ ನಿಮ್ಮ ಪ್ರೀತಿ ನನ್ನ ಮೇಲೆ ಅಪಾರವಾಗಿರುವುದನ್ನ ನೋಡುತ್ತಿದ್ದೇನೆ, ಅದಕ್ಕೆ ತುಂಬಾ ಕೃತಜ್ಞಳಾಗಿದ್ದೇನೆ . ಇದನ್ನೂ ಓದಿ: ನಟಿ ಕೃಷಿ ತಾಪಂಡ ಮನೆಯಲ್ಲಿ ಗೆಳೆಯ ಆತ್ಮಹತ್ಯೆ

ದಯವಿಟ್ಟು ಅವರ ಅಗಲಿಕೆಗೆ ಶಾಂತಿಯಿಂದ ದುಃಖಿಸಲು ನಮಗೆ ಕನಿಷ್ಠ ಗೌರವ ಮತ್ತು ಗೌಪ್ಯತೆಯನ್ನು ನೀಡಿ ಎಂದು ಮನವಿ ಮಾಡಿರುವ ನಟಿ, ನಿಮಗೆ ಯಾರನ್ನಾದರೂ ನಗಿಸಲು ಸಾಧ್ಯವಾಗದಿದ್ದರೆ, ಕನಿಷ್ಠ ಅವರ ಕಣ್ಣೀರಿಗೆ ನೀವೇ ಕಾರಣವಾಗಬೇಡಿ. ನಿಮಗೆ ಯಾರಿಗಾದರೂ ಬದುಕಲು ಒಂದು ಕಾರಣ ನೀಡಲು ಸಾಧ್ಯವಾಗದಿದ್ದರೆ, ಕನಿಷ್ಠ ಅವರು ಭರವಸೆ ಕಳೆದುಕೊಳ್ಳಲು ನೀವೇ ಕಾರಣವಾಗಬೇಡಿ ಎಂದು ನಟಿ ಭಾವುಕರಾಗಿದ್ದಾರೆ.
