ಕೋಲಾರ: ಮುಳಬಾಗಿಲು (Mulbagal) ಕುರುಡುಮಲೆ ವಿನಾಯಕನ ಸನ್ನಿಧಾನಕ್ಕೆ (Kurudumale Ganesha Temple) ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (BS Yediyurappa) ಕುಟುಂಬ ಸಮೇತ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಕುಟುಂಬ ಸಮೇತ ಆಗಮಿಸಿದ ಅವರು, ವಿಶೇಷ ಪೂಜೆ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾದರು. ಕೋಲಾರ ಜಿಲ್ಲೆಯ ಪ್ರಸಿದ್ಧ ಕುರುಡುಮಲೆ ದೇವಾಲಯ ಇದಾಗಿದ್ದು, ರಾಜಕೀಯ ನಾಯಕರ ಅಚ್ಚುಮೆಚ್ಚಿನ ದೇವರು, ಜೊತೆಗೆ ವಿಘ್ನ ನಿವಾರಕನಾಗಿರುವ ವಿನಾಯಕನ ಮೊರೆ ಹೋದರು. 10 ಗಂಟೆ ಸುಮಾರಿಗೆ ಮಗಳು ಅಳಿಯ, ಮೊಮ್ಮಕಳೊಂದಿಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಮಟ್ಕಾ ಆರೋಪಿಗೆ ಗಡಿಪಾರು; ಶಿವಳ್ಳಿ ಮೂಲದ ಆರೋಪಿಗೆ ಉಡುಪಿ ತೊರೆಯುವಂತೆ ಆದೇಶ
ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುವ ವೇಳೆ ಅರ್ಚಕರು ಯಡಿಯೂರಪ್ಪ ಅವರು ರಾಜ್ಯಪಾಲರಾಗಲಿ, ಮಕ್ಕಳು ಸಹ ಉತ್ತಮ ಸ್ಥಾನಕ್ಕೇರಲಿ ಎಂದು ವಿಶೇಷ ಪೂಜೆ ಮಾಡಿದರು. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕುರುಡುಮಲೆ ಕ್ಷೇತ್ರದಲ್ಲಿ ನೆಲೆಸಿರುವ ವಿನಾಯಕ ಸಾಕಷ್ಟು ಪವರ್ ಫುಲ್, ಈ ಹಿಂದೆಯೂ ಚುನಾವಣೆ ಸೇರಿ ಹಲವು ಭಾರಿ ಭೇಟಿ ನೀಡಿರುವ ಯಡಿಯೂರಪ್ಪ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಿದರು. ಇದೆ ವೇಳೆ ಮಾಜಿ ಶಾಸಕ ವೈ.ಸಂಪಂಗಿ, ಜಿಲ್ಲಾಧ್ಯಕ್ಷ ಓಂ ಶಕ್ತಿ ಚಲಪತಿ ಸೇರಿದಂತೆ ಜಿಲ್ಲೆಯ ಬಿಜೆಪಿ ಮುಖಂಡರು ಸಾಥ್ ನೀಡಿದರು. ಇದನ್ನೂ ಓದಿ: ಚೆನ್ನಮ್ಮ ಪಾರ್ಥಿವ ಶರೀರಕ್ಕೆ ಪುಷ್ಪ ನಮನ ಸಲ್ಲಿಸಲು ಎರಡು ಟ್ರ್ಯಾಕ್ಟರ್ ಹೂ ತಂದ ಸ್ವರೂಪ್
