ಹಾಸನ: ಬೆಂಗಳೂರಿನಿಂದ ಹೊಳನರಸೀಪುರದತ್ತ ಚೆನ್ನಮ್ಮ (Chennamma) ಅವರ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಗುತ್ತಿದೆ. ಪಾರ್ಥಿವ ಶರೀರ ಹೊಳೆನರಸೀಪುರಕ್ಕೆ ತಲುಪುವ ಮುನ್ನ ಹಾಸನದಲ್ಲಿ (Hassan) ಅಂತಿಮ ದರ್ಶನ ಪಡೆಯಲು ಶಾಸಕ ಹೆಚ್.ಪಿ ಸ್ವರೂಪ್ ಪ್ರಕಾಶ್ (Swaroop Prakash) ಸೇರಿ ನೂರಾರು ಮಂದಿ ಕಾದು ಕುಳಿತಿದ್ದಾರೆ.
ಚೆನ್ಮಮ್ಮ ಅವರ ಪಾರ್ಥಿವ ಶರೀರಕ್ಕೆ ಪುಷ್ಪಾರ್ಚನೆ ಮಾಡಲು ಸ್ವರೂಪ್ ಪ್ರಕಾಶ್ ಅವರು ಎರಡು ಟ್ರ‍್ಯಾಕ್ಟರ್ ತುಂಬಾ ಹೂವು ತರಿಸಿದ್ದಾರೆ. ಹಾಸನ ನಗರಕ್ಕೆ ಚೆನ್ನಮ್ಮ ಅವರ ಮೃತದೇಹ ಆಗಮಿಸಿದ ವೇಳೆ ಪುಷ್ಪಾರ್ಚನೆ ನೆರವೇರಿಸಲಿದ್ದಾರೆ. ಇದನ್ನೂ ಓದಿ: ನನಗಾಗಿ ಅವರು ಆ್ಯಸಿಡ್ ಹಾಕಿಸಿಕೊಂಡಿದ್ರು, ನನ್ನ ದೇವತೆಯನ್ನೇ ಕಳೆದುಕೊಂಡೆ: ಬಿಕ್ಕಿ ಬಿಕ್ಕಿ ಅತ್ತ ಹೆಚ್.ಡಿ.ರೇವಣ್ಣ

ಉಸಿರಾಟದ ಸಮಸ್ಯೆಯಿಂದ ಹೆಚ್‌ಎಎಲ್‌ನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ ಚೆನ್ನಮ್ಮ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಿಸದೇ ಜು.18ರ ಸಂಜೆ 4 ಗಂಟೆ 50 ನಿಮಿಷ ಸುಮಾರಿಗೆ ಹೃದಯಸ್ತಂಭನದಿಂದ ನಿಧನರಾಗಿದ್ದರು.
ಚೆನ್ನಮ್ಮ ಅವರ ಅಂತ್ಯಕ್ರಿಯೆ ಸೋಮವಾರ ದೇವೇಗೌಡರ ಹುಟ್ಟೂರಿನಲ್ಲಿ ನಡೆಯಲಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಗುವುದು ಎಂದು ಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: ಹೊಳೆನರಸೀಪುರಕ್ಕೆ ಅಂತಿಮ ಯಾತ್ರೆ ಹೊರಟ ಚೆನ್ನಮ್ಮ ಪಾರ್ಥಿವ ಶರೀರ
