ಲಂಡನ್: ಮಧ್ಯಪ್ರಾಚ್ಯದಲ್ಲಿ ಅಮೆರಿಕ(USA) ಮತ್ತು ಇರಾನ್(Iran) ನಡುವಿನ ಮಿಲಿಟರಿ ಸಂಘರ್ಷ ಮತ್ತೆ ತೀವ್ರಗೊಂಡಿರುವ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ (Crude Oil) ಬೆಲೆ ಭಾರಿ ಜಿಗಿತ ಕಂಡಿದೆ.
ಅಂತರರಾಷ್ಟ್ರೀಯ ಮಾನದಂಡವಾಗಿರುವ ಬ್ರೆಂಟ್ ಕಚ್ಚಾ ತೈಲ (Brent Crude) ಬೆಲೆಯು 1.2% ಕ್ಕೂ ಹೆಚ್ಚು ಏರಿಕೆಯಾಗಿದ್ದು, ಪ್ರತಿ ಬ್ಯಾರಲ್‌ಗೆ 92.09 ಡಾಲರ್‌ಗೆ(8,800 ರೂ.) ತಲುಪಿದೆ. ಇದು ಜೂನ್ ತಿಂಗಳ ಬಳಿಕ ದಾಖಲಾದ ಅತಿ ಹೆಚ್ಚಿನ ಬೆಲೆಯಾಗಿದೆ.
ಅದೇ ರೀತಿ ಅಮೆರಿಕದ ಪ್ರಮುಖ ಕಚ್ಚಾ ತೈಲ ಮಾನದಂಡವಾದ ಡಬ್ಲೂಟಿಐ (West Texas Intermediate) ದರ ಕೂಡ 1.1%ರಷ್ಟು ಏರಿಕೆಯಾಗಿದ್ದು, ಬ್ಯಾರಲ್‌ಗೆ 85.23 ಡಾಲರ್‌ಗೆ ಏರಿದೆ.
ಜಗತ್ತಿನ ಸುಮಾರು 20% ನಷ್ಟು ತೈಲ ಸಾಗಣೆಯಾಗುವ ಪ್ರಮುಖ ಸಮುದ್ರ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ (Strait of Hormuz) ಇರಾನ್ ತೈಲ ಟ್ಯಾಂಕರ್‌ಗಳನ್ನು ತಡೆದು ದಾಳಿ ನಡೆಸಿದೆ.
ಅಮೆರಿಕದ ಸೇನಾ ನೆಲೆಗಳು ಹಾಗೂ ರೇಡಾರ್ ಕೇಂದ್ರಗಳನ್ನು ಗುರಿಯಾಗಿಸಿ ಇರಾನ್ ಸರಣಿ ದಾಳಿ ನಡೆಸಿದ್ದು, ಪ್ರತಿಯಾಗಿ ಅಮೆರಿಕ ಕೂಡ ಇರಾನ್ ಆಸ್ತಿಗಳ ಮೇಲೆ ಬಾಂಬ್ ದಾಳಿ ನಡೆಸಿದೆ. ಇದರಿಂದಾಗಿ ಜಾಗತಿಕ ತೈಲ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗುವ ಭೀತಿ ಎದುರಾಗಿದೆ. ಇದನ್ನೂ ಓದಿ: ಅಮೆರಿಕದ ಹಲವು ಜೆಟ್‌ಗಳನ್ನು ನಾಶಪಡಿಸಿದ್ದೇವೆ: ಇರಾನ್
Every operational success in the Middle East begins and ends with service members focused on their missions, including the U.S. blockade against Iran. As of July 21, U.S. forces have redirected 8 commercial vessels and disabled 1 to fully enforce the blockade. pic.twitter.com/e9020BcaCQ
— U.S. Central Command (@CENTCOM) July 21, 2026
ಪರಿಣಾಮ ಏನು?
ಕಚ್ಚಾ ತೈಲ ಬೆಲೆ ಶೀಘ್ರವಾಗಿ ಏರುತ್ತಿರುವುದರಿಂದ ಜಾಗತಿಕ ಮಟ್ಟದಲ್ಲಿ ಸರಕು ಸಾಗಣೆ ವೆಚ್ಚ ಹೆಚ್ಚಾಗಲಿದ್ದು, ಹಣದುಬ್ಬರ (Inflation) ಮತ್ತೆ ಏರಿಕೆಯಾಗುವ ಆತಂಕ ಸೃಷ್ಟಿಯಾಗಿದೆ. ತೈಲ ಬೆಲೆ ಜಿಗಿತದಿಂದಾಗಿ ಏಷ್ಯನ್ ಷೇರು ಮಾರುಕಟ್ಟೆಗಳು ಹಾಗೂ ಹೂಡಿಕೆದಾರರಲ್ಲಿ ಅಸ್ಥಿರತೆ ಉಂಟಾಗಿದೆ.
ಇಂಧನ ಬೆಲೆ ಸತತವಾಗಿ 90 ಡಾಲರ್ ದಾಟಿ ಮುನ್ನುಗುತ್ತಿರುವುದು ಭಾರತ ಸೇರಿದಂತೆ ಪ್ರಮುಖ ಆಮದುದಾರ ದೇಶಗಳಿಗೆ ಆರ್ಥಿಕ ಹೊರೆಯಾಗಲಿದ್ದು, ಮುಂಬರುವ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳ ಮೇಲೆ ಪ್ರಭಾವ ಬೀರಬಹುದು. ಇದನ್ನೂ ಓದಿ: ಜೋರ್ಡಾನ್ ಮೇಲೆ ಇರಾನ್ ಭೀಕರ ದಾಳಿ – ಇಬ್ಬರು ಯುಎಸ್ ಸೈನಿಕರು ಸಾವು, ಓರ್ವ ನಾಪತ್ತೆ
ತೈಲ ದರ ನಿಗದಿ ಹೇಗೆ?
ಜಾಗತಿಕವಾಗಿ ತೈಲದ ಬಳಕೆ (ಬೇಡಿಕೆ) ಹೆಚ್ಚಾಗಿ, ಉತ್ಪಾದನೆ (ಪೂರೈಕೆ) ಕಡಿಮೆಯಾದಾಗ ಬೆಲೆ ಏರುತ್ತದೆ. ಉದಾಹರಣೆಗೆ ಕೋವಿಡ್ ಸಮಯದಲ್ಲಿ ವಿಶ್ವಾದ್ಯಂತ ಲಾಕ್‌ಡೌನ್ ಹೇರಲಾಗಿತ್ತು. ಬೇಡಿಕೆ ಕಡಿಮೆಯಾಗಿದ್ದರಿಂದ ಬೆಲೆಗಳು ಬಹಳ ಇಳಿಕೆಯಾಗಿದ್ದವು. ಈಗ ಪೂರೈಕೆಯಲ್ಲಿ ಸಮಸ್ಯೆಯಾಗುತ್ತಿರುವ ಕಾರಣ ಬೆಲೆ ಏರಿಕೆ ಕಾಣುತ್ತಿದೆ.
ತೈಲವು ಹೆಚ್ಚಾಗಿ ಕಮೋಡಿಟಿ ಎಕ್ಸ್ಚೇಂಜ್‌ಗಳಲ್ಲಿ ವ್ಯವಹಾರ ನಡೆಸುತ್ತವೆ. ಬ್ರೆಂಟ್ ಕಚ್ಚಾ ತೈಲ ಲಂಡನ್‌ನಲ್ಲಿರುವ ಇಂಟರ್‌ಕಾಂಟಿನೆಂಟಲ್ ಎಕ್ಸ್‌ಚೇಂಜ್‌ನಲ್ಲಿ, ಅಮೆರಿಕದ ಡಬ್ಲ್ಯೂಟಿಐ ತೈಲ ನ್ಯೂಯಾರ್ಕ್ ಮರ್ಕಂಟೈಲ್ ಎಕ್ಸ್‌ಚೇಂಜ್ ವ್ಯವಹಾರ ಮಾಡುತ್ತದೆ. ಇಲ್ಲಿ ಹೂಡಿಕೆದಾರರು ಭವಿಷ್ಯದಲ್ಲಿ ತೈಲದ ಬೆಲೆ ಎಷ್ಟಿರಬಹುದು ಎಂಬ ಅಂದಾಜಿನ ಮೇಲೆ ಒಪ್ಪಂದಗಳನ್ನು ಮಾಡಿಕೊಳ್ಳುತ್ತಾರೆ. ಈ ಫ್ಯೂಚರ್ಸ್ ಕಾಂಟ್ರಾಕ್ಟ್‌ಗಳು ಇಂದಿನ ಬೆಲೆಯನ್ನು ನಿರ್ಧರ ಮಾಡುತ್ತದೆ.
