ನವದೆಹಲಿ: ಮುಂಬರುವ ಏಷ್ಯನ್ ಗೇಮ್ಸ್ 2026ಕ್ಕೆ (Asian Games 2026) ಬಿಸಿಸಿಐ (BCCI) ಬಲಿಷ್ಠ ಭಾರತ ಮಹಿಳಾ ತಂಡವನ್ನು (India Womens Squad) ಪ್ರಕಟಿಸಿದೆ.
2026ರ ಟಿ20 ವಿಶ್ವಕಪ್‌ನಲ್ಲಿ ಗುಂಪು ಹಂತದಲ್ಲೇ ಸೋಲನುಭವಿಸಿದರೂ ಕೂಡ ನಾಯಕಿ ಹರ್ಮನ್ ಪ್ರೀತ್ ಕೌರ್ (Harmanpreet Kaur) ಏಷ್ಯನ್ ಗೇಮ್ಸ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಸ್ಮೃತಿ ಮಂಧಾನ (Smriti Mandhana) ಉಪನಾಯಕಿಯಾಗಿರಲಿದ್ದಾರೆ. ಇತ್ತೀಚೆಗೆ ವಿಶ್ವಕಪ್ ಆಡಿದ್ದ ತಂಡಕ್ಕೆ ಹೋಲಿಸಿದರೆ, ಈ ಏಷ್ಯನ್ ಗೇಮ್ಸ್ ತಂಡದಲ್ಲಿ ಕೇವಲ ಒಂದು ಬದಲಾವಣೆಯನ್ನು ಮಾತ್ರ ಮಾಡಲಾಗಿದೆ. ಇನ್ನುಳಿದಂತೆ ಅದೇ ಆಟಗಾರ್ತಿಯರನ್ನು ಉಳಿಸಿಕೊಳ್ಳಲಾಗಿದೆ. ಇದನ್ನೂ ಓದಿ: ಡಬಲ್ ಶಾಕ್ – ವಿಶ್ವಚಾಂಪಿಯನ್ ಭಾರತ ವೈಟ್‌ವಾಶ್, ಸರಣಿ ಗೆದ್ದು ಇತಿಹಾಸ ನಿರ್ಮಿಸಿದ ಐರ್ಲೆಂಡ್
🚨 News 🚨
India Women’s squad announced for the 2026 #AsianGames in September.
More Details ▶️ https://t.co/JagEsizajH#TeamIndia pic.twitter.com/jJGddVSr17
— BCCI Women (@BCCIWomen) June 30, 2026
ತಂಡದಿಂದ ವಿಕೆಟ್ ಕೀಪರ್ ಹಾಗೂ ಬ್ಯಾಟರ್ ಯಾಸ್ತಿಕಾ ಭಾಟಿಯಾ (Yastika Bhatia) ಅವರನ್ನ ಕೈಬಿಡಲಾಗಿದ್ದು, ಅವರ ಜಾಗಕ್ಕೆ ಜಿ.ಕಮಲಿನಿ ಅವರಿಗೆ ಅವಕಾಶ ನೀಡಲಾಗಿದೆ. ಆರ್‌ಸಿಬಿ ತಂಡದ ಸ್ಪಿನ್ನರ್ ಶ್ರೇಯಾಂಕಾ ಪಾಟೀಲ್ (Shreyanka Patil) ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಆದರೆ ಅವರು ಸಂಪೂರ್ಣ ಫಿಟ್ ಆದರೆ ಮಾತ್ರ ಪಂದ್ಯಗಳನ್ನು ಆಡಲಿದ್ದಾರೆ. ವಿಶ್ವಕಪ್ ವೇಳೆ ಶ್ರೇಯಾಂಕಾ ಗಾಯಗೊಂಡಾಗ ಅವರ ಬದಲಿ ಆಟಗಾರ್ತಿಯಾಗಿ ಪ್ರೇಮಾ ರಾವತ್ ಆಡಿದ್ದರು. ಆದರೆ ಈಗ ಶ್ರೇಯಾಂಕಾ ತಂಡಕ್ಕೆ ಮರಳಿರುವುದರಿಂದ ಪ್ರೇಮಾ ರಾವತ್ ಅವರನ್ನ ಕೈಬಿಡಲಾಗಿದೆ.
ಭಾರತ ಮಹಿಳಾ ತಂಡ:
ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ದೀಪ್ತಿ ಶರ್ಮಾ, ರಿಚಾ ಘೋಷ್ (WK), ಜಿ. ಕಮಲಿನಿ (WK), ಭಾರತಿ ಫುಲ್ಮಾಲಿ, ಶ್ರೀ ಚರಣಿ, ರೇಣುಕಾ ಠಾಕುರ್, ಶ್ರೇಯಾಂಕಾ ಪಾಟೀಲ್*, ರಾಧಾ ಯಾದವ್, ನಂದಿನಿ ಶರ್ಮಾ.
2026ರ ಸೆಪ್ಟೆಂಬರ್ 24 ರಿಂದ ಅಕ್ಟೋಬರ್ 3ರವರೆಗೆ ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ನಲ್ಲಿ ಟಿ20 ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ. ಇದರಲ್ಲಿ ಏಷ್ಯಾದ ಪ್ರಮುಖ ಕ್ರಿಕೆಟ್ ತಂಡಗಳಾದ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಸೇರಿದಂತೆ ಹಲವು ತಂಡಗಳು ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಭಾಗವಹಿಸಲಿವೆ.ಇದನ್ನೂ ಓದಿ: T20 World Cup | ಲಾರ್ಡ್‌ನಲ್ಲಿ ಆಸೀಸ್ ವನಿತೆಯರೇ ಲಾರ್ಡ್ – ಟೂರ್ನಿಯಿಂದ ಭಾರತ ನಾಕೌಟ್
