ಕೆಲವೊಮ್ಮೆ ಪ್ರೀತಿಪಾತ್ರರು ದೂರವಾದಾಗ ಮಾತ್ರ ನಿಜವಾದ ಪ್ರೀತಿ ಅರ್ಥ ಆಗುತ್ತೆ ಅಂತಾರಲ್ಲ ಹಾಗೆ ದರ್ಶನ್‌ಗೆ ಕುಟುಂಬದ ಮೌಲ್ಯ ಈಗ ತಿಳಿದಂತಿದೆ. ಕುಟುಂಬದಿಂದ ಬೇರ್ಪಟ್ಟು ಜೈಲಲ್ಲಿ ಏಕಾಂಗಿಯಾಗಿದ್ದು ದರ್ಶನ್ ಬಸವಳಿದಿದ್ದರೆ ಇತ್ತ ಮನೆಯಲ್ಲಿರೋ ವಿಜಯಲಕ್ಷ್ಮಿ ಆಗಾಗ ದರ್ಶನ್ ನೆನೆ ನೆನೆದು ಬಿಕ್ಕುತ್ತಾರೆ. ಇದೀಗ ದರ್ಶನ್ ಪತ್ನಿ ವಿಜಯಲಕ್ಷ್ಮಿ ಪತಿ ಜೊತೆಗಿನ ಒಂದು ಫೋಟೋ ಶೇರ್ ಮಾಡಿದ್ದಾರೆ. ಅದಕ್ಕೊಂದು ರೊಮ್ಯಾಂಟಿಕ್ ಹಾಡನ್ನು ಬ್ಯಾಗ್ರೌಂಡ್‌ನಲ್ಲಿ ಹಾಕಿದ್ದಾರೆ.
ಸೋಮವಾರ ಬೆಳ್ಳಗ್ಗೆಯೇ ಇನ್ಸ್ಟಾಗ್ರಾಂನಲ್ಲಿ ತಮ್ಮ ಜೋಡಿಯ ಫೋಟೋ ಶೇರ್ ಮಾಡಿರೋ ವಿಜಯಲಕ್ಷ್ಮಿ ಆ ಫೋಟೋಗೆ ತಾರಕ್ ಚಿತ್ರದ ‘ಹೇಗಾದರೂ ಮಾತಾಡು ನೀ’ ಹಾಡನ್ನ ಹಾಕಿದ್ದಾರೆ. ಜಯಂತ್ ಕಾಯ್ಕಿಣಿ ರಚಿತ ಗೀತೆಯಲ್ಲಿ ದರ್ಶನ್ ಸಾನ್ವಿ ಶ್ರೀವಾತ್ಸವ್ ಜೋಡಿ ಅಭಿನಯಿಸಿದೆ. ತಾರಕ್ ಚಿತ್ರದ ಹಾಡಿನ ಮಧುರ ಪಲ್ಲವಿಯನ್ನ ತಮ್ಮದೇ ಜೋಡಿ ಫೋಟೋ ಬ್ಯಾಗ್ರೌಂಡ್‌ನಲ್ಲಿ ಪೋಸ್ಟ್ ಮಾಡಿದ್ದಾರೆ ವಿಜಯಲಕ್ಷ್ಮಿ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಿಂದ ಬೇಲ್ ಕ್ಯಾನ್ಸಲ್ ಆದ ಬಳಿಕ ದರ್ಶನ್ ಪರಪ್ಪನ ಅಗ್ರಹಾರ ಸೇರಿದ್ದರು. 2025ರ ಆಗಸ್ಟ್ 14 ರಿಂದ ಇಲ್ಲಿಯವರೆಗೂ ಸತತವಾಗಿ ದರ್ಶನ್ ಜೈಲಲ್ಲೇ ಇದ್ದಾರೆ. ವಾರಕ್ಕೆರಡು ಬಾರಿ ಪತಿ ದರ್ಶನ್ ಭೇಟಿಯನ್ನು ವಿಜಯಲಕ್ಷ್ಮಿ ಮಿಸ್ ಮಾಡೋದಿಲ್ಲ. ಇದೀಗ ದರ್ಶನ್ ಹೆಚ್ಚು ನೆನಪಾದಂತಿದೆ. ಹೀಗಾಗಿ ಕಪಲ್ ಫೋಟೋವನ್ನ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿದ್ದಾರೆ.
