ಕಾರವಾರ: ತುಮಕೂರಿನಲ್ಲಿ (Tumakuru) ನಾಡಬಾಂಬ್ ಸ್ಫೋಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪಾಗಲ್ ಪ್ರೇಮಿ ನಾಗೇಂದ್ರನ ಪ್ರಕರಣಕ್ಕೆ ಸಂಬಂಧಿಸಿದಂತೆ 60 ಜನರನ್ನು ಅಂಕೋಲ (Ankola) ಪೊಲೀಸರು ವಿಚಾರಣೆ ನಡೆಸಿದ್ದಾರೆ. ಇದರಲ್ಲಿ ಮೂವರನ್ನು ವಶಕ್ಕೆ ಪಡೆಯಲಾಗಿದೆ.
ಹೊನ್ನಾವರದ (Honnavar) ಚಂದಾವರ ಮೂಲದ ಓರ್ವ ಹಾಗೂ ಸರಳೆಬೈಲಿನ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ನಾಗೇಂದ್ರನಿಗೆ ನಾಡಬಾಂಬ್ ತಯಾರಿಸಿ ಕೊಟ್ಟಿರುವ ಶಂಕೆಯ ಮೇಲೆ ವಶಕ್ಕೆ ಪಡೆಯಲಾಗಿದೆ. ಸ್ನೇಹಿತರು ಹಾಗೂ ಸಂಬಂಧಿಗಳ ವಿಚಾರಣೆ ವೇಳೆ ಮೂವರಿಂದ ನಾಡಬಾಂಬ್ ಖರೀದಿಸಿರುವುದು ದೃಢಪಟ್ಟಿದೆ. ಇದನ್ನೂ ಓದಿ: ಭಗ್ನಪ್ರೇಮಿಯ ಆತ್ಮಾಹುತಿ ಕೇಸ್ | ಒಟ್ಟಿಗೆ ಪ್ರಾಣಬಿಡಬೇಕೆಂದೇ 3 ನಾಡಬಾಂಬ್ ತಂದಿದ್ದ ನಾಗೇಂದ್ರ: ತನಿಖೆಯಲ್ಲಿ ಬಯಲು
ಬಾಂಬ್ ಖರೀದಿ ವೇಳೆ ನಾಗೇಂದ್ರ ಮೊಬೈಲ್ ಬಳಕೆ ಮಾಡದೇ ಖುದ್ದು ಭೇಟಿಯಾಗಿ ಮಾತುಕತೆ ನಡೆಸಿದ್ದ ಎಂದು ತಿಳಿದು ಬಂದಿದೆ. ವಶಕ್ಕೆ ಪಡೆದ ವ್ಯಕ್ತಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಅಂಕೋಲ ಠಾಣೆ ಪೊಲೀಸರು ಹಾಗೂ ತುಮಕೂರು ಪೊಲೀಸರು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಇದನ್ನೂ ಓದಿ: ನಾಗೇಂದ್ರ ಸಣ್ಣ ಸಣ್ಣ ವಿಚಾರಕ್ಕೂ ಹಲ್ಲೆ ಮಾಡ್ತಿದ್ದ – ಪಾಗಲ್ ಪ್ರೇಮಿಯ ಕರಾಳ ಮುಖ ಬಿಚ್ಚಿಟ್ಟ ಯುವತಿ
