ಇಸ್ಲಾಮಾಬಾದ್: ಹಫೀಜ್ ಸಯೀದ್ (Hafiz Saeed) 10,000 ಭಯೋತ್ಪಾದಕರನ್ನು ಕಾಶ್ಮೀರಕ್ಕೆ ಕಳುಹಿಸಿದ್ದಾನೆ ಎಂದು ಪಾಕಿಸ್ತಾನಿ ಧರ್ಮಗುರು (Pakistani Cleric) ನಾಲಿಗೆ ಹರಿಬಿಟ್ಟಿದ್ದಾನೆ.
ಪಾಕಿಸ್ತಾನಿ ಧರ್ಮಗುರು ನಾಸಿರ್ ಮದ್ನಿ (Naseer Madni) ಧರ್ಮೋಪದೇಶ ನೀಡುತ್ತಿದ್ದಾಗ ಹೃದಯಾಘಾತಕ್ಕೆ ಒಳಗಾಗಿದ್ದರು ಎಂದು ಪಾಕಿಸ್ತಾನ ವರದಿ ಮಾಡಿತ್ತು. ಈಗ ನಾಸಿರ್ ಸಾರ್ವಜನಿಕ ವೇದಿಕೆಗೆ ಮರಳಿದ್ದಾನೆ. ಇದನ್ನೂ ಓದಿ: ಕ್ಷಿಪಣಿ ದಾಳಿ; ಇರಾನ್ ಜೊತೆಗಿನ ಎಲ್ಲಾ ವ್ಯಾಪಾರ, ಹಣಕಾಸು ವ್ಯವಹಾರ ಸ್ಥಗಿತಗೊಳಿಸಿದ ಯುಎಇ
ಆಗಸ್ಟ್ 14 ರಂದು ಬಹಾವಲ್‌ನಗರದಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆಗೆ ಸಂಬಂಧಿಸಿದ ಸಭೆಯನ್ನುದ್ದೇಶಿಸಿ ಮಾತನಾಡುವಾಗ, ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಸಂಸ್ಥಾಪಕ ಹಫೀಜ್ ಸಯೀದ್ ಬಗ್ಗೆ ಹೇಳಿಕೆ ನೀಡಿದ್ದಾರೆ. ಆತ 10,000 ಭಯೋತ್ಪಾದಕರನ್ನು ಕಾಶ್ಮೀರಕ್ಕೆ ಕಳುಹಿಸಿದ್ದಾರೆ ಎಂದಿದ್ದಾನೆ.
ಸಯೀದ್ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದ ಸ್ಥಾಪಕನಾಗಿದ್ದು, ಭಾರತದ ವಿರುದ್ಧ ಕೆಲವು ಮಾರಕ ದಾಳಿಗಳನ್ನು ನಡೆಸಿದ ಆರೋಪ ಹೊತ್ತಿದ್ದಾನೆ.
ಅಲ್-ಖೈದಾ ಮತ್ತು ತಾಲಿಬಾನ್ ಜೊತೆಗಿನ ಸಂಪರ್ಕಕ್ಕಾಗಿ ವಿಶ್ವಸಂಸ್ಥೆಯು 2005 ರಲ್ಲಿ ಎಲ್‌ಇಟಿ ಮೇಲೆ ನಿರ್ಬಂಧ ಹೇರಿತು. ನಂತರ ಯುನೈಟೆಡ್ ಸ್ಟೇಟ್ಸ್ 2008 ರಲ್ಲಿ ಸಯೀದ್‌ನನ್ನು ಜಾಗತಿಕ ಭಯೋತ್ಪಾದನಾ ಪಟ್ಟಿಯಲ್ಲಿ ಸೇರಿಸಿತು. 26/11 ಮುಂಬೈ ದಾಳಿ ಸೇರಿದಂತೆ ಪ್ರಮುಖ ಭಯೋತ್ಪಾದಕ ದಾಳಿಗಳ ಕುರಿತ ಭಾರತದ ತನಿಖೆಗಳಲ್ಲಿ ಈತನ ಹೆಸರು ಕೂಡ ಕೇಳಿಬಂದಿದೆ. ಇದನ್ನೂ ಓದಿ: ಸೌದಿ ಅರೇಬಿಯಾದಲ್ಲಿ ಭಿಕ್ಷೆ ಬೇಡಬೇಡಿ: ತನ್ನ ನಾಗರಿಕರಿಗೆ ಪಾಕ್ ಖಡಕ್ ಎಚ್ಚರಿಕೆ
ಜುಲೈ ಆರಂಭದಲ್ಲಿ, ಪಹಲ್ಗಾಮ್ ಭಯೋತ್ಪಾದಕ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು ನ್ಯಾಯಾಲಯವು ಸಯೀದ್ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರು ಪಾಕಿಸ್ತಾನಿ ಆರೋಪಿಗಳ ವಿರುದ್ಧ ‘ಗೈರುಹಾಜರಿ’ ವಿಚಾರಣೆಗೆ ಮುಂಬೈ ಪೊಲೀಸರು ಔಪಚಾರಿಕವಾಗಿ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ತನಿಖೆಯಲ್ಲೂ ಸಯೀದ್ ಹೆಸರು ಕೇಳಿಬಂದಿದೆ. 2025ರ ಏಪ್ರಿಲ್‌ನಲ್ಲಿ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಗೆ 26 ಪ್ರವಾಸಿಗರು ಬಲಿಯಾಗಿದ್ದರು.

