ಬೆಂಗಳೂರು: ವೈಟ್‌ಫೀಲ್ಡ್( Whitefield) ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿ ಇಂದು ಭಾರೀ ವಾಹನ ದಟ್ಟಣೆ ಉಂಟಾಗುವ ಸಾಧ್ಯತೆಯಿದ್ದು, ಸಾರ್ವಜನಿಕರು ಹಾಗೂ ವಾಹನ ಸವಾರರು ಎಚ್ಚರಿಕೆ ವಹಿಸುವಂತೆ ಸಂಚಾರ ಪೊಲೀಸರು ಮಹತ್ವದ ಮಾರ್ಗಸೂಚಿ ಹೊರಡಿಸಿದ್ದಾರೆ.
ವಿವಿಧ ಬಡಾವಣೆಗಳಲ್ಲಿ ಇಂದು ಗಣೇಶ ಮೂರ್ತಿಗಳ ಭವ್ಯ ವಿಸರ್ಜನಾ ಮೆರವಣಿಗೆಗಳು(Ganesha Visarjan Procession) ಆಯೋಜನೆಗೊಂಡಿರುವ ಕಾರಣ, ಬೆಳಗ್ಗಿನಿಂದ ರಾತ್ರಿಯವರೆಗೆ ರಸ್ತೆಗಳಲ್ಲಿ ಜನಜಂಗುಳಿ ಹಾಗೂ ಟ್ರಾಫಿಕ್ ಜಾಮ್ ಎದುರಾಗಲಿದೆ. ಹೀಗಾಗಿ ವಾಹನ ಸವಾರರು ಸಾಧ್ಯವಾದಷ್ಟು ಪರ್ಯಾಯ ರಸ್ತೆಗಳನ್ನು ಬಳಸುವಂತೆ ಹಾಗೂ ಪ್ರಯಾಣವನ್ನು ಮುಂಚಿತವಾಗಿಯೇ ಯೋಜಿಸಿಕೊಳ್ಳುವಂತೆ ಪೊಲೀಸರು ಮನವಿ ಮಾಡಿದ್ದಾರೆ.
🚨 Traffic Advisory
ವಾಹನ ಸವಾರರು ಸಾಧ್ಯವಾದಷ್ಟು ಈ ರಸ್ತೆಗಳ ಬದಲಾಗಿ, ಪರ್ಯಾಯ ಮಾರ್ಗಗಳನ್ನು ಬಳಸಿ ಹಾಗೂ ಪ್ರಯಾಣವನ್ನು ಮುಂಚಿತವಾಗಿ ಯೋಜಿಸಿ. ಸ್ಥಳದಲ್ಲಿರುವ ಸಂಚಾರ ಪೊಲೀಸರ ಸೂಚನೆಗಳನ್ನು ಪಾಲಿಸಿ ಸಹಕರಿಸಿ.
Ganesha processions are underway today evening within Whitefield Traffic Police Station limits. Heavy… pic.twitter.com/dyI2drxIhs— WHITEFIELD TRAFFIC PS BTP (@wftrps) September 18, 2026
ಯಾವೆಲ್ಲ ರಸ್ತೆಗಳಲ್ಲಿ ಸಂಚಾರ ದಟ್ಟಣೆ?
ವರ್ತೂರು ಮುಖ್ಯರಸ್ತೆ, ವರ್ತೂರಿನಿಂದ ಗುಂಜೂರು ಸಂಪರ್ಕಿಸುವ ರಸ್ತೆ, ಬಳಗೆರೆ ರಸ್ತೆ, ದೊಮ್ಮಸಂದ್ರ ವೃತ್ತ, ಹಗಡೂರು, ನಲ್ಲೂರಹಳ್ಳಿ, ಸಿದ್ದಾಪುರ, ರಾಮಗೊಂಡನಹಳ್ಳಿ, ಅಂಬೇಡ್ಕರ್ ನಗರ ಮತ್ತು ಸುತ್ತಮುತ್ತಲಿನ ರಸ್ತೆಗಳು. ಇದನ್ನೂ ಓದಿ: ಬೆಂಗ್ಳೂರಲ್ಲಿ ಪಕ್ಕದ ಮನೆಯವನಿಂದಲೇ ಬಾಲಕನ ಕಿಡ್ನ್ಯಾಪ್ ಮಾಡಿ ಹತ್ಯೆ – ಆರೋಪಿ ಅರೆಸ್ಟ್

