ತಮಿಳುನಾಡಿನ ಚಿತ್ರೋದ್ಯಮದಲ್ಲಿ ಸದ್ಯ ಸಾಕಷ್ಟು ಸದ್ದು ಮಾಡುತ್ತಿರುವ ನಟ ಸೂರ್ಯ (Suriya ) ಅವರಿಗಾಗಿ ಸಿನಿಮಾವೊಂದನ್ನು ನಿರ್ಮಾಣ ಮಾಡುತ್ತಿದೆ ಕನ್ನಡದ ಖ್ಯಾತಿ ನಿರ್ಮಾಣ ಸಂಸ್ಥೆ ಹೊಂಬಾಳೆ. ಸದ್ದಿಲ್ಲದೇ ಸಿನಿಮಾದ ಮುಹೂರ್ತ ಕೂಡ ನಡೆದಿದೆ. ಈಗಾಗಲೇ ಸಾಕಷ್ಟು ಸ್ಟಾರ್ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಹೊಂಬಾಳೆ (Hombale) ಈ ಸಿನಿಮಾಗೆ ನೂರಾರು ಕೋಟಿ ರೂಪಾಯಿ ಬಂಡವಾಳ ಹೂಡಿದೆ ಎಂದು ಹೇಳಲಾಗುತ್ತಿದೆ.
ಟಿ. ಜೆ ಜ್ಞಾನವೇಲು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಈ ಕಾರಣಕ್ಕಾಗಿ ಸಿನಿಮಾ ಕುತೂಹಲ ಮೂಡಿಸಿದೆ. ಈ ಹಿಂದೆ ಜ್ಞಾನವೇಲು ಮತ್ತು ಸೂರ್ಯ ಕಾಂಬಿನೇಷನ್ ನಲ್ಲಿ ಜೈ ಭೀಮ್(Jai Bhim) ಸಿನಿಮಾ ಮೂಡಿ ಬಂದಿತ್ತು. ಅದು ಬಾಕ್ಸ್ ಆಫೀಸಿನಲ್ಲೂ ಕೂಡ ಹಿಟ್ ಆಗಿತ್ತು. ಈ ಸಿನಿಮಾ ಬಗ್ಗೆಯೂ ಕೂಡ ನಿರೀಕ್ಷೆ ಇಡಲಾಗಿದೆ. ಇದನ್ನೂ ಓದಿ: ದರ್ಶನ್ ನೆನೆದು `ಹೇಗಾದರೂ ಮಾತಾಡು ನೀ’ ಎಂದ ವಿಜಯಲಕ್ಷ್ಮಿ
The next chapter… #SuriyaXHombale
He built it.
Frame by frame. Film by film. Fight by fight.Roles that bled truth.
Characters that carried the weight of real lives.
A journey defined by courage, conviction, and craft.Three decades of truth on screen.
Countless hearts… pic.twitter.com/HoZOgQRbC7— Hombale Films (@hombalefilms) June 29, 2026
ಈ ಕುರಿತಂತೆ ಹೊಂಬಾಳೆ ಸಂಸ್ಥೆಯು ಅಧಿಕೃತವಾಗಿ ಸಿನಿಮಾ ಘೋಷಣೆ ಮಾಡಿದೆ. ಮುಂದಿನ ಅಧ್ಯಾಯ ಸೂರ್ಯ ಮತ್ತು ಹೊಂಬಾಳೆ ಸಂಸ್ಥೆಯೊಂದಿಗೆ ಅಂತ ಹಂಚಿಕೊಂಡಿದೆ. ಸದ್ಯದಲ್ಲೇ ಸಿನಿಮಾ ಕುರಿತಂತೆ ಮತ್ತಷ್ಟು ಮಾಹಿತಿಯನ್ನು ಕೊಡುವುದಾಗಿ ನಿರ್ಮಾಣ ಸಂಸ್ಥೆ ಹೇಳಿಕೆ ನೀಡಿದೆ.
