ಆಕಾಶ್ ಪಿಕ್ಚರ್ಸ್ ಲಾಂಛನದಲ್ಲಿ ಪ್ರಕಾಶ್ ಬುದ್ದೂರು ನಿರ್ಮಿಸುತ್ತಿರುವ, ಪಿ.ಸಿ.ಶೇಖರ್ ನಿರ್ದೇಶಿಸುತ್ತಿರುವ `ಮಹಾನ್’ ಚಿತ್ರದ ವಿಶೇಷ ಪಾತ್ರದಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ (Shivarajkumar) ಅಭಿನಯಿಸಿದ್ದಾರೆ. ವಿಜಯ್ ರಾಘವೇಂದ್ರ (Vijay Raghavendra) ಈ ಚಿತ್ರದ ನಾಯಕರಾಗಿ ನಟಿಸಿದ್ದಾರೆ. ಬಹಳ ವರ್ಷಗಳ ನಂತರ ಶಿವರಾಜ್‌ಕುಮಾರ್ ಹಾಗೂ ವಿಜಯ ರಾಘವೇಂದ್ರ ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಮಹಾನ್ (Mahaan Movie) ರೈತರ ಕುರಿತಾದ ಕಥಾಹಂದರ ಹೊಂದಿರುವ ಚಿತ್ರ. ಈ ಚಿತ್ರದಲ್ಲಿ ಬರುವ ಪ್ರತಿಯೊಂದು ಪಾತ್ರವೂ ಮುಖ್ಯ ಪಾತ್ರಗಳಾಗಿರುತ್ತದೆ. ಮನೆಯಲ್ಲಿ ನಾವೇನಾದರೂ ತಪ್ಪು ಮಾಡಿದರೆ, ನಮಗೆ ಬುದ್ದಿ ಹೇಳಲು ತಂದೆ-ತಾಯಿ ಇರುತ್ತಾರೆ. ಅಂತಹುದೇ ಪರಿಸ್ಥಿತಿ ಸಮಾಜದಲ್ಲಿ ನಿರ್ಮಾಣವಾದಾಗ ಅಲ್ಲಿನ ತೊಂದರೆಗಳನ್ನು ತಿದ್ದಲು ಮಹಾನ್ ವ್ಯಕ್ತಿಯ ಅಗತ್ಯವಿರುತ್ತದೆ. ಅಂತಹ ಮಹಾನ್ ವ್ಯಕ್ತಿಯ ಪಾತ್ರದಲ್ಲಿ ಶಿವರಾಜ್‌ಕುಮಾರ್ ಅಭಿನಯಿಸಿದ್ದಾರೆ. ಇದನ್ನೂ ಓದಿ: ಚಾಕು ಇರಿತ ಘಟನೆಯ ಇಂಚಿಂಚೂ ವಿವರ ಬಿಚ್ಚಿಟ್ಟ ಸೈಫ್ ಅಲಿ ಖಾನ್
ಮಹಾನ್ ಚಿತ್ರದಲ್ಲಿ ಹಿರಿಯ ವಕೀಲರಾಗಿ ಶಿವರಾಜ್‌ಕುಮಾರ್ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಈ ಪಾತ್ರ ತುಂಬಾ ಪ್ರಮುಖವಾದದ್ದು. ಎಲ್ಲಾ ನಿರ್ದೇಶಕರಿಗೂ ಶಿವರಾಜ್‌ಕುಮಾರ್ ಅವರ ಚಿತ್ರ ನಿರ್ದೇಶನ ಮಾಡುವ ಆಸೆ ಇರುತ್ತದೆ. ನನಗೂ ಅದು ಬಹಳ ದಿನಗಳ ಹಂಬಲ. ಆ ಆಸೆ ಈಗ ಈಡೇರಿದೆ. ಶಿವರಾಜ್‌ಕುಮಾರ್ ಅವರ ಅಭಿನಯ ಪ್ರಕಾಶ್ ಬುದ್ದೂರು ಅವರಿಗೂ ತುಂಬಾ ಸಂತೋಷ ತಂದಿದೆ. ಇಡೀ ಮಹಾನ್ ಚಿತ್ರತಂಡ ಶಿವರಾಜ್‌ಕುಮಾರ್ ಅವರಿಗೆ ತುಂಬು ಹೃದಯದ ಧನ್ಯವಾದಗಳು ಎಂದು ನಿರ್ದೇಶಕ ಪಿ.ಸಿ.ಶೇಖರ್ ತಿಳಿಸಿದ್ದಾರೆ. ಮಹಾನ್ ಬಹು ತಾರಾಬಳಗದ ಚಿತ್ರವಾಗಿದ್ದು, ಶಿವರಾಜ್‌ಕುಮಾರ್, ವಿಜಯ ರಾಘವೇಂದ್ರ, ರಾಧಿಕಾ ನಾರಾಯಣ್, ಮಿತ್ರ, ನಮ್ರತಾ ಗೌಡ, ವರ್ಷ ಬೊಳ್ಳಮ್ಮ, ಕಿರಣ್ ಶ್ರೀನಿವಾಸ್ ಸಹ ಆಭಿನಯಿಸಿದ್ದಾರೆ.
