– ಸತತ 3 ಗಂಟೆ ವಿಚಾರಣೆ ನಡೆಸಿದ ಪೊಲೀಸರು
ಲಕ್ನೋ: ರಾಮಮಂದಿರ ಕಾಣಿಕೆಗಳ ಕಳ್ಳತನದಲ್ಲಿ (Ram Mandir Donation Theft) ನನ್ನ ಪಾತ್ರ ಇಲ್ಲ ಎಂದು ಪೊಲೀಸರ ವಿಚಾರಣೆ ವೇಳೆ ಶ್ರೀರಾಮ ಜನ್ಮಭೂಮಿ ಟ್ರಸ್ಟ್ ಮಾಜಿ ಪ್ರ.ಕಾರ್ಯದರ್ಶಿ ಚಂಪತ್ ರೈ (Champat Rai) ಸ್ಪಷ್ಟಪಡಿಸಿದ್ದಾರೆ.
ದೇಣಿಗೆ ಕಳ್ಳತನದಲ್ಲಿ ನನ್ನ ಪಾತ್ರ ಇಲ್ಲ. ಟಿನ್ನು ಯಾದವ್ ಹೀಗೆ ಮಾಡಬಹುದು ಎಂದು ಅಂದುಕೊಂಡಿರಲಿಲ್ಲ. ನನ್ನ ಕಣ್ತುಪ್ಪಿನಿಂದ ಈ ಅಕ್ರಮ ನಡೆದಿದೆ ಎಂದು ರೈ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರಾಮ ಮಂದಿರ ದೇಣಿಗೆ ದುರ್ಬಳಕೆ ಕೇಸ್ – ಎಲ್ಲಾ 8 ಆರೋಪಿಗಳು ಜೈಲಿಗೆ
ದೇಣಿಗೆ ಸಂಗ್ರಹದಲ್ಲಿ ಯಾವುದೇ ಅಕ್ರಮಗಳು ನಡೆಯದಂತೆ ನೋಡಿಕೊಳ್ಳುವುದು ನನ್ನ ಜವಾಬ್ದಾರಿಯಾಗಿದೆ. ತಪ್ಪು ನಡೆದಿರುವುದು ತಿಳಿದ ತಕ್ಷಣ ಕ್ರಮ ಕೈಗೊಂಡಿದ್ದೇನೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಅದಾಗ್ಯೂ ಹಲವು ಪ್ರಶ್ನೆಗಳಿಗೆ ಉತ್ತರಿಸಲು ಚಂಪತ್ ರೈ ವಿಫಲರಾಗಿದ್ದಾರೆ. ಬ್ಯಾಂಕ್ ವರ್ಗಾವಣೆಗಳು, ಭೂಮಿ ಖರೀದಿ ಸೇರಿದಂತೆ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿಲ್ಲ.
ಜೂನ್ 27 ರಂದು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಕೆಳಗಿಳಿದ ನಂತರ ಮತ್ತು ದೇಣಿಗೆ ಕಳ್ಳತನ ಪ್ರಕರಣದಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ ನಂತರ ರೈ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳುತ್ತಿರುವುದು ಇದೇ ಮೊದಲು. ಚಂಪತ್ ರೈ ಅವರು ದೇವಾಲಯವನ್ನು ನಿರ್ವಹಿಸುವ ಸ್ವತಂತ್ರ ಸಂಸ್ಥೆಯಾದ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಇದನ್ನೂ ಓದಿ: ರಾಮನ ದೇಣಿಗೆ ಕದ್ದವರ ಪರ ವಕಾಲತ್ತು ವಹಿಸಿದ್ರೆ 5 ಲಕ್ಷ ದಂಡ – ಬಾರ್ ಅಸೋಸಿಯೇಷನ್ ಖಡಕ್ ಎಚ್ಚರಿಕೆ
