ಪ್ರೇಮದ ಊರಲಿ ಹಾಡಿನ ಮೂಲಕ ಜನರ ಹೃದಯ ಗೆದ್ದಿರುವ ʻಪ್ರೇಮದ ಊರಲಿʼ (Premada Oorali) ಚಿತ್ರದಿಂದ ಮತ್ತೊಂದು ಪ್ರೀತಿ ತುಂಬಿದ ಹಾಡು ʻಏರು ಪೇರು ಹೃದಯಾʼ (Eru Peru Hrudaya) ಬಿಡುಗಡೆಯಾಗಿದೆ. ಶ್ರೀರಾಮ್ ಮತ್ತು ರಮಿಕಾ ಶಿವು ಕ್ಯೂಟ್ ಮತ್ತು ರೋಮ್ಯಾಂಟಿಕ್ ಆಗಿ ಕಾಣಿಸಿಕೊಂಡಿರುವ ಈ ಹಾಡು ಈಗಾಗಲೇ ಎಲ್ಲರ ಮನಸ್ಸನ್ನು ಗೆಲ್ಲುತ್ತಿದೆ.

ಸುನಾದ್ ಗೌತಮ್ ಸಂಗೀತ ಸಂಯೋಜಿಸಿರುವ ಈ ಹಾಡಿಗೆ ನಿರ್ದೇಶಕ ಮನೋಜ್ ಕುಮಾರ್ ಹಾಗೂ ನವೀನ್ ವಿಶಾರದ ಜೊತೆಯಾಗಿ ಅರ್ಥಪೂರ್ಣ ಸಾಹಿತ್ಯ ಬರೆದಿದ್ದಾರೆ. ಗಾಯಕಿ ನಿನಾದ ನಾಯಕ್ ಅವರ ಮಧುರ ಧ್ವನಿ ಕಿವಿಗೆ ಇಂಪು ನೀಡುತ್ತಿದೆ.
ʻಪ್ರೇಮದ ಊರಲಿʼ ಚಿತ್ರವು ಉತ್ತಮ ಸಂಗೀತಕ್ಕೆ ಆದ್ಯತೆ ನೀಡುವ ಸುಂದರ ಮ್ಯೂಸಿಕಲ್ ಲವ್ ಸ್ಟೋರಿ ಆಗಿ ಮೂಡಿ ಬಂದಿದೆ. ಹಾಡುಗಳ ಮೂಲಕವೇ ಸದ್ಯ ಸಿನಿಮಾ ಪ್ರಿಯರ ಗಮನ ಸೆಳೆಯುತ್ತಿರುವ ಈ ರೋಮ್ಯಾಂಟಿಕ್ ಕಥಾಹಂದರದ ಪ್ರೇಮದ ಊರಲಿ ಸಿನಿಮಾ ಶೀಘ್ರದಲ್ಲೇ ಚಿತ್ರಮಂದಿರಗಳಲ್ಲಿ ತೆರೆಗೆ ಬರಲು ಸಿದ್ಧವಾಗಿದೆ.
