– ಬೆಂಗಳೂರಲ್ಲಿ ಟ್ರೇಸ್ ಆಗದ 24 ಲಕ್ಷ ಮತದಾರರು
ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಎಸ್‌ಐಆರ್ (SIR) ಮತ್ತಷ್ಟು ಚುರುಕು ಪಡೆದಿದೆ.
ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಸುದ್ದಿಗೋಷ್ಠಿ ನಡೆಸಿ, 24 ಜಿಲ್ಲೆಗಳಲ್ಲಿ 100% ವಿತರಣೆಯಾಗಿದೆ. ಇನ್ನುಳಿದ ಜಿಲ್ಲೆಗಳಲ್ಲಿ ಶೀಘ್ರವೇ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದಾರೆ. ಅಲ್ಲದೆ, 5,87,457 ಜನ ಟ್ರೇಸ್ ಮಾಡೋಕೆ ಸಾಧ್ಯವಾಗದೇ ಇದ್ದವರು ಇದ್ದು, 9,81,642 ಜನ ಸಾವನ್ನಪ್ಪಿದ್ದಾರೆ. 26,32,229 ಶಿಫ್ಟ್ ಆಗಿದ್ದಾರೆ. ಬಿಎಲ್ ಓಗಳಿಂದ ತಪ್ಪಾಗಿದ್ರೇ ಆಬ್ಸೆಂಟ್ ಆಗಿದ್ದಲ್ಲಿ ದಯವಿಟ್ಟು ತಿಳಿಸಿ. ಆಗಸ್ಟ್ 8 ರ ಮುಂಚೆ ಗಣತಿ ನಮೂನೆಯನ್ನು ದಯವಿಟ್ಟು ನೀಡಿ. ಇಲ್ಲದೇ ಇದ್ದರೆ ಪಟ್ಟಿ ತಯಾರಾಗುವುದಿಲ್ಲ ಅಂತ ಮನವಿ ಮಾಡಿದರು.
ಬೆಂಗಳೂರಿನಲ್ಲಿ 23 ಲಕ್ಷ 86 ಸಾವಿರದಷ್ಟು ಜನರನ್ನು ಟ್ರೇಸ್ ಮಾಡೋದು ಕಷ್ಟವಾಗುತ್ತಿದೆ. ಬೆಂಗಳೂರಿನಲ್ಲಿ ಬೊಮ್ಮನಹಳ್ಳಿ, ವಿಜಯನಗರ, ಗಾಂಧಿನಗರ, ಶಾಂತಿನಗರ ರಾಜಾಜಿನಗರ ಸೇರಿದಂತೆ ಬಹುತೇಕ ಕ್ಷೇತ್ರದಲ್ಲಿ ಎಸ್‌ಐಆರ್ ಪ್ರಕ್ರಿಯೆ ನಿಧಾನಗತಿ ಸಾಗುತ್ತಿದೆ. ಕ್ವಾಲಿಟಿ ಚೆಕ್ಕಿಂಗ್ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇವೆ. ವಿಧಾನಸಭಾ ಕ್ಷೇತ್ರದಿಂದ ಶಿಫ್ಟ್ ಆದವರು ಪ್ರತ್ಯೇಕವಾಗಿ ಫಾರ್ಮ್-6 ನ್ನು ಭರ್ತಿ ಮಾಡಬೇಕಾಗುತ್ತೆ. ಎರಡನೇ ಹಂತದಲ್ಲಿ ಇದನ್ನು ಆರಂಭಿಸುತ್ತೇವೆ. ರಾಜಕೀಯ ನಾಯಕರು ಸಲಹೆಗಳು, ದೂರುಗಳು ಇದ್ದರೆ ಹೇಳಬಹುದು ಎಂದರು.
ಇದೇ ವೇಳೆ, 12 ಜನ ಕರ್ತವ್ಯನಿರತ ಬಿಎಲ್‌ಓ ಸಾವನ್ನಪ್ಪಿದ್ದಾರೆ. ಹೀಗಾಗಿ ಅವರ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಿ ಜನರಿಗೆ ಮಾಹಿತಿ ನೀಡಲಿದ್ದೇವೆ ಎಂದು ಅನ್ಬುಕುಮಾರ್ ತಿಳಿಸಿದರು.
