CinemaLatestMain PostSandalwood

ಮಾನಸಿಕವಾಗಿ, ದೈಹಿಕವಾಗಿ ಫಿಟ್ ಆಗಿರೋದು ಮುಖ್ಯ- ಸಂಯುಕ್ತಾ ಹಾಟ್ ಫೋಟೋ ವೈರಲ್

ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಸಂಯುಕ್ತಾ ಹೆಗಡೆ ಸದಾ ಒಂದಲ್ಲ ಒಂದು ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಲ್ಲಿರುತ್ತಾರೆ. ಆದರೆ ಇದೀಗ ಅವರು ಹಾಟ್ ಫೋಟೋವೊಂದನ್ನು ಶೇರ್ ಮಾಡಿಕೊಂಡು ತಮ್ಮ ದೇಹದ ಕುರಿತಾಗಿ ಬರೆದುಕೊಳ್ಳುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

ಸಾಕಷ್ಟು ನೆಗೆಟಿವ್ ಕಾಮೆಂಟ್ಸ್, ಟ್ರೋಲ್ಸ್‍ಗಳನ್ನು ಎದುರಿಸಿದ್ದಾರೆ. ಅವರ ದೇಹದ ಬಗ್ಗೆಯೂ ಕೂಡ ಕಾಮೆಂಟ್ ಮಾಡಲಾಗಿದೆಯಂತೆ. ಹೀಗಾಗಿ ಸಂಯುಕ್ತಾ ವಿಶೇಷವಾದ ಪೋಸ್ಟ್‌ನೊಂದಿಗೆ ಅವರ ಬೇಸರವನ್ನು ಹೊರಹಾಕಿದ್ದಾರೆ. ದನ್ನೂ ಓದಿ: ಒಳ್ಳೆಯ ಫಲಿತಾಂಶ ಬರುವ ನಿರೀಕ್ಷೆ ಇದೆ: ಬೊಮ್ಮಾಯಿ

 

View this post on Instagram

 

A post shared by Samyuktha Hegde (@samyuktha_hegde)

ನಾನು ತೆಳ್ಳಗಿರುವುದು ಎಷ್ಟು ಅದೃಷ್ಟ ಎಂದು ನಿರಂತರವಾಗಿ ತಿಳಿಸಿಕೊಟ್ಟಿದ್ದಕ್ಕೆ, ನನ್ನ ದೇಹದ ಪ್ರಕೃತಿಯ ಬಗ್ಗೆ ಗಮನಹರಿಸದಿರುವುದಕ್ಕೆ, ನಾನು ಫಿಟ್ ಆಗಿರಲು ಮಾಡುವ ಎಲ್ಲ ಪ್ರಯತ್ನಗಳನ್ನು ತಿರಸ್ಕರಿಸಿ ನಾನು ಪುಣ್ಯ ಮಾಡಿದ್ದೇನೆ ಎಂದು ಹೇಳುತ್ತಿರುವುದಕ್ಕೆ, 45 ಕೆಜಿಯಿಂದ 50ಕೆಜಿ ಆಗುವವರೆಗೆ ನಾನು ಮಾಡಿದ ಪ್ರಯತ್ನಗಳನ್ನು ತಿರಸ್ಕರಿಸುವುದಕ್ಕೆ, ನೀನು ಏನು ಬೇಕಾದರೂ ತಿನ್ನು, ಅದು ನಿನ್ನ ದೇಹ ತೋರಿಸಲ್ಲ ಎಂದು ಹೇಳಿದ್ದಕ್ಕೆ, ತೆಳ್ಳಗಿರುವವರು ಫಿಟ್ ಆಗಿರೋದು ಲೆಕ್ಕಕ್ಕೆ ಬರೋದಿಲ್ಲ, ದಪ್ಪಗಿರುವವರು ಫಿಟ್ ಆಗಿರೋದು ಮಾತ್ರ ಲೆಕ್ಕಕ್ಕೆ ಬರುತ್ತದೆ ಎಂದು ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು.

Samyuktha Hegde

ಶಾಂತಿಯಿಂದ ಪ್ರತಿಯೊಬ್ಬರು ಒಂದೊಂದು ಹೋರಾಟ ಮಾಡುತ್ತಿರುತ್ತಾರೆ. ನೀವು ಏನು ನೋಡುತ್ತೀರೋ ಅದರ ಆಧಾರದ ಮೇಲೆ ನಿರ್ಣಯಕ್ಕೆ ಬರಬೇಡಿ. ಕೆಲವರು ತೂಕ ಕಳೆದುಕೊಳ್ಳಲು ಹೋರಾಟ ಮಾಡಿದರೆ, ಕೆಲವರು ತೂಕ ಹೆಚ್ಚಿಸಿಕೊಳ್ಳಲು ಹೋರಾಟ ಮಾಡುತ್ತಿರುತ್ತಾರೆ. ಕೆಲವರು ಫಿಟ್ ಆಗಿರಲು ನಿರಂತರ ಅವರ ಪ್ರಯತ್ನ ಹಾಕುತ್ತಿರುತ್ತಾರೆ. ಯಾರೂ ಅದೃಷ್ಟವಂತರಲ್ಲ. ಎಲ್ಲರೂ ಹುಟ್ಟಿನಿಂದ ಪರ್ಫೆಕ್ಟ್ ಅಲ್ಲ, ಪರಿಪೂರ್ಣತೆಯನ್ನು ಪಡೆಯಲು ಯಾವುದೇ ಪ್ರಯಾಣವಿಲ್ಲ ಏಕೆಂದರೆ ಅದು ಅಸ್ತಿತ್ವದಲ್ಲಿಲ್ಲ. ಮಾನಸಿಕವಾಗಿ, ದೈಹಿಕವಾಗಿ ಫಿಟ್ ಆಗಿರೋದು ಮುಖ್ಯ. ನಿಮ್ಮ ದೇಹವನ್ನು ಪೋಷಿಸುವುದು, ತರಬೇತಿ ನೀಡುವುದು ಮುಖ್ಯ ಎಂದು ಸಂಯುಕ್ತಾ ಇನ್‍ಸ್ಟಾಗ್ರಮ್‍ನಲ್ಲಿ ಬರೆದುಕೊಂಡು ಹಾಟ್ ಆಗಿರುವ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗೆ ನೆಟ್ಟಿಗರು ಸಾಕಷ್ಟು ಕಾಮೆಂಟ್ ಮಾಡಿದ್ದಾರೆ.

Leave a Reply

Your email address will not be published.

Back to top button