ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆ ಹಿನ್ನೆಲೆಯಲ್ಲಿ ಪ್ರವಾಸಿಗರ (Tourists) ಹಿತದೃಷ್ಟಿಯಿಂದ ಅಂಕೋಲ ತಾಲೂಕಿನ ವಿಭೂತಿ ಜಲಪಾತಕ್ಕೆ (Vibhooti Falls) ಪ್ರವಾಸಿಗರಿಗೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲ (Ankola) ತಾಲೂಕಿನ ವಿಭೂತಿ ಫಾಲ್ಸ್ ಯಾಣದ ಸಮೀಪ ಬರುತ್ತದೆ. ಹೆಚ್ಚು ಪ್ರವಾಸಿಗರು ಬರುವುದರಿಂದ ಅಪಾಯ ಸಾಧ್ಯತೆ ಹಿನ್ನಲೆಯಲ್ಲಿ ಜಿಲ್ಲಾಡಳಿತದ ಸೂಚನೆಮೇರೆಗೆ ಹೊಸಕಂಬಿ ಅರಣ್ಯ ಇಲಾಖೆ ವತಿಯಿಂದ ನಿರ್ಬಂಧ ಆದೇಶ ಮಾಡಲಾಗಿದೆ. ಇದನ್ನೂ ಓದಿ: ನರಮೇಧವನ್ನು ಸೇನಾ ಕಾರ್ಯಾಚರಣೆ ಎನ್ನಲಾಗದು – ವಿಶ್ವಸಂಸ್ಥೆಯಲ್ಲಿ ಪಾಕ್ ವಿರುದ್ಧ ಭಾರತ ಕಿಡಿ
ಮಳೆಗಾಲದಲ್ಲಿ ದುಮ್ಮಿಕ್ಕುವ ವಿಭೂತಿ ಜಲಪಾತ ಪ್ರವಾಸಿಗರನ್ನ ಹೆಚ್ಚು ಸೆಳೆಯುತ್ತದೆ. ಪ್ರಸಿದ್ಧ ಯಾಣ ಭಾಗದಲ್ಲಿ ಇರುವುದರಿಂದ ಪ್ರವಾಸಿಗರು ಹೆಚ್ಚು ಬರುತಿದ್ದರು. ಇದನ್ನೂ ಓದಿ: ಜಪಾನ್ ಆಯ್ತು, ಈಗ ನೇಪಾಳದಿಂದಲೂ ಭಾರತದ ಮಾವಿನಹಣ್ಣಿಗೆ ನಿರ್ಬಂಧ
ಈ ಹಿಂದೆ ಏಕಾಏಕಿ ಫಾಲ್ಸ್ಗೆ ನೀರುಬಂದು ಪ್ರವಾಸಿಗರಿಗೆ ಜೀವ ಹಾನಿ ಸಂಭವಿಸಿದ ಹಿನ್ನಲೆಯಲ್ಲಿ ಅರಣ್ಯ ಇಲಾಖೆಯಿಂದ ಈ ನಿರ್ಧಾರ ಕೈಗೊಂಡಿದ್ದು, ಪ್ರತಿ ವರ್ಷದಂತೆ ಈ ವರ್ಷವೂ ಜೂನ್ ಎರಡನೇ ವಾರದಲ್ಲೇ ನಿರ್ಬಂಧ ಹೇರಲಾಗಿದೆ. ಇದನ್ನೂ ಓದಿ: 12 ವರ್ಷ ಪ್ರಧಾನ ಸೇವಕರಾಗಿ ಮೋದಿ ಸೇವೆ; ರಾಜ್ಯದ ದೇವಸ್ಥಾನಗಳಲ್ಲಿ ನಾಳೆ ವಿಶೇಷ ಪೂಜೆ
