ಬೆಂಗಳೂರು: ಕಾಲೇಜಿಗೆ ನುಗ್ಗಿ ತಂದೆಯೇ ಮಗಳಿಗೆ ಚಾಕು ಇರಿದ ಘಟನೆ ರಾಜಾನುಕುಂಟೆಯಲ್ಲಿ (Rajanukunte) ನಡೆದಿದೆ.
ಖಾಸಗಿ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದ ಲಕ್ಷ್ಮಿ ದುರ್ಗ ಚಾಕು ಇರಿತಕ್ಕೊಳಗಾದ ಯುವತಿ. ಆಕೆಯ ತಂದೆ ನಾಗೇಂದ್ರ ಚಾಕು ಇರಿದ ಆರೋಪಿಯಾಗಿದ್ದಾನೆ. ಜು.25ರ ಮಧ್ಯಾಹ್ನ 3:00 ಗಂಟೆ ವೇಳೆಗೆ ಕಾಲೇಜಿನ ಪ್ರಾಂಶುಪಾಲರ ಕೊಠಡಿಯಲ್ಲೇ ಕೃತ್ಯ ನಡೆದಿದೆ. ಇದನ್ನೂ ಓದಿ: ಮಹಿಳೆ ಜೊತೆ ಅಸಭ್ಯ ವರ್ತನೆ ಆರೋಪ – ಹೆಡ್ ಕಾನ್ಸ್‌ಟೇಬಲ್‌ಗೆ ಹಿಗ್ಗಾಮುಗ್ಗ ಥಳಿತ
ಆರೋಪಿ ಕಾಲೇಜಿಗೆ ಬಂದು ಮಗಳನ್ನು ನೋಡಬೇಕು ಎಂದಿದ್ದ. ಬಳಿಕ ಕ್ಯಾಬಿನ್‌ಗೆ ನುಗ್ಗಿ ಮಗಳ ಹೊಟ್ಟೆ, ಎದೆ ಕುತ್ತಿಗೆಗೆ ಇರಿದು ಪರಾರಿಯಾಗಿದ್ದಾನೆ. ಈ ಸಂಬಂಧ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬೆಂಗಳೂರಿನ ಐಪಿಎಸ್ ಲೇಔಟ್‌ನಲ್ಲಿ ರೇವ್‌ಪಾರ್ಟಿ – ಮೂವರು ಅರೆಸ್ಟ್, ಮಹಿಳೆಯರ ರಕ್ಷಣೆ

