ವಿಜಯ್ (TVK Vijay) ಬಳಿಕ ತಮಿಳುನಾಡಲ್ಲಿ (Tamilnadu) ಸಿನಿಮಾ ನಟರ ರಾಜಕೀಯ ಪ್ರವೇಶ ಆಸಕ್ತಿ ಗರಿಗೆದರಿದೆ ಎನ್ನಲಾಗುತ್ತಿತ್ತು. ಅದಕ್ಕೆ ಸಾಕ್ಷಿ ಎನ್ನುವಂತೆ ಧನುಷ್ ನಡವಳಿಕೆ ಇನ್ನಷ್ಟು ಪುಷ್ಠಿ ನೀಡುವಂತಿದೆ. ಭಾನುವಾರ (ಜು.26) ಚೆನೈನಲ್ಲಿ ಅಭಿಮಾನಿಗಳು ಆಯೋಜಿಸಿದ್ದ ಬೃಹತ್ ರಕ್ತದಾನ ಕಾರ್ಯಕ್ರಮದಲ್ಲಿ ಧನುಷ್ ಭಾಗಿಯಾಗಿ ಪ್ರಚೋದನಾತ್ಮಕ ಭಾಷಣ ಮಾಡಿದ್ದಾರೆ. ಅಭಿಮಾನಿಗಳಿಗೆ ತಮ್ಮ ಒಗ್ಗಟ್ಟನ್ನು ಸಾರ್ವಜನಿಕ ಸೇವೆಗೆ ಬಳಸಿಕೊಳ್ಳುವಂತೆ ಕರೆ ನೀಡಿದ್ದಾರೆ.
ಪ್ರತಿ ವರ್ಷ ಧನುಷ್ ಅಭಿಮಾನಿಗಳು ನಟನ ಹೆಸರಲ್ಲಿ ರಕ್ತದಾನ ಶಿಬಿರ ಮಾಡುತ್ತಾ ಬಂದಿದ್ದಾರೆ. ಉಚಿತ ಊಟದ ವ್ಯವಸ್ಥೆ ಇರುತ್ತೆ. ಅದರಂತೆ ಈ ಬಾರಿ ಚೆನೈ ಬಳಿ ಮಂಜಕರನೈ ಪ್ರದೇಶದ ವೆಲ್ಸ್ ಮೆಡಿಕಲ್ ಕಾಲೇಜು ಆವರಣದಲ್ಲಿ ಕಾರ್ಯಕ್ರಮ ನಡೆದಿತ್ತು. ಧನುಷ್ ಆಗಮಿಸಿ ಅಭಿಮಾನಿಗಳಿಗೆ ಸಮಾಜಮುಖಿ ಕೆಲಸ ಮಾಡುವಂತೆ ಕರೆ ಕೊಟ್ಟಿದ್ದಾರೆ. ಸಿನಿಮಾ ಸಂಬAಧಿತ ಸಂಭ್ರಮಾಚರಣೆಗಳಿಗೆ ಸೀಮಿತವಾಗದೇ ಜನಪರ ಹಾಗೂ ಕಲ್ಯಾಣ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ತಮ್ಮ ಅಭಿಮಾನಿಗಳಿಗೆ ಹೇಳಿದ್ದಾರೆ. ಇದನ್ನೂ ಓದಿ: ರಿಷಬ್ ಶೆಟ್ಟಿಯ ಛತ್ರಪತಿ ಶಿವಾಜಿ ಮಹಾರಾಜ್ ಸಿನಿಮಾಗೆ ನಟಿ ಭೂಮಿ ಪೆಡ್ನೇಕರ್ ಎಂಟ್ರಿ

ಧನುಷ್ ಭಾಷಣ:
ಇಷ್ಟೊಂದು ಜನರು ಒಂದೆಡೆ ಸೇರಿದ್ದೀರಿ. ಇಂತಹ ಒಗ್ಗಟ್ಟಿನಲ್ಲಿ ಅಪಾರ ಶಕ್ತಿಯಿದೆ. ಆ ಒಗ್ಗಟ್ಟಿಗೆ ನಾವು ಒಂದು ಅರ್ಥಪೂರ್ಣ ಉದ್ದೇಶವನ್ನು ನೀಡಬೇಕಿದೆ. ಕೇವಲ ಆಡಿಯೋ ಬಿಡುಗಡೆ ಸಮಾರಂಭಗಳು ಮತ್ತು ಅಭಿಮಾನಿಗಳ ಭೇಟಿಗಳಿಗಿಂತಲೂ ಮಿಗಿಲಾಗಿ, ನಾವು ಹೆಚ್ಚಿನ ಜನಪರ ಹಾಗೂ ಕಲ್ಯಾಣ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕಿದೆ. ನಿಮ್ಮ ಪ್ರದೇಶದ ಜನರ ಹಾಗೂ ನಿಮ್ಮ ಸುತ್ತಮುತ್ತ ವಾಸಿಸುವ ಕುಟುಂಬಗಳ ಅಗತ್ಯಗಳನ್ನು ಅರಿತುಕೊಳ್ಳಿ ಹಾಗೂ ಸಾಧ್ಯವಾದ ರೀತಿಯಲ್ಲಿ ಅವರಿಗೆ ಸಹಾಯ ಮಾಡಿ. ಅವರಿಗಾಗಿ ನಿಮ ಕೈಯಲ್ಲಿ ಸಾಧ್ಯವಾದಷ್ಟು ನೆರವು ನೀಡಿ. ನಿಮ್ಮ ಬಗ್ಗೆ ನನಗೆ ಇನ್ನಷ್ಟು ಹೆಮ್ಮೆ ಎನಿಸುವಂತಾಗಬೇಕು. ನೀವು ಅದನ್ನು ಮಾಡುತ್ತೀರಿ ಎಂದು ನಾನು ನಂಬಿದ್ದೇನೆ ಎಂದಿದ್ದಾರೆ.ಇದನ್ನೂ ಓದಿ: ಕರೂರು ಕಾಲ್ತುಳಿತ ಸಂತ್ರಸ್ತರಿಗೆ ಉದ್ಯೋಗ ನೀಡಿದ ವಿಜಯ್‌ಗೆ ಶಾಕ್ – ಆದೇಶವೇ ರದ್ದು
ಅಂದಹಾಗೆ ಧನುಷ್ ಸಿನಿಮಾ ಕಾರ್ಯಕ್ರಮದ ಹೊರತಾಗಿ ಹೆಚ್ಚಾಗಿ ಕಾಣಿಸ್ಕೊಳ್ತಿರಲಿಲ್ಲ. ಇದೀಗ ರಾಜಕೀಯ ಪ್ರವೇಶ ಸುದ್ದಿಗೆ ಪುಷ್ಠಿ ಕೊಡುವಂತೆ ಜನರನ್ನು ಒಗ್ಗೂಡಿಸುವಂಥಹ ಭಾಷಣ ಮಾಡಿದ್ದಾರೆ. ಹಿಂದೆಯೂ ಅನೇಕ ಬಾರಿ ಧನುಷ್ ರಾಜಕೀಯ ಎಂಟ್ರಿ ಕುರಿತು ವದಂತಿ ಹಬ್ಬಿತ್ತು. ಜುಲೈ ಮೊದಲ ವಾರದಲ್ಲಿ ಧನುಷ್ ಅಭಿಮಾನಿಗಳ ಸಂಘಟನೆ ಅಧಿಕೃತ ಧ್ವಜವೊಂದನ್ನು ಬಿಡುಗಡೆ ಮಾಡಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಯಿತು.

ಧ್ವಜದಲ್ಲಿ ಧನುಷ್ ಅವರ ಚಿತ್ರವಿರುವುದು ಮತ್ತು ಅದರ ವಿನ್ಯಾಸ ರಾಜಕೀಯ ಸಂಘಟನೆಗಳ ರೀತಿಯನ್ನು ನೆನಪಿಸುವಂತಿದೆ ಅನ್ನೋ ಚರ್ಚೆ ಶುರುವಾಯಿತು. ಮತ್ತೊಂದೆಡೆ, ಧನುಷ್ ತಂದೆ ಕಸ್ತೂರಿ ರಾಜಾ ಸೇರಿದಂತೆ ಅವರ ಸುತ್ತಲಿನವರಿಂದ ಈ ರಾಜಕೀಯ ಊಹಾಪೋಹಗಳಿಗೆ ಸ್ಪಷ್ಟೀಕರಣ ಬಂದಿತ್ತು. ಆದರೆ ಈ ನಡುವೆ ಬಂದಿರುವ ಹೊಸ ಬೆಳವಣಿಗೆ ಮತ್ತಷ್ಟು ಕುತೂಹಲ ಮೂಡಿಸಿದೆ. ಅಭಿಮಾನಿಗಳ ಒಗ್ಗಟ್ಟಿನ ಬಗ್ಗೆ ಧನುಷ್ ಮಾತನಾಡಿದ್ದು, ಇದು ಸಾಮಾನ್ಯವಾಗಿ ಒಬ್ಬ ನಟ ತನ್ನ ಅಭಿಮಾನಿಗಳಿಗೆ ಮಾಡುವ ಸಾಮಾಜಿಕ ಸೇವೆಯ ಕರೆ ಆಗಿರಬಹುದು ಎಂಬ ಚರ್ಚೆ ಹುಟ್ಟುಹಾಕಿದೆ.ಇದನ್ನೂ ಓದಿ: ನಟ ರಕ್ಷಿತ್ ಶೆಟ್ಟಿ ತಂದೆ-ತಾಯಿಗೆ 50ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮ
