ರಾಜ್ಯದ ವಿವಿಧ ಭಾಗಗಳಲ್ಲಿ ಸೆಪ್ಟೆಂಬರ್ ಮಧ್ಯಭಾಗದಿಂದ ವಾತಾವರಣ ಸಂಪೂರ್ಣ ಬದಲಾಗಲಿದ್ದು, ಬಂಗಾಳಕೊಲ್ಲಿಯಲ್ಲಿ ಸಂಭವಿಸಲಿರುವ ವಾಯುಭಾರ ಕುಸಿತದ ನೇರ ಪ್ರಭಾವ ಕರ್ನಾಟಕದ ಮೇಲೂ ಬೀರಲಿದೆ. ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಜನತೆ ಮುಂದಿನ ದಿನಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ರಾಜಧಾನಿ ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ, ಚಾಮರಾಜನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಅಲ್ಲಲ್ಲಿ ಗುಡುಗು ಸಹಿತ ಮಳೆ ಮುಂದುವರಿಯಲಿದ್ದು, ಸೆಪ್ಟೆಂಬರ್ 19ರ ನಂತರ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಮತ್ತಷ್ಟು ಹೆಚ್ಚಾಗಲಿದೆ.ಸೆಪ್ಟೆಂಬರ್ 18 ಅಥವಾ 19ರ ಸುಮಾರಿಗೆ ಉತ್ತರ ಒಳನಾಡಿನ ಕೆಲ ಭಾಗಗಳಲ್ಲಿ ಮಳೆಯಾಗುವ ನಿರೀಕ್ಷೆ ಇದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆ ಇದೆ.

ನಗರಗಳ ಹವಾಮಾನ ವರದಿ:
ಬೆಂಗಳೂರು: 29-21
ಮಂಗಳೂರು: 31-25
ಶಿವಮೊಗ್ಗ: 31-22
ಬೆಳಗಾವಿ: 29-21
ಮೈಸೂರು: 30-22

ಮಂಡ್ಯ: 31-22
ಮಡಿಕೇರಿ: 27-20
ರಾಮನಗರ: 31-22
ಹಾಸನ: 28-20
ಚಾಮರಾಜನಗರ: 29-22
ಚಿಕ್ಕಬಳ್ಳಾಪುರ: 30-21

ಕೋಲಾರ: 30-22
ತುಮಕೂರು: 31-21
ಉಡುಪಿ: 31-25
ಕಾರವಾರ: 30-27
ಚಿಕ್ಕಮಗಳೂರು: 27-19

ದಾವಣಗೆರೆ: 32-23
ಹುಬ್ಬಳ್ಳಿ: 31-22
ಚಿತ್ರದುರ್ಗ: 32-22
ಹಾವೇರಿ: 31-22
ಬಳ್ಳಾರಿ: 35-24
ಗದಗ: 32-22
ಕೊಪ್ಪಳ: 34-23

ರಾಯಚೂರು: 36-25
ಯಾದಗಿರಿ: 35-24
ವಿಜಯಪುರ: 34-24
ಕಲಬುರಗಿ: 34-24
ಬಾಗಲಕೋಟೆ: 34-23

