– ಮೇಕೆದಾಟು ಯೋಜನೆಗೆ ಅವಕಾಶ ಕೊಡಲ್ಲ ಎಂದ ತ.ನಾಡು ಕಾಂಗ್ರೆಸ್ ವಿರುದ್ಧ ಅಶೋಕ್ ಗರಂ
ಬೆಂಗಳೂರು: ಮೇಕೆದಾಟು ಯೋಜನೆಗೆ ಅವಕಾಶ ಕೊಡಲ್ಲ ಎಂಬ ತಮಿಳುನಾಡು (Tamil Nadu) ಕಾಂಗ್ರೆಸ್ ಹೇಳಿಕೆ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್.ಅಶೋಕ್ (R.Ashok) ಕಿಡಿಕಾರಿದ್ದಾರೆ. ನಿಮಗೆ ತಾಕತ್ತಿದ್ದರೆ ತಮಿಳುನಾಡಿಗೆ ಪಾದಯಾತ್ರೆ ಮಾಡಿ ಎಂದು ಸವಾಲು ಹಾಕಿದ್ದಾರೆ.
ಎಕ್ಸ್ ಪೋಸ್ಟ್‌ನಲ್ಲೇನಿದೆ?
ರಾಜ್ಯ ಸರ್ಕರದ ವಿರುದ್ಧ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅಶೋಕ್, ಅಂದು ಅಧಿಕಾರಕ್ಕಾಗಿ ಮೇಕೆದಾಟು ʼಪಾದಯಾತ್ರೆʼಯ (Mekedatu) ನಾಟಕವಾಡಿದ ಡಿ.ಕೆ.ಶಿವಕುಮಾರ್ ಈಗ ತಮಿಳುನಾಡು ಕಾಂಗ್ರೆಸ್ ಮುಂದೆ ಮೌನವ್ರತ ಮಾಡುತ್ತಿರುವುದೇಕೆ? ಸಿಎಂ ಡಿ.ಕೆ.ಶಿವಕುಮಾರ್ ಅವರೇ, ಚುನಾವಣೆಗೆ ಮುನ್ನ ಅಧಿಕಾರ ಹಿಡಿಯುವುದಕ್ಕಾಗಿ ಮೇಕೆದಾಟು ಪಾದಯಾತ್ರೆಯ ಬೀದಿನಾಟಕ ಮಾಡಿದ್ದರಲ್ಲ ಸ್ವಾಮಿ, ಈಗ ಏಕೆ ಮೌನಕ್ಕೆ ಶರಣಾಗಿದ್ದೀರಿ? ಇದನ್ನೂ ಓದಿ: ಮೇಕೆದಾಟು ಯೋಜನೆಗೆ ವಿರೋಧ – ತಮಿಳುನಾಡು ವಿಧಾನಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಅಂಗೀಕಾರ
ಅಂದು ಅಧಿಕಾರಕ್ಕಾಗಿ ಮೇಕೆದಾಟು “ಪಾದಯಾತ್ರೆ”ಯ ನಾಟಕವಾಡಿದ ಡಿ.ಕೆ.ಶಿವಕುಮಾರ್ ಈಗ ತಮಿಳುನಾಡು ಕಾಂಗ್ರೆಸ್ ಮುಂದೆ “ಮೌನವ್ರತ”? ಮಾಡುತ್ತಿರುವುದೇಕೆ?
ಸಿಎಂ @DKShivakumar ಅವರೇ,
ಚುನಾವಣೆಗೆ ಮುನ್ನ ಅಧಿಕಾರ ಹಿಡಿಯುವುದಕ್ಕಾಗಿ ಮೇಕೆದಾಟು ಪಾದಯಾತ್ರೆಯ ಬೀದಿನಾಟಕ ಮಾಡಿದ್ದರಲ್ಲ ಸ್ವಾಮಿ, ಈಗ ಏಕೆ ಮೌನಕ್ಕೆ ಶರಣಾಗಿದ್ದೀರಿ?
ನಿಮ್ಮದೇ… pic.twitter.com/Ft0htIJGdY
— R. Ashoka (@RAshokaBJP) July 3, 2026
ನಿಮ್ಮದೇ ಕಾಂಗ್ರೆಸ್ ಪಕ್ಷದ ತಮಿಳುನಾಡು ಘಟಕದ ಅಧ್ಯಕ್ಷರು ʼಮೇಕೆದಾಟಿಗೆ ಒಂದು ಇಟ್ಟಿಗೆ ಹಾಕಲೂ ಬಿಡುವುದಿಲ್ಲʼ ಎಂದು ಕರ್ನಾಟಕಕ್ಕೆ ಬಹಿರಂಗ ಸವಾಲು ಹಾಕಿದ್ದಾರೆ. ನಿಮಗೆ ತಾಕತ್ತಿದ್ದರೆ, ಧಮ್ಮಿದ್ದರೆ, ಕನ್ನಡಿಗರ ಮೇಲೆ ನಿಜವಾದ ಕಾಳಜಿಯಿದ್ದರೆ, ಈಗ ಚೆನ್ನೈಗೆ ಪಾದಯಾತ್ರೆ ಮಾಡಿ ಅಲ್ಲಿನ ತಮಿಳುನಾಡು ಕಾಂಗ್ರೆಸ್ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ಕೂತು ನಿಮ್ಮ ರಾಜಕೀಯ ಬದ್ಧತೆಯನ್ನು ಸಾಬೀತುಪಡಿಸಿ!
ಅಂದು ವೋಟು ಗಿಟ್ಟಿಸಿಕೊಳ್ಳಲು ಪಾದಯಾತ್ರೆಯ ನಾಟಕವಾಡಿದ ನೀವು ಈಗ ತಮಿಳುನಾಡಿನ ಮೈತ್ರಿ ರಾಜಕಾರಣಕ್ಕೆ ಹೆದರಿ ತಲೆಮರೆಸಿಕೊಂಡಿದ್ದೀರಾ? ಕಾವೇರಿ ಕೊಳ್ಳದ ನಮ್ಮ ರೈತರ ಮತ್ತು ಬೆಂಗಳೂರಿನ ಕೋಟ್ಯಂತರ ಜನರ ಕುಡಿಯುವ ನೀರಿನ ಹಕ್ಕಿಗಿಂತ ನಿಮಗೆ ದೆಹಲಿ ಹೈಕಮಾಂಡ್ ಅಣತಿ ಮತ್ತು ತಮಿಳುನಾಡಿನ ಮೈತ್ರಿ ರಾಜಕಾರಣವೇ ಹೆಚ್ಚಾಯಿತೇ?
ಕನ್ನಡಿಗರ ರಕ್ತ ಹೀರುತ್ತಿರುವ ಈ ನಾಡದ್ರೋಹಿ ಕಾಂಗ್ರೆಸ್ ಸರ್ಕಾರಕ್ಕೆ ಮೇಕೆದಾಟು ಯೋಜನೆ ಜಾರಿಗೊಳಿಸುವ ಇಚ್ಛಾಶಕ್ತಿಯೇ ಇಲ್ಲ. ಅಂದು ಕೇವಲ ಚುನಾವಣಾ ಗಿಮಿಕ್ ಮಾಡಲು ಮೇಕೆದಾಟು ಹೆಸರನ್ನು ಬಳಸಿಕೊಂಡ ಇವರು, ಇಂದು ತಮಿಳುನಾಡು ಕಾಂಗ್ರೆಸ್‌ನ ಉದ್ಧಟತನದ ಹೇಳಿಕೆಗೆ ಕನಿಷ್ಠ ಖಂಡನೆ ವ್ಯಕ್ತಪಡಿಸಲೂ ಹೆದರುತ್ತಿರುವುದು ನಾಚಿಕೆಗೇಡು. ನಿಮ್ಮ ಈ ವಿಶ್ವಾಸಘಾತುಕ ರಾಜಕಾರಣಕ್ಕೆ ಮತ್ತು ಕನ್ನಡಿಗರಿಗೆ ಮಾಡಿದ ನಂಬಿಕೆ ದ್ರೋಹಕ್ಕೆ ರಾಜ್ಯದ ಜನತೆ ತಕ್ಕ ಪಾಠ ಕಲಿಸುವುದು ನಿಶ್ಚಿತ ಎಂದು ಸರ್ಕಾರಕ್ಕೆ ಆರ್.ಅಶೋಕ್ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಮೇಕೆದಾಟು ಹಾರ್ಟ್ ಆಫ್ ಡಿ.ಕೆ.ಶಿವಕುಮಾರ್ ಅಲ್ಲ, ಹಾರ್ಟ್ ಆಫ್ ದಕ್ಷಿಣ ಭಾರತ: ಸಿಎಂ
