ಕಳೆದ ಒಂದು ತಿಂಗಳ ಹಿಂದೆ ನಟ ಫರ್ಹಾನ್ ಅಖ್ತರ್ ದೂರಿನ ಕಾರಣಕ್ಕೆ ನಟ ರಣವೀರ್ ಸಿಂಗ್ ವಿರುದ್ಧ ಎಫ್‌ಡಬ್ಲುಐಸಿಇ ಅಸಹಕಾರ ಧೋರಣೆ ತೋರಿತ್ತು. ಈ ಮೂಲಕ ಬಾಲಿವುಡ್ ಫಿಲ್ಮ್ ಫೆಡರೇಷನ್ ರಣವೀರ್ ಸಿಂಗ್‌ಗೆ ಮುಂದಿನ ಪ್ರಾಜೆಕ್ಟ್‌ಗಳಲ್ಲಿ ಸಹಕಾರ ಕೊಡದಿರುವ ಉದ್ದೇಶ ಹೊಂದಿತ್ತು. ಈ ವಿಚಾರಕ್ಕೆ ಪ್ರತಿಕ್ರಿಯೆ ಕೊಡದೇ ಮೌನವಾಗೇ ಉಳಿದ ರಣವೀರ್ ಸಿಂಗ್ ಇದೀಗ ಎಫ್‌ಡಬ್ಲುಐಸಿಇಗೆ ಸೆಡ್ಡು ಹೊಡೆಯಲು ಸಿದ್ಧರಾಗಿದ್ದಾರೆ ಅನ್ನೋ ಮಾಹಿತಿ ಬಂದಿದೆ.
ಶೀಘ್ರದಲ್ಲೇ ರಣವೀರ್ ಸಿಂಗ್ ಹೊಸ ಚಿತ್ರ `ಪ್ರಳಯ್’ ಚಿತ್ರೀಕರಣ ಪ್ರಾರಂಭವಾಗುವ ಸುಳಿವು ಸಿಕ್ಕಿದೆ. ರಣವೀರ್ ಪತ್ನಿ ದೀಪಿಕಾ ಇದೀಗ ಗರ್ಭಿಣಿ ಅನ್ನೋ ಕಾರಣಕ್ಕೆ ಸಿನಿಮಾದ ಚಿತ್ರೀಕರಣಕ್ಕೆ ರಣವೀರ್ ತೆರಳುತ್ತಿಲ್ಲ. ಹೀಗಾಗಿ ಸತತ ತಯಾರಿ ನಡೆಸುತ್ತಿರುವ ರಣವೀರ್ ಇದೇ ಬರುವ ಸಪ್ಟೆಂಬರ್‌ನಲ್ಲಿ ಪ್ರಳಯ್ ಚಿತ್ರದ ಪ್ರಥಮ ಶೆಡ್ಯೂಲ್ ಚಿತ್ರೀಕರಣಕ್ಕಾಗಿ ಆಸ್ಟ್ರೇಲಿಯಾಗೆ ತೆರಳಲಿದ್ದಾರೆ. ಇದನ್ನೂ ಓದಿ: ಗಣೇಶ್ ಹುಟ್ಟು ಹಬ್ಬಕ್ಕೆ ಪಿನಾಕ ರಿಲೀಸ್ ಡೇಟ್ ಫಿಕ್ಸ್

ದುರಂಧರ್ ಸರಣಿ ಚಿತ್ರಗಳ ಬ್ಲಾಕ್‌ಬಸ್ಟರ್ ಹಿಟ್ ಬಳಿಕ ರಣವೀರ್ ನಟಿಸುತ್ತಿರುವ ಚಿತ್ರ ಇದಾಗಿದ್ದು ಭಾರೀ ನಿರೀಕ್ಷೆ ಮೂಡಿಸಿದೆ. ಜೈ ಮೆಹ್ತಾ ನಿರ್ದೇಶನದ ಚಿತ್ರಕ್ಕಾಗಿ ರಣವೀರ್ ಈಗಾಗ್ಲೇ ಸಿದ್ಧತೆ ನಡೆಸಿದ್ದು, ಈ ಮೂಲಕ ಅವರ ಮೇಲೆ ಹೇರಲಾದ ಅಸಹಕಾರ ಯಾವುದೇ ಪರಿಣಾಮ ಬೀರಿಲ್ಲ ಅನ್ನೋದನ್ನ ಶೀಘ್ರದಲ್ಲೇ ತೋರಿಸಲಿದ್ದಾರೆ ರಣವೀರ್ ಸಿಂಗ್.
ಅಂದಹಾಗೆ ದೀಪಿಕಾ ಪ್ರಸವದ ಬಳಿಕ ರಣವೀರ್ ಸಿಂಗ್ ವಿದೇಶಕ್ಕೆ ಹಾರುವ ಸಂಭವ ಇದೆ. ಇದೀಗ ಎರಡನೇ ಮಗುವಿಗೆ ಗರ್ಭಿಣಿಯಾಗಿರುವ ದೀಪಿಕಾ ಜೊತೆ ಸಮಯ ಕಳೆಯುತ್ತಿರುವ ರಣವೀರ್ ಮಗು ಜನಿಸಿದ ಬಳಿಕ ಶೂಟಿಂಗ್‌ಗೆ ತೆರಳುವ ಸಾಧ್ಯತೆ ಇದೆ. ಹೀಗಾಗಿ ಎಫ್‌ಡಬ್ಲುಐಸಿಇ ಬ್ಯಾನ್ ಬಿಸಿ ರಣವೀರ್‌ಗೆ ತಟ್ಟಿಲ್ಲ.ಇದನ್ನೂ ಓದಿ: ತುಳು ಸಿನಿಮಾ ನಿರ್ಮಾಣ ಮಾಡಿದ ಗಣೇಶ್ ಪತ್ನಿ ಶಿಲ್ಪಾ

