ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ನಿರ್ಮಾಣವಾಗುತ್ತಿರುವ ನೆಕ್ಸ್ಟ್ ಲೆವೆಲ್ ಸಿನಿಮಾಗೆ ನಿರ್ದೇಶಕ ಅರವಿಂದ್ ಕೌಶಿಕ್ ಹಾಗೂ ನಿರ್ಮಾಪಕ ತರುಣ್ ಶಿವಪ್ಪ ದೊಡ್ಡ ತಾರಾಬಳಗವನ್ನ ಒಂದುಗೂಡಿಸ್ತಿದ್ದಾರೆ. ಈ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಇದೀಗ ಚಿತ್ರತಂಡ ಉಪ್ಪಿ ಅಣ್ಣನ ಮಗನನ್ನು ‘ನೆಕ್ಸ್ಟ್ ಲೆವೆಲ್’ಗೆ ಕರೆದುಕೊಂಡು ಬಂದಿದೆ.

ನೆಕ್ಸ್ಟ್ ಲೆವೆಲ್ ಸಿನಿಮಾದಲ್ಲಿ ನಟ ನಿರಂಜನ್ ಸುಧೀಂದ್ರ ಬಣ್ಣ ಹಚ್ಚಿದ್ದಾರೆ. ಇದೇ ಮೊದಲ ಬಾರಿಗೆ ಅಪ್ಪ-ಮಗ ಒಟ್ಟಿಗೆ ಕಾಣಿಸಿಕೊಳ್ತಿದ್ದಾರೆ. ಹೌದು, ಉಪೇಂದ್ರ ಹಾಗೂ ನಿರಂಜನ್ ಒಂದೇ ಚಿತ್ರದಲ್ಲಿ ನಟಿಸಬೇಕು ಎನ್ನುವುದು ಅಭಿಮಾನಿಗಳ ಆಸೆ, ಆರೈಕೆಯಾಗಿತ್ತು. ಆ ಕನಸು ನೆಕ್ಸ್ಟ್ ಲೆವೆಲ್ ಸಿನಿಮಾದಲ್ಲಿ ನೆರವೇರುತ್ತಿದೆ. ಅಪ್ಪ-ಮಗನ ಜುಗಲ್ ಬಂದಿ ಹೇಗೆ ಇರಲಿದೆ ಎಂಬ ಕುತೂಹಲವಂತು ಇದೆ. ಇದನ್ನೂ ಓದಿ: ಕೊನೆಗೂ ಸೆನ್ಸಾರ್ ಗುದ್ದಾಟದಲ್ಲಿ ಗೆದ್ದ `ಜನನಾಯಗನ್’ – ವಿಜಯ್ ಫ್ಯಾನ್ಸ್ ಖುಷ್

ನೆಕ್ಸ್ಟ್ ಲೆವೆಲ್ ನಲ್ಲಿ ರಿಯಲ್ ಸ್ಟಾರ್ ಉಪೇಂದ್ರಗೆ ಜೋಡಿಯಾಗಿ ಆರಾಧನಾ ರಾಮ್ ಅಭಿನಯಿಸುತ್ತಿದ್ದಾರೆ. ರೋಜ್, ಮಾಸ್ ಲೀಡರ್, ವಿಕ್ಟರಿ-2, ಖಾಕಿ, ಛೂ ಮಂತರ್ ಸಿನಿಮಾಗಳನ್ನು ನಿರ್ಮಾಣ ಮಾಡಿರೋ ತರುಣ್ ಶಿವಪ್ಪ ತಮ್ಮದೇ ತರುಣ್ ಸ್ಟುಡಿಯೋಸ್ ಬ್ಯಾನರ್ ಅಡಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಇದನ್ನೂ ಓದಿ: ಬ್ಯಾನ್ ಹೇರಿಕೆಗೆ ಸೆಡ್ಡು ಹೊಡೆದ ರಣವೀರ್ ಸಿಂಗ್

