ರಾಜಕೀಯ ಜಿದ್ದು, ಕುರ್ಚಿ ಕಾದಾಟದ ನಡುವೆ ಸೆನ್ಸಾರ್ ಆಗದೇ ಉಳಿದಿದ್ದ ದಳಪತಿ ವಿಜಯ್ ಅಭಿನಯದ ಕೊನೆಯ ಚಿತ್ರ `ಜನನಾಯಗನ್’ ಕೊನೆಗೂ ಸೆನ್ಸಾರ್ ಆಗಿದೆ. ಚಿತ್ರಕ್ಕೆ ಸೆನ್ಸಾರ್ ಮಂಡಳಿ ಎ ಸರ್ಟಿಫಿಕೇಟ್ ನೀಡಿದೆ. ಈ ಮೂಲಕ `ಜನನಾಯಗನ್’ ರಿಲೀಸ್‌ಗೆ ಸಿಬಿಎಫ್‌ಸಿ ಹಸಿರು ನಿಶಾನೆ ತೋರಿಸಿದೆ.
ಕಳೆದ ತಮಿಳುನಾಡು ವಿಧಾಸಭೆ ಚುನಾವಣೆಗೂ ಮುನ್ನ ಚಿತ್ರ ತೆರೆ ಕಾಣಲು ಸಿದ್ಧತೆ ನಡೆಸಿ ಸೆನ್ಸಾರ್ ಮಂಡಳಿಯ ಕದ ತಟ್ಟಿತ್ತು. ಆದರೆ ಚಿತ್ರದ ಬಿಡುಗಡೆ ತಡೆಯಲು ಹಿಂದಿನ ಸಿಎಂ ಸ್ಟಾಲಿನ್ ಸರ್ಕಾರದ ಹಸ್ತಕ್ಷೇಪ ಇತ್ತು ಅನ್ನೋದು ಚರ್ಚೆಯಾಗಿದ್ದ ವಿಚಾರ. ಕಳೆದ ಜನವರಿಯಂದೇ ರಿಲೀಸ್ ಆಗಬೇಕಿದ್ದ `ಜನನಾಯಗನ್’ ಇದೀಗ ಸೆನ್ಸಾರ್ ಆಗಿದೆ. ಇದೇ ತಿಂಗಳು ಚಿತ್ರ ಬಿಡುಗಡೆ ಆಗುವ ಸಾಧ್ಯತೆ ಇದೆ. ಕೆಲವೇ ದಿನಗಳಲ್ಲಿ ಅಧಿಕೃತ ಘೋಷಣೆಯಾಗುವ ಸಾಧ್ಯತೆಯಿದೆ.
ಮಾಜಿ ನಟ ವಿಜಯ್ ಈಗ ತಮಿಳುನಾಡಿನ ಹಾಲಿ ಸಿಎಂ. ಚುನಾವಣೆಗೂ ಪೂರ್ವದಲ್ಲಿ ಜನನಾಯಗನ್ ಮತದಾರರ ಮೇಲೆ ಪ್ರಭಾವ ಬೀಳಬಹುದು ಅನ್ನೋ ಕಾರಣಕ್ಕೆ ಆಗಿನ ಸರ್ಕಾರ ಚಿತ್ರಕ್ಕೆ ಸೆನ್ಸಾರ್ ತಡೆದಿತ್ತು. ಇದೀಗ ವಿಜಯ್ ಸಿಎಂ ಆದ್ಮೇಲೆ ರಿಲೀಸ್ ಆಗ್ತಿರೋ `ಜನನಾಯಗನ್’ ನಿಜಕ್ಕೂ ವಿಶೇಷವೇ ಸರಿ. ಇದರಿಂದ ವಿಜಯ್ ಫ್ಯಾನ್ಸ್ ಖುಷಿಯಾಗಿದ್ದು ಬಿಡುಗಡೆಯನ್ನೇ ಎದುರು ನೋಡುತ್ತಿದ್ದಾರೆ.
