ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣದ ಪ್ರಮುಖ ಸಾಕ್ಷಿಗೆ ಬೆದರಿಕೆ ಹಾಕಿದ್ದ ಕೇಸ್‌ನಲ್ಲಿ ವಿಚಾರಣೆ ವೇಳೆ ಹಲವು ವಿಚಾರಗಳು ಬೆಳಕಿಗೆ ಬಂದಿವೆ.
ಆರೋಪಿ ಪುನೀತ್ ಸೇರಿದಂತೆ ಮೂವರು ಕೊಲೆ ಪ್ರಕರಣದ ಪ್ರಮುಖ ಸಾಕ್ಷಿಗಳಿಗೆ ಬೆದರಿಕೆ ಹಾಕಿದ್ದರು. ಇದರ ಬೆನ್ನಲ್ಲೇ ಮೂವರನ್ನು ಪೊಲೀಸರು ಅರೆಸ್ಟ್ ಮಾಡಿದ್ದರು. ವಿಚಾರಣೆ ವೇಳೆ ಪುನೀತ್ ಹೈಡ್ರಾಮಾ ಮಾಡಿದ್ದು, ಕೆಲವು ವಿಚಾರಗಳು ಬಯಲಾಗಿವೆ. ಇದನ್ನೂ ಓದಿ: ಡಿ-ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಕೊಲೆ ಕೇಸ್ – ಪ್ರಮುಖ ಸಾಕ್ಷಿಗೆ ಬೆದರಿಕೆ; ಮೂವರು ಅರೆಸ್ಟ್
ಸಾಕ್ಷಿಧಾರ ಸಂದೀಪ್, ತುಮಕೂರಿನ ಖಾಸಗಿ ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ಜೂ.25ರಂದು ಆಕರ್ಷ್ ಎಂಬಾತ ಕರೆ ಮಾಡಿ ಮಾತಾಡಬೇಕು ಅಂತ ಕರೆದಿದ್ದ. ನಂತರ ಕಾರಿನಲ್ಲಿ ಕೂರಿಸಿಕೊಂಡು ನಾಲ್ವರು ಕೋರ್ಟ್‌ನಲ್ಲಿ ಏನೇನ್ ನಡೀತು, ನೀನು ಏನು ಹೇಳಿದೆ ಅಂತೆಲ್ಲ ಕೇಳಿದ್ದಾನೆ.
ನಂತರ ವಕೀಲರೊಬ್ಬರು ವಾಟ್ಸಪ್ ಕರೆ ಮೂಲಕ ಸಂದೀಪ್ ಬಳಿ ಮಾತಾಡಿ, ನಾವು ಹೇಳಿದಂತೆ ಕೋರ್ಟ್‌ನಲ್ಲಿ ಹೇಳುವಂತೆ ಒತ್ತಾಯ ಮಾಡಿದ್ಧಾರೆ. ಆರೋಪಿಗಳಾದ ಅನುಕುಮಾರ್, ಜಗದೀಶ್, ರಾಘವೇಂದ್ರ ಯಾರು ಅಂತ ಗೊತ್ತಿಲ್ಲ. ರೇಣುಕಾಸ್ವಾಮಿ ಕೊಲೆಯಾದ ಮೂರು ದಿನಗಳ ನಂತರ ನಾನು ಕೆಲಸ ಮಾಡ್ತಿದ್ದ ಬಾರ್ ಅಂಡ್ ರೆಸ್ಟೋರೆಂಟ್‌ಗೆ ಬಂದು ಸಿಸಿಟಿವಿ ಮತ್ತು ಡಿವಿಆರ್ ತೆಗೆದುಕೊಂಡು ಸಹಿ ಮಾಡುವಂತೆ ಕಾಮಾಕ್ಷಿಪಾಳ್ಯ ಪೊಲೀಸರು ಹೇಳಿದ್ದರು. ಅವರು ಸೂಚಿಸಿದ ಜಾಗದಲ್ಲಿ ಸಹಿ ಮಾಡಿದ್ದೇನೆ. ಹೊರತುಪಡಿಸಿ ನಂಗೇ ಏನು ಗೊತ್ತಿಲ್ಲ ಅಂತಾ ಹೇಳುವಂತೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಇನ್ನೂ ಆರೋಪಿ ಪುನೀತ್ ಪೊಲೀಸರ ಮುಂದೆ ನನಗೇನೂ ಗೊತ್ತಿಲ್ಲ, ನಂಗೆ ಯಾರು ಏನು ಹೇಳಿಕೊಟ್ಟಿಲ್ಲ ಎಂದಿದ್ದಾನೆ. ಸದ್ಯ ಪೊಲೀಸರು 5 ದಿನ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಜೊತೆಗೆ ಆತನ ಮೊಬೈಲ್ ಅನ್ನು FSLಗೆ ರವಾನೆ ಮಾಡಿದ್ದಾರೆ.
ಬೆದರಿಕೆ ಹಾಕಲು ಆರೋಪಿಗಳಿಗೆ ನಿರ್ಮಾಪಕರು ಸಾಥ್ ನೀಡಿದ್ದಾರೆ ಎಂದು ಶಂಕೆ ವ್ಯಕ್ತವಾಗಿದೆ. ವಿಚಾರಣೆ ವೇಳೆ ಅನುಮಾನ ವ್ಯಕ್ತವಾಗಿದ್ದು, ನಿರ್ಮಾಪಕರ ಬಗ್ಗೆ ದಾಖಲೆ ಕಲೆ ಹಾಕಲು ಕಾಮಾಕ್ಷಿಪಾಳ್ಯ ಪೊಲೀಸರು ಮುಂದಾಗಿದ್ದಾರೆ. ಆರೋಪಿ ಪುನೀತ್‌ನ ಮೊಬೈಲ್ ರಿಟ್ರೀವ್ ಆದ ಬಳಿಕ ದಾಖಲೆಗಳು ಪತ್ತೆಯಾದರೆ ನಿರ್ಮಾಪಕರಿಗೆ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ.ಇದನ್ನೂ ಓದಿ: ಯುಪಿ ಟಿಇಟಿ ಪರೀಕ್ಷೆ ವೇಳೆ ವಂಚನೆ ಜಾಲ ಪತ್ತೆ – 15 ನಕಲಿ ಅಭ್ಯರ್ಥಿಗಳು ಅರೆಸ್ಟ್
