– 2030ಕ್ಕೆ ಭಾರತ ಆತಿಥ್ಯ
– ಸಾಬರಮತಿ ತೀರದಲ್ಲಿ ನಡೆಯಲಿದೆ ಗೇಮ್ಸ್
ಗ್ಲ್ಯಾಸ್ಗೋ: ಸ್ಕಾಟ್‌ಲ್ಯಾಂಡ್ ಆಯೋಜಿಸಿದ್ದ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ(Commonwealth Games) ಅಧಿಕೃತ ತೆರೆ ಬಿದ್ದಿದೆ. ಸ್ಥಳೀಯ ಕಾಲಮಾನ ರಾತ್ರಿ ವರ್ಣರಂಜಿತ ಸಮಾರೋಪ ಸಮಾರಂಭದೊಂದಿಗೆ ಗೇಮ್ಸ್ ಮುಕ್ತಾಯಗೊಂಡಿತು. ಈ ವೇಳೆ ಶತಮಾನೋತ್ಸವದ (Centenary edition) ಆವೃತ್ತಿಯ ಆತಿಥ್ಯ ವಹಿಸಲಿರುವ ಭಾರತಕ್ಕೆ ಧ್ವಜ ಮತ್ತು ಬ್ಯಾಟನ್ ಹಸ್ತಾಂತರಿಸಲಾಯಿತು.
2030ರ ಕಾಮನ್‌ವೆಲ್ತ್ ಕ್ರೀಡಾಕೂಟವು ಅಹಮದಾಬಾದ್‌ನಲ್ಲಿ(Ahmedabad) ನಡೆಯಲಿದ್ದು, ಸ್ಕಾಟ್‌ಲ್ಯಾಂಡ್ ಅಧಿಕಾರಿಗಳು ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ, ಭಾರತೀಯ ಒಲಿಂಪಿಕ್ ಅಸೋಸಿಯೇಷನ್(IOA) ಅಧ್ಯಕ್ಷೆ ಪಿ.ಟಿ. ಉಷಾ ಮತ್ತು ಗುಜರಾತ್ ಉಪಮುಖ್ಯಮಂತ್ರಿ ಹರ್ಷ್ ಸಂಘವಿ ಅವರನ್ನೊಳಗೊಂಡ ಭಾರತೀಯ ಪ್ರತಿನಿಧಿಗಳಿಗೆ ಸಿಡಬ್ಲ್ಯೂಜಿ (CWG) ಧ್ವಜ ಮತ್ತು ಬ್ಯಾಟನ್ ಹಸ್ತಾಂತರಿಸಿದರು.
ಸಮಾರೋಪ ಸಮಾರಂಭವು ಸ್ಕಾಟ್‌ಲ್ಯಾಂಡ್ ಸಂಸ್ಕೃತಿಯ ಪ್ರದರ್ಶನದೊಂದಿಗೆ ಪ್ರಾರಂಭವಾಗಿ ನಂತರ ಭಾರತದ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಪ್ರಾಚೀನ ಪರಂಪರೆಯನ್ನು ಪ್ರದರ್ಶಿಸುವ ರೋಮಾಂಚಕ ಕಾರ್ಯಕ್ರಮವಾಗಿ ಬದಲಾಯಿತು. ಎರಡೂ ದೇಶಗಳ ಸಂಗೀತಗಾರರು ಮತ್ತು ನೃತ್ಯಗಾರರು ‘ಜುಗಲ್ಬಂದಿ’ ಪ್ರದರ್ಶನ ನೀಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.
𝐈𝐓’𝐒 𝐎𝐅𝐅𝐈𝐂𝐈𝐀𝐋! 🤩
IOA President PT Usha, Gujarat Deputy CM Harsh Sanghavi, and India’s golden boy Neeraj Chopra take charge of the Commonwealth Games Flag as the host duties officially shift to India for 2030! #SonySportsNetwork #SonyLIV #Glasgow2026… pic.twitter.com/E8y5jdSrHo
— Sony Sports Network (@SonySportsNetwk) August 2, 2026
ಕ್ರೀಡಾಪಟುಗಳ ಪರೇಡ್‌ನಲ್ಲಿ ಭಾರತದ ಚಿನ್ನದ ಪದಕ ವಿಜೇತ ಬಾಕ್ಸರ್ ಜೈಸ್ಮಿನ್ ಲಂಬೋರಿಯಾ ಅವರು ಭಾರತದ ಧ್ವಜಧಾರಿಯಾಗಿ ಭಾಗವಹಿಸಿದ್ದರು. ಒವಿಒ ಹೈಡ್ರೋ ಕ್ರೀಡಾಂಗಣದಲ್ಲಿ ಭಾರತ ಮತ್ತು ಸ್ಕಾಟ್‌ಲ್ಯಾಂಡ್ ಸಂಗೀತದ ಸಂಗಮ ಕಂಡುಬಂತು.
ಈ ಸಮಾರಂಭದಲ್ಲಿ ಭಾರತದ ಖ್ಯಾತ ಗಾಯಕ ಶಂಕರ್ ಮಹಾದೇವನ್ ಮತ್ತು ಅವರ ಪುತ್ರರು ‘ಏ ವತನ್’, ‘ಭಾಗ್ ಮಿಲ್ಖಾ ಭಾಗ್’, ‘ಲೇಹ್ರಾ ದೋ’ ಹಾಗೂ ‘ಸಬ್ಸೇ ಆಗೆ ಹೋಂಗೆ ಹಿಂದುಸ್ತಾನಿ’ ಮುಂತಾದ ಜನಪ್ರಿಯ ಗೀತೆಗಳನ್ನು ಹಾಡಿ ಪ್ರೇಕ್ಷಕರನ್ನು ತನ್ಮಯಗೊಳಿಸಿದರು. ಇದನ್ನೂ ಓದಿ: ಗ್ಲಾಸ್ಗೋದಲ್ಲಿ ಭಾರತಕ್ಕೆ ಅವಮಾನ? – ಟಿಶ್ಯೂ ಮೇಲೆ ಮ್ಯಾಪ್ ತಪ್ಪಾಗಿ ಮುದ್ರಿಸಿದ್ದಕ್ಕೆ ರೆಸ್ಟೋರೆಂಟ್ ವಿರುದ್ಧ ಕ್ರಿಡಾಪಟುಗಳು ಗರಂ
The honour of a lifetime. 🙌
Jaismine Lamboria carries the Tricolour as #TeamIndia‘s flag bearer at the Commonwealth Games Glasgow 2026 Closing Ceremony. #SonySportsNetwork #SonyLIV #Glasgow2026 #GlasgowMeinTiranga #Cheer4Bharat pic.twitter.com/fnqcaAupcB
— Sony Sports Network (@SonySportsNetwk) August 2, 2026
2017ರ ಮಿಸ್ ವರ್ಲ್ಡ್ ಮನುಷಿ ಚಿಲ್ಲರ್ ನೇತೃತ್ವದಲ್ಲಿ ‘ವಂದೇ ಮಾತರಂ’ ಗೀತೆಗೆ ಆಕರ್ಷಕ ನೃತ್ಯ ಪ್ರದರ್ಶನ ನಡೆಯಿತು. ಸ್ಕಾಟ್‌ಲ್ಯಾಂಡಿನ ದಂತಕಥೆ ಬ್ಯಾಂಡ್ ‘ಸಿಂಪಲ್ ಮೈಂಡ್ಸ್’ (ಫ್ರಂಟ್‌ಮ್ಯಾನ್ ಜಿಮ್ ಕೆರರ್ ನೇತೃತ್ವದಲ್ಲಿ) ಮತ್ತು ಆಸ್ಟ್ರೇಲಿಯಾದ ಗಾಯಕಿ ಡೆಲ್ಟಾ ಗುಡ್ರೆಮ್ ಅವರ ಪ್ರದರ್ಶನಗಳು ಸಮಾರಂಭದ ಪ್ರಮುಖ ಆಕರ್ಷಣೆಯಾಗಿದ್ದವು.
2026ರ ಕ್ರೀಡಾಕೂಟದಲ್ಲಿ ಭಾರತವು 13 ಚಿನ್ನ, 17 ಬೆಳ್ಳಿ ಮತ್ತು 9 ಕಂಚು ಸೇರಿದಂತೆ ಒಟ್ಟು 39 ಪದಕಗಳನ್ನು ಗೆದ್ದು, ಪದಕ ಪಟ್ಟಿಯಲ್ಲಿ 4ನೇ ಸ್ಥಾನದೊಂದಿಗೆ ತನ್ನ ಅಭಿಯಾನವನ್ನು ಯಶಸ್ವಿಯಾಗಿ ಮುಗಿಸಿದೆ. 2010ರಲ್ಲಿ ನವದೆಹಲಿಯಲ್ಲಿ ಕ್ರೀಡಾಕೂಟವನ್ನು ಆಯೋಜಿಸಿದ್ದ ಭಾರತ, ಇದೀಗ ಆಸ್ಟ್ರೇಲಿಯಾದ ನಂತರ ಬಹುಬಾರಿ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಆಯೋಜಿಸುತ್ತಿರುವ ವಿಶ್ವದ ಎರಡನೇ ದೇಶ ಎಂಬ ಹಿರಿಮೆಗೆ ಪಾತ್ರವಾಗಲಿದೆ.
