ಗ್ಲಾಸ್ಗೋ: ಕಾಮನ್‌ವೆಲ್ತ್ (CMW 2026) ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳಿಗಾಗಿ ಆಯೋಜಿಸಿದ್ದ ವಿಶೇಷ ಭೋಜನ ಕಾರ್ಯಕ್ರಮದ ವೇಳೆ ಭಾರತದ ನಕ್ಷೆ ಸಂಬಂಧ ವಿವಾದವೊಂದು ಭುಗಿಲೆದ್ದಿದೆ.
ಗ್ಲಾಸ್ಗೋದಲ್ಲಿರುವ ‘ಮಿಸ್ಟರ್ ಸಿಂಗ್ಸ್ ಇಂಡಿಯಾ – ಕರಿ ಹೌಸ್’ ರೆಸ್ಟೋರೆಂಟ್‌ನಲ್ಲಿ ನೀಡಿದ್ದ ಪೇಪರ್ ನ್ಯಾಪ್ಕಿನ್‌ನಲ್ಲಿ ಭಾರತದ ನಕ್ಷೆ ಮುದ್ರಿಸಲಾಗಿತ್ತು. ಆದರೆ, ಅದರಲ್ಲಿ ಸಂಪೂರ್ಣ ಈಶಾನ್ಯ ಭಾರತವೇ ಕಾಣೆಯಾಗಿರುವುದು ಭಾರತೀಯ ಕ್ರೀಡಾಪಟುಗಳ ಗಮನಕ್ಕೆ ಬಂದಿದೆ.
ಒಲಿಂಪಿಕ್ ಕಂಚಿನ ಪದಕ ವಿಜೇತೆ ಹಾಗೂ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ ಈ ವಿಚಾರವನ್ನು ಮೊದಲು ಗಮನಿಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಾರತದ ಪ್ರತಿಯೊಂದು ಭಾಗವೂ ನಮಗೆ ಮುಖ್ಯ. ಈಶಾನ್ಯ ಭಾರತವನ್ನು ನಕ್ಷೆಯಿಂದ ಕೈಬಿಡುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಇಂಡೋನೇಷ್ಯಾ | 271 ಜನರಿದ್ದ ಫೆರ‍್ರಿಯಲ್ಲಿ ಅಗ್ನಿ ಅವಘಡ – ಐವರು ಸಾವು, 41 ಮಂದಿ ನಾಪತ್ತೆ
ಈ ವಿಚಾರಕ್ಕೆ ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷ ಅಜಯ್ ಸಿಂಗ್ ಕೂಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನ್ಯಾಪ್ಕಿನ್‌ನಲ್ಲಿ ಜಮ್ಮು-ಕಾಶ್ಮೀರದ ಚಿತ್ರಣದಲ್ಲೂ ದೋಷವಿದೆ ಎಂದು ಹೇಳಿರುವ ಅವರು, ರೆಸ್ಟೋರೆಂಟ್ ಆಡಳಿತ ಕೂಡಲೇ ಈ ನಕ್ಷೆಯನ್ನು ಸರಿಪಡಿಸಬೇಕು ಹಾಗೂ ತಪ್ಪಾಗಿ ಮುದ್ರಿಸಿದ ನ್ಯಾಪ್ಕಿನ್‌ಗಳನ್ನು ಬಳಕೆ ಮಾಡಬಾರದು ಎಂದು ಒತ್ತಾಯಿಸಿದ್ದಾರೆ.
ಘಟನೆ ಭಾರಿ ಚರ್ಚೆಗೆ ಕಾರಣವಾದರೂ, ಈ ಬಗ್ಗೆ ಮಿಸ್ಟರ್ ಸಿಂಗ್ಸ್ ಇಂಡಿಯಾ ರೆಸ್ಟೋರೆಂಟ್ ಆಡಳಿತ ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.ಇದನ್ನೂ ಓದಿ: ಮೋದಿಯಿಂದ ನನ್ನ ಮಗಳಿಗೆ ಜೀವದಾನ ಸಿಕ್ಕಿದೆ: ಕ್ಷಮಿಸಿದ್ದಕ್ಕೆ ಪ್ರಧಾನಿಗೆ ಧನ್ಯವಾದ ತಿಳಿಸಿದ ಬಾಲಕಿ ತಾಯಿ



