ಜಕಾರ್ತಾ: ಇಂಡೋನೇಷ್ಯಾದ (Indonesia) ಮಧುರಾ ದ್ವೀಪದ ಬಳಿ 271 ಜನರಿದ್ದ ಫೆರ‍್ರಿಯಲ್ಲಿ (Ferry) ಅಗ್ನಿ ಅವಘಡ (Fire Accident) ಸಂಭವಿಸಿದ್ದು, ಐವರು ಸಾವನ್ನಪ್ಪಿದ್ದಾರೆ. ಈ ಅವಘಡದಲ್ಲಿ 41 ಮಂದಿ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಫೆರ‍್ರಿ ಸಮುದ್ರದಲ್ಲಿದ್ದಾಗ ಈ ಅವಘಡ ಸಂಭವಿಸಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ರಕ್ಷಣಾ ತಂಡಗಳು ಹಾಗೂ ಸಮೀಪದಲ್ಲಿದ್ದ ಹಡಗಿನಲ್ಲಿದ್ದವರು ಫೆರ‍್ರಿಯಲ್ಲಿದ್ದ ಹಲವರನ್ನು ರಕ್ಷಿಸಿದ್ದಾರೆ. ಇದರಿಂದ ಸಾವು ನೋವಿನ ಸಂಖ್ಯೆ ಕಡಿಮೆಯಾಗಿದೆ. ನಾಪತ್ತೆಯಾದವರಿಗಾಗಿ ಹುಡುಕಾಟ ನಡೆಯುತ್ತಿದೆ. ಇದನ್ನೂ ಓದಿ: ಪಿಒಕೆ ಶಿಖರದಲ್ಲಿ ಹಿಮಪಾತ; ಖ್ಯಾತ ಪರ್ವತಾರೋಹಿ ‘Nims’ Purja ದುರಂತ ಅಂತ್ಯ
ಫೆರ‍್ರಿ ಪೂರ್ವ ಜಾವಾ ಪ್ರಾಂತ್ಯದ ಸುರಬಯಾದಿಂದ ದಕ್ಷಿಣ ಸುಲವೇಸಿಯ ಮಕಾಸ್ಸರ್‌ಗೆ ತೆರಳುತ್ತಿತ್ತು. ಈ ವೇಳೆ ಅಗ್ನಿ ಅವಘಡ ಸಂಭವಿಸಿದೆ. ಫೆರ‍್ರಿ ಅವಘಡ ನಡೆದ ಮಧುರಾ ದ್ವೀಪವು ಜಾವಾದ ಈಶಾನ್ಯ ಕರಾವಳಿಯಲ್ಲಿದೆ.
ಫೆರ‍್ರಿ ದುರಂತಕ್ಕೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಈ ಬಗ್ಗೆ ಅಧಿಕಾರಿಗಳು ಹೆಚ್ಚಿನ ವಿವರಗಳನ್ನು ಬಿಡುಗಡೆ ಮಾಡಿಲ್ಲ. ಇದನ್ನೂ ಓದಿ: ಈಜಿ ಸ್ಪೇನ್ ನಗರಕ್ಕೆ ನುಗ್ಗಿದ 50 ಸಾವಿರ ವಲಸಿಗರು – 18 ಸಾವು, ತುರ್ತು ಪರಿಸ್ಥಿತಿ ಘೋಷಣೆ
