ಮ್ಯಾಡ್ರಿಡ್: ಉತ್ತರ ಆಫ್ರಿಕಾದಲ್ಲಿರುವ ಸ್ಪೇನ್‌ನ(Spain) ಸ್ವಾಯತ್ತ ಭೂಭಾಗವಾದ ಸೆಯುಟಾ (Ceuta) ನಗರಕ್ಕೆ ಮೊರಾಕ್ಕೊದಿಂದ(Morocco) 50 ಸಾವಿರಕ್ಕೂ ಹೆಚ್ಚು ಅಕ್ರಮ ವಲಸಿಗರು(Migrants) ಹಠಾತ್ತನೆ ನುಗ್ಗುತ್ತಿದ್ದು, ಗಡಿ ಭಾಗದಲ್ಲಿ ಭಾರೀ ಬಿಕ್ಕಟ್ಟು ಸೃಷ್ಟಿಯಾಗಿದೆ.
ಸಮುದ್ರ ಮಾರ್ಗವಾಗಿ ಈಜಿಕೊಂಡು ಗಡಿಯನ್ನು ದಾಟುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು, ಕನಿಷ್ಠ 18 ವಲಸಿಗರು ಸಮುದ್ರದಲ್ಲಿ ಮುಳುಗಿ ಹಾಗೂ ಕಾಲ್ತುಳಿತದಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಪರಿಸ್ಥಿತಿ ಕೈಮೀರುತ್ತಿದ್ದಂತೆ ಸ್ಪೇನ್ ಸರ್ಕಾರವು ಗಡಿ ಭದ್ರತೆ ಹಾಗೂ ತುರ್ತು ನೆರವಿಗಾಗಿ ಸೇನೆಯನ್ನು (Military) ನಿಯೋಜಿಸಿದೆ.
ಮೊರಾಕ್ಕೊದ ‘ಫಿಡೆಕ್’ (Fnideq) ಮತ್ತು ‘ಬೆಲ್ಯೂನೆಚ್’ ಕರಾವಳಿ ಪ್ರದೇಶಗಳಿಂದ ಸುಮಾರು 3 ರಿಂದ 5 ಕಿಲೋಮೀಟರ್‌ಗಳಷ್ಟು ಅಪಾಯಕಾರಿ ಸಮುದ್ರ ಮಾರ್ಗವನ್ನು ಈಜಿಕೊಂಡು ನೂರಾರು ಯುವಕರು, ಮಹಿಳೆಯರು ಹಾಗೂ ಮಕ್ಕಳು ಸೆಯುಟಾ ದಡ ತಲುಪುತ್ತಿದ್ದಾರೆ.
ಸೆಯುಟಾದಲ್ಲಿರುವ ವಲಸಿಗರ ಆಶ್ರಯ ಕೇಂದ್ರಗಳು ಸಂಪೂರ್ಣ ಭರ್ತಿಯಾಗಿದ್ದು, ಸಾವಿರಾರು ಜನರು ರಸ್ತೆಗಳು ಹಾಗೂ ಉದ್ಯಾನವನಗಳಲ್ಲಿ ಆಶ್ರಯ ಪಡೆದಿದ್ದಾರೆ. ಸೆಯುಟಾದ ಸ್ಥಳೀಯ ಸರ್ಕಾರದ ಮುಖ್ಯಸ್ಥ ಹುಸೇನ್ ಜೀಸಸ್ ವಿವಾಸ್ (Juan Jesús Vivas) ಇದನ್ನು “ರಾಷ್ಟ್ರೀಯ ತುರ್ತು ಪರಿಸ್ಥಿತಿ” ಎಂದು ಬಣ್ಣಿಸಿದ್ದು, ಗಡಿ ಕಾವಲಿಗೆ ಸ್ಪೇನ್ ಸರ್ಕಾರದ ತಕ್ಷಣದ ನೆರವು ಕೋರಿದ್ದಾರೆ.
Thousands of migrants have streamed into the tiny Spanish territory of Ceuta in North Africa from Morocco, prompting local officials to call for help from Spain’s national government in Madrid to restore the border. pic.twitter.com/S2fTWapBzR
— The Associated Press (@AP) July 30, 2026
ಸ್ಪೇನ್‌ನ ಉಚ್ಚ ನ್ಯಾಯಾಲಯವು ಇತ್ತೀಚೆಗೆ ನೀಡಿದ ತೀರ್ಪಿನ ಪ್ರಕಾರ, ಸಮುದ್ರದ ಮೂಲಕ ಆಗಮಿಸುವ ಅಕ್ರಮ ವಲಸಿಗರನ್ನು ಸೂಕ್ತ ಕಾನೂನು ಪ್ರಕ್ರಿಯೆಯಿಲ್ಲದೆ ತಕ್ಷಣವೇ ಹಿಂತಿರುಗಿಸುವಂತಿಲ್ಲ. ಈ ಕಾನೂನಾತ್ಮಕ ಬದಲಾವಣೆ ಮತ್ತು ಬೇಸಿಗೆಯಲ್ಲಿ ಅನುಕೂಲಕರವಾದ ಸಮುದ್ರ ವಾತಾವರಣವು ವಲಸಿಗರ ಸಂಖ್ಯೆ ದಿಢೀರ್ ಏರಿಕೆಯಾಗಲು ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗಿದೆ. ಇದನ್ನೂ ಓದಿ: ಪಾಕಿಸ್ತಾನದ ಕಲ್ಲಿದ್ದಲು ಗಣಿಯಲ್ಲಿ ಭೀಕರ ಸ್ಫೋಟ – 32 ಕಾರ್ಮಿಕರು ಸಾವು, ಹಲವರು ಸಿಲುಕಿರುವ ಶಂಕೆ
ಸೆಯುಟಾ ಪ್ರಾಂತ್ಯದ ಮಹತ್ವವೇನು?
ಸೆಯುಟಾ ಮತ್ತು ಮೆಲಿಲ್ಲಾ (Melilla) ಆಫ್ರಿಕಾ ಖಂಡದಲ್ಲಿದ್ದರೂ ಸ್ಪೇನ್‌ನ ಆಡಳಿತಕ್ಕೊಳಪಟ್ಟ ನಗರಗಳಾಗಿವೆ. ಮೊರಾಕ್ಕೊದ ಉತ್ತರ ಕರಾವಳಿಯಲ್ಲಿರುವ ಸೆಯುಟಾವನ್ನು ಸ್ಪೇನ್‌ನ ಮುಖ್ಯ ಭೂಭಾಗದಿಂದ ‘ಜಿಬ್ರಾಲ್ಟರ್ ಜಲಸಂಧಿ’ (Gibraltar Strait) ಪ್ರತ್ಯೇಕಿಸುತ್ತದೆ. ಆಫ್ರಿಕಾ ಮತ್ತು ಯುರೋಪಿಯನ್ ಯೂನಿಯನ್ (EU) ನಡುವೆ ನೇರ ಭೂಗಡಿ ಹೊಂದಿರುವ ಏಕೈಕ ಪ್ರದೇಶಗಳಿವು. ಹೀಗಾಗಿ, ಯುರೋಪ್ ತಲುಪಲು ಬಯಸುವ ಆಫ್ರಿಕಾದ ವಲಸಿಗರಿಗೆ ಇವು ಪ್ರಮುಖ ಪ್ರವೇಶದ್ವಾರಗಳಾಗಿವೆ.
INSANE FOOTAGE: Thousands of migrants continue crossing from Morocco into Spain’s Ceuta enclave, as local officials reportedly urge Madrid to declare a national emergency. pic.twitter.com/dlbbKOjBV1
— Breaking911 (@Breaking911) July 30, 2026
ವಲಸೆಯ ಈ ಸಮಸ್ಯೆಯು ಮೊರಾಕ್ಕೊ ಮತ್ತು ಸ್ಪೇನ್ ನಡುವೆ ದೀರ್ಘಕಾಲದಿಂದ ತೀವ್ರ ವಿವಾದದ ವಿಷಯವಾಗಿದೆ. ಕೇವಲ 80,000 ರಷ್ಟು ಅಲ್ಪ ಜನಸಂಖ್ಯೆಯನ್ನು ಹೊಂದಿರುವ ಸೆಯುಟಾ ಎಂಬ ಈ ಸಣ್ಣ ಪ್ರಾಂತ್ಯವು 1580 ರಿಂದಲೂ ಸ್ಪೇನ್ ಆಡಳಿತದಲ್ಲಿದೆ. ಆದರೆ ಮೊರಾಕ್ಕೊ ಇದನ್ನು ಸ್ಪೇನ್‌ನಿಂದ ಅಕ್ರಮವಾಗಿ ‘ಆಕ್ರಮಿತವಾದ ತನ್ನದೇ ಭೂಭಾಗ’ ಎಂದು ಪರಿಗಣಿಸುತ್ತದೆ. ಇದನ್ನೂ ಓದಿ: ʻಕಾಕ್ರೋಚ್ʼ ಪ್ರತಿಭಟನೆ ವೇಳೆ ಮೋದಿ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ – ಮೆಟಾ ಭಾರತದ ಮುಖ್ಯಸ್ಥರ ವಿರುದ್ಧ ಪ್ರಕರಣ ದಾಖಲು
ಈ ದಿಢೀರ್ ವಲಸೆಯ ಬಿಕ್ಕಟ್ಟು ಯುರೋಪಿನ ರಾಜಕೀಯದಲ್ಲೂ ಸಂಚಲನ ಮೂಡಿಸಿದೆ. ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಸೇರಿದಂತೆ ಹಲವು ನಾಯಕರು ಯುರೋಪ್ ಗಡಿ ಭದ್ರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ನಿಯಂತ್ರಣ ತಪ್ಪಿದರೆ ಗಡಿ ನಿಯಮಗಳನ್ನು ಬಿಗಿಗೊಳಿಸುವುದಾಗಿ ಎಚ್ಚರಿಸಿದ್ದಾರೆ.
ಸ್ಪೇನ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್ ಮತ್ತು ಆಂತರಿಕ ಸಚಿವರು ಪರಿಸ್ಥಿತಿಯ ಪರಾಮರ್ಶೆಗೆ ಸೆಯುಟಾಗೆ ಭೇಟಿ ನೀಡುತ್ತಿದ್ದಾರೆ. ಮೊರಾಕ್ಕೊ ಹಾಗೂ ಸ್ಪೇನ್ ಸರ್ಕಾರದ ಅಧಿಕಾರಿಗಳು ಜಂಟಿಯಾಗಿ ಪರಿಸ್ಥಿತಿಯನ್ನು ನಿಯಂತ್ರಿಸಲು ಮತ್ತು ಅಕ್ರಮವಾಗಿ ಬಂದವರನ್ನು ಕಾನೂನು ಚೌಕಟ್ಟಿನಲ್ಲಿ ಹಿಂತಿರುಗಿಸಲು ಚರ್ಚೆ ನಡೆಸುತ್ತಿದ್ದಾರೆ.
