ಬಾಲಿವುಡ್ ನಟಿ ಹಾಗೂ ಸಂಸದೆ ಕಂಗನಾ ರಣಾವತ್ (Kangana Ranaut) ಮತ್ತು ನಟ ಹೃತಿಕ್ ರೋಷನ್ (Hrithik Roshan) ನಡುವಿನ ಹಳೆಯ ಜಗಳ ಮತ್ತೆ ಸುದ್ದಿಯಲ್ಲಿದೆ. ಸೋಷಿಯಲ್ ಮೀಡಿಯಾದಲ್ಲಿ (Social Media) ಹೃತಿಕ್ ರೋಷನ್ ಮಾಡಿರುವ ಒಂದು ಕಾಮೆಂಟ್‌ಗೆ ಕಂಗನಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇಬ್ಬರ ನಡುವಿನ ವಾಕ್ಸಮರ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ.
ಇತ್ತೀಚೆಗೆ ವಿದ್ಯಾರ್ಥಿಗಳ ಪ್ರತಿಭಟನೆ ಬಗ್ಗೆ ಕಂಗನಾ ನೀಡಿದ್ದ ಹೇಳಿಕೆಯ ನಂತರ, ʼನಾವು ಹೃತಿಕ್ ರೋಷನ್ ಬಳಿ ಕ್ಷಮೆ ಕೇಳಬೇಕುʼ ಎಂಬ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಹೃತಿಕ್, ʼಒಬ್ಬರನ್ನು ದ್ವೇಷಿಸುವ ಕಾರಣಕ್ಕೆ ಇನ್ನೊಬ್ಬರ ಪರ ನಿಲ್ಲುವುದು ಸರಿಯಲ್ಲ. ಸತ್ಯ ಏನು ಎನ್ನುವುದು ಗೊತ್ತಾಗುವವರೆಗೂ ನಾನು ಕಾಯುತ್ತೇನೆʼ ಎಂದು ಬರೆದುಕೊಂಡಿದ್ದರು.
ಹೃತಿಕ್ ಅವರ ಈ ಪ್ರತಿಕ್ರಿಯೆಯನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡ ಕಂಗನಾ, ಖಾರವಾಗಿ ತಿರುಗೇಟು ನೀಡಿದ್ದಾರೆ. ʼನಿಮಗೆ ಸಾಬಾ ಆಜಾದ್‌ನಂತಹ ಒಳ್ಳೆಯ ಸಂಗಾತಿ ಸಿಕ್ಕಿದ್ದಾರೆ. ಅವರ ಜೊತೆ ಸಂತೋಷವಾಗಿರಿ. ಈಗ ನೀವು ಮತ್ತೊಬ್ಬ ಮಹಿಳೆಯನ್ನು ಈ ರೀತಿ ಕೆಣಕುವುದು ಸರಿಯಲ್ಲʼ ಎಂದು ಕಂಗನಾ ಹೇಳಿದ್ದಾರೆ.
ಇದರ ಜೊತೆಗೆ, ʼನಿಮ್ಮ ಹೆಸರನ್ನು ಬಳಸಿಕೊಂಡು ನನ್ನನ್ನು ಆನ್‌ಲೈನ್‌ನಲ್ಲಿ ಕಿರುಕುಳ ನೀಡುತ್ತಿರುವವರನ್ನು ಮೊದಲು ಖಂಡಿಸಿ. ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಬೇಡಿ. ನಿಮ್ಮ ಸಂಗಾತಿಗೆ ಮುಜುಗರ ತರಿಸಬೇಡಿ. ಅನಗತ್ಯ ಕಾಮೆಂಟ್ ಮಾಡುವುದನ್ನು ನಿಲ್ಲಿಸಿʼ ಎಂದು ಹೃತಿಕ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಇದನ್ನೂ ಓದಿ: ಆ.8ಕ್ಕೆ ಟಾಕ್ಸಿಕ್ ಟ್ರೈಲರ್ ರಿಲೀಸ್; ಹೊಸ ಪೋಸ್ಟರ್ ಮೂಲಕ ಗುಡ್‌ನ್ಯೂಸ್ ನೀಡಿದ ಯಶ್
ಕಂಗನಾ ಮತ್ತು ಹೃತಿಕ್ ನಡುವಿನ ವಿವಾದ ಹೊಸದೇನಲ್ಲ. 2016ರಲ್ಲಿ ಇಬ್ಬರ ನಡುವೆ ಪ್ರೀತಿಯ ಸಂಬಂಧ ಇತ್ತು ಎಂದು ಕಂಗನಾ ಹೇಳಿಕೊಂಡಿದ್ದರು. ಆದರೆ, ಹೃತಿಕ್ ಅದನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದರು. ಬಳಿಕ ಈ ವಿಚಾರ ಕಾನೂನು ಹೋರಾಟ, ಇಮೇಲ್ ವಿವಾದ ಹಾಗೂ ಬಹಿರಂಗ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿತ್ತು. ಹಲವು ವರ್ಷಗಳ ನಂತರ ಇದೀಗ ಮತ್ತೊಮ್ಮೆ ಇಬ್ಬರ ನಡುವಿನ ಹಳೆಯ ವಿವಾದ ಸೋಷಿಯಲ್ ಮೀಡಿಯಾದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.ಇದನ್ನೂ ಓದಿ: ಸಲ್ಮಾನ್ ಖಾನ್ ಸಂಭಾವನೆಗೆ ಕತ್ತರಿ; ಬಾಲಿವುಡ್‌ನಲ್ಲಿ ಕಡಿಮೆ ಆಯ್ತಾ ಡಿಮ್ಯಾಂಡ್?
