ಚಿತ್ರದುರ್ಗ: ಡಿವೈಡರ್‌ಗೆ (Divider) ಖಾಸಗಿ ಬಸ್ (Private Bus) ಡಿಕ್ಕಿ ಹೊಡೆದ ಪರಿಣಾಮ ಚಾಲಕ ಹಾಗೂ ಓರ್ವ ಪ್ರಯಾಣಿಕ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ (Chitradurga) ಜಿಲ್ಲೆ ಮೊಳಕಾಲ್ಮೂರು (Molakalmuru) ತಾಲೂಕಿನ ಕೋನಾಪುರ ಗ್ರಾಮದಲ್ಲಿ ನಡೆದಿದೆ.
ಘಟನೆಯಲ್ಲಿ ಖಾಸಗಿ ಬಸ್ ಚಾಲಕ ಮಹ್ಮದ್ ಹಾಗೂ ಓರ್ವ ಪ್ರಯಾಣಿಕ ಮೃತಪಟ್ಟಿದ್ದು, ಬಸ್‌ನಲ್ಲಿದ್ದ 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ರಾಂಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಪ್ರವಾಸಿಗನ ಬೆನ್ನಟ್ಟಿದ ಕಾಡುಕೋಣ – ಗಾಳಿಯಲ್ಲಿ 8 ಅಡಿ ಎತ್ತರಕ್ಕೆ ಹಾರಿದ ವ್ಯಕ್ತಿ!
ಘಟನೆ ಸಂಬಂಧ ರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ವಿದೇಶಾಂಗ ನೀತಿ ಟ್ರಂಪ್‌ಗೆ ಅಡವಿಟ್ಟ ಮೋದಿ: ಪ್ರಿಯಾಂಕ್ ಟೀಕೆ
