DistrictsHassanKarnatakaLatestMain Post

ಬಾಬರ್, ಔರಂಗಜೇಬ್ ಮಾನಸಿಕತೆ ಜಮೀರ್‌ನಲ್ಲಿ ಜೀವಂತವಾಗಿದೆ: ಪ್ರಮೋದ್ ಮುತಾಲಿಕ್

ಹಾಸನ: ಬಾಬರ್, ಔರಂಗಜೇಬ್ ಮಾನಸಿಕತೆ ಜಮೀರ್ ಅಹಮದ್‍ನಲ್ಲಿ ಜೀವಂತವಾಗಿದೆ. ಜಮೀರ್ ಶಾಸಕತ್ವ ರದ್ದು ಮಾಡುವಂತೆ ಗೌವರ್ನರ್ ಮತ್ತು ಸಭಾಪತಿಗೆ ಪತ್ರ ಬರೆಯುತ್ತೇವೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್‍ಮುತಾಲಿಕ್ ಕಿಡಿಕಾರಿದ್ದಾರೆ.

ಹುಬ್ಬಳ್ಳಿ ಗಲಭೆಕೋರರಿಗೆ ಜಮೀರ್ ಅಹಮದ್ ಸಹಾಯ ಮಾಡಿರುವ ವಿಚಾರವಾಗಿ ಹಾಸನ ಜಿಲ್ಲೆ ಬೇಲೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಜಮೀರ್ ಅಹಮದ್ ಅವರ ಕೃತ್ಯ ಇದು ಮೊದಲಲ್ಲ. ಇಸ್ಲಾಂನ ಮಾನಸಿಕತೆ ಇವತ್ತು ಹೊರಗೆ ಬೀಳುತ್ತಿದೆ. ಕಿಡಿಗೇಡಿಗಳಿಗೆ, ರೌಡಿಗಳಿಗೆ, ದರೋಡೆಕೋರರಿಗೆ, ದೇಶದ್ರೋಹಿಗಳಿಗೆ, ಹಿಂದೂ ದೇವಸ್ಥಾನಗಳಿಗೆ ಹಾನಿ ಮಾಡಿದವರಿಗೆ. ಆರಕ್ಷಕರನ್ನು ಕೊಲ್ಲಲು ಪ್ರಯತ್ನ ಮಾಡುವವರಿಗೆ ಹಣ, ಕಿಟ್ ಕೊಡುವಂತಹದ್ದು ಅಸಂವಿಧಾನಿಕವಾದದ್ದು. ಸಂವಿಧಾನ ವಿರೋಧಿ ಇದು, ಅಕ್ಷಮ್ಯ ಅಪರಾಧ. ಬಾಬರ್, ಔರಂಗಜೇಬ್ ಮಾನಸಿಕತೆ ಜಮೀರ್ ಅಹಮದ್‍ನಲ್ಲಿ ಜೀವಂತವಾಗಿದೆ. ಜಮೀರ್ ಶಾಸಕತ್ವ ರದ್ದು ಮಾಡುವಂತೆ ಗೌವರ್ನರ್ ಮತ್ತು ಸಭಾಪತಿಗೆ ಪತ್ರ ಬರೆಯುತ್ತೇವೆ. ಮುಸ್ಲಿಂ ಸಮಾಜದ ಅಮಾಯಕರಿಗೆ ಸಹಾಯ ಮಾಡಿ. ಆದರೆ ಇದನ್ನು ಬಲವಾಗಿ ವಿರೋಧಿಸುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಶನಿವಾರ ವರ್ಷದ ಮೊದಲ ಸೂರ್ಯಗ್ರಹಣ- ಗ್ರಹಣದಂದೇ ಶನಿ ಅಮಾವಾಸ್ಯೆ

ಹುಬ್ಬಳ್ಳಿ ಗಲಭೆ ಬಗ್ಗೆ ರೋಷನ್ ಬೇಗ್ ಬೇಸರ ವಿಚಾರವಾಗಿ ಪ್ರತಿಕ್ರಿಯಿಸಿ, ರೋಷನ್‍ಬೇಗ್ ಹೇಳಿಕೆ ಸ್ವಾಗತ ಮಾಡುತ್ತಿದ್ದೇನೆ. ತಪ್ಪನ್ನು ಒಪ್ಪಿಕೊಂಡರೆ ಸುಧಾರಣೆ ಆಗುತ್ತದೆ. ತಪ್ಪನ್ನು ಒಪ್ಪಿಕೊಳ್ಳದೇ, ಅವರು ಮಾಡಿಲ್ಲ ಅಂತ ಸಿದ್ದರಾಮಯ್ಯ ಸೇರಿ ಇಡೀ ಕಾಂಗ್ರೆಸ್ ಹೇಳುತ್ತಿದೆ. ಕಾಂಗ್ರೆಸ್‍ನವರು ಮತಕ್ಕಾಗಿ ಓಲೈಕೆ ಮಾಡಬೇಡಿ. ಹಿಂದೂ ಸಮಾಜ, ದೇವಾಲಯ ಮೇಲೆ ಆಗಿರುವ ದಾಳಿಯನ್ನು ನೀವು ಖಂಡಿಸಬೇಕು. ಕಾಂಗ್ರೆಸ್‍ನವರು ಗಲಭೆಕೋರರನ್ನು ಶಿಕ್ಷೆಗೆ ಗುರಿ ಮಾಡಿ ಅಂತ ಹೇಳಬೇಕು. ಮತಕ್ಕಾಗಿ ನಿಮ್ಮ ಈ ರೀತಿಯ ಹೇಳಿಕೆ ರಾಷ್ಟ್ರಕ್ಕೆ ಆಘಾತ, ಸಮಾಜಕ್ಕೆ ಅಘಾತ. ಹಿಂದೂ ಸಮಾಜ ನಿಮ್ಮನ್ನು ತಿರಸ್ಕಾರ ಮಾಡುತ್ತದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ:  ಮತ್ತೆ ಗಲಭೆಕೋರರ ಪರ ನಿಂತ ಜಮೀರ್- ಕಲ್ಲು ಹೊಡೆದವರ ಕುಟುಂಬಕ್ಕೆ 5 ಸಾವಿರ, ಫುಡ್‍ಕಿಟ್

Leave a Reply

Your email address will not be published.

Back to top button