ಹೈದರಾವಾದ್: ತೆಲಂಗಾಣದ ಮುನುಗೋಡ (Munugode) ಉಪಚುನಾವಣೆ (Bypolls) ಇದೇ ನವೆಂಬರ್ 3 ರಂದು ನಡೆಯಲಿದೆ. ಇದಕ್ಕೂ ಮುನ್ನವೇ ಮತವನ್ನು ಮಾರಾಟ ಮಾಡಿಕೊಳ್ಳುವವರು ಶವಕ್ಕೆ ಸಮಾನ ಎಂಬ ಪೋಸ್ಟರ್‌ಗಳನ್ನು ಆಹೋರಾತ್ರಿ ಅಂಟಿಸಲಾಗಿದೆ.
5 ವರ್ಷಕ್ಕೊಮ್ಮೆ ನಡೆಯಲಿರುವ ಈ ಉಪಚುನಾವಣೆಯಲ್ಲಿ ಸಾರ್ವಜನಿಕರು ತಮ್ಮ ಮತವನ್ನು ಕೇವಲ ನೋಟು ( Notes) ಮತ್ತು ಮದ್ಯದ (Liquor) ಬಾಟಲಿಗೆ ಮಾರಿಕೊಳ್ಳುವವನು ಶವಕ್ಕೆ ಸಮಾನ. ಹಾಗಾಗಿ ನಿಮ್ಮ ಅಮೂಲ್ಯವಾದ ಮತವನ್ನು ಮಾರಿಕೊಳ್ಳಬೇಡಿ ಎಂಬ ಪೋಸ್ಟರ್‌ಗಳನ್ನು ಎಲ್ಲೆಡೆ ಹಾಕಲಾಗಿದೆ.
Advertisement
Advertisement
ಪೋಸ್ಟರ್‌ಗಳಲ್ಲಿ ನಿಮ್ಮ ಮತವನ್ನು ಮಾರಾಟ ಮಾಡಬೇಡಿ. ಸಾಮರಸ್ಯ, ಸಾಮಾಜಿಕ ನ್ಯಾಯ, ಪ್ರಗತಿ, ನೈತಿಕತೆ, ಅರ್ಹತೆ, ಬದ್ಧತೆ ಮತ್ತು ದಕ್ಷತೆಗಾಗಿ ಮತ ಚಲಾಯಿಸಿ, ಮತದಾನ ಮಾಡಿ! ದೇಶವನ್ನು ಬದಲಾಯಿಸಿ ಎಂದು ಬರೆದಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಕಾವೇರಿ ಕೊಳ್ಳದಲ್ಲಿ ಭರ್ಜರಿ ಮಳೆ – ತಮಿಳುನಾಡಿಗೆ ನಿಗದಿತ ಪ್ರಮಾಣಕ್ಕಿಂತ ನಾಲ್ಕೂವರೆ ಪಟ್ಟು ಅಧಿಕ ನೀರು ಬಿಡುಗಡೆ
Advertisement
Advertisement
ಮುನುಗೋಡಿನ ಹಲವೆಡೆ ಮಳೆ ಸುರಿದಿದ್ದು, ಭಿತ್ತಿಪತ್ರಗಳು ಒದ್ದೆಯಾಗಿದೆ. ಈ ನಡುವೆ ಹಿಂದುಳಿದ ವರ್ಗದ ಸಮುದಾಯವನ್ನು ಉದ್ದೇಶಿಸಿ, ಗುಲಾಮರಾಗಬೇಡಿ. ಎದ್ದೇಳಿ, ಜವಾಬ್ದಾರಿಯುತವಾಗಿ ಮತ ಚಲಾಯಿಸಿ. ನಾವು ಹಿಂದುಳಿದ ಸಮುದಾಯದವರು, ಇತರೆ ದುರ್ಬಲ ವರ್ಗಗಳನ್ನು ರಾಜ್ಯದಲ್ಲಿ ಸರಿಪಡಿಸಲು ಬಯಸುತ್ತೇವೆ. ಗುಲಾಮರು ಬೇಡ ಎಂದು ಮತ್ತೊಂದು ಪೋಸ್ಟರ್‌ನಲ್ಲಿ ಲಗತ್ತಿಸಲಾಗಿದೆ. ಇದನ್ನೂ ಓದಿ: ಅರ್ಕಾವತಿ ನದಿಯಲ್ಲಿ ಅಪರಿಚಿತ ಕಾರ್ ಪತ್ತೆ – ಮಾಲೀಕರಿಗಾಗಿ ತಲಾಶ್