– ಕೈಕಾಲು ಕಟ್ಟಿ ಪೇದೆಗೆ ಹಿಗ್ಗಾ ಮುಗ್ಗಾ ಥಳಿಸಿದ ಮಹಿಳೆ ಕುಟುಂಬಸ್ಥರು
ಯಾದಗಿರಿ: ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಪೊಲೀಸ್ ಕಾನ್‍ಸ್ಟೇಬಲ್, ಆಕೆಯ ಕುಟುಂಬಸ್ಥರ ಕೈಗೆ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದು, ಕೈಕಾಲು ಕಟ್ಟಿ ಪೊಲೀಸ್ ಪೇದೆಗೆ ಗ್ರಾಮಸ್ಥರು ಹಿಗ್ಗಾ ಮುಗ್ಗಾ ಥಳಿಸಿದ ಘಟನೆ ನಗರದಲ್ಲಿ ನಡೆದಿದೆ.
Advertisement
ಡಿಆರ್ ಕಾನ್‍ಸ್ಟೇಬಲ್ ಗುರಪ್ಪ ಯಾದಗಿರಿ ಎಸ್ಪಿ ಕಚೇರಿ ಸಮೀಪದಲ್ಲಿ ವಾಸವಾಗಿದ್ದ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ನಿನ್ನೆ ಸಂಜೆ ಆಕೆಯೆ ಮನೆಯಲ್ಲಿ ಕಾನ್‍ಸ್ಟೇಬಲ್ ಇದ್ದಿದ್ದನ್ನು ಗಮನಿಸಿದ ಕುಟುಂಬಸ್ಥರು, ಗುರಪ್ಪನ ಮೇಲೆ ದಾಳಿಮಾಡಿ, ಕೈಕಾಲು ಕಟ್ಟಿಹಾಕಿ ಥಳಿಸಿದ್ದಾರೆ. ಈ ವೇಳೆ ಸಹಾಯಕ್ಕೆ ಅಂಗಲಾಚಿದರೂ ಯಾರೂ ಸಹಾಯಕ್ಕೆ ಮುಂದಾಗಿಲ್ಲ. ಇದನ್ನೂ ಓದಿ: ನಟ, ಬಿಗ್ ಬಾಸ್ ವಿಜೇತ ಸಿದ್ಧಾರ್ಥ್ ಶುಕ್ಲಾ ಸಾವು
Advertisement
Advertisement
ಸುದ್ದಿ ತಿಳಿದ ನಗರ ಠಾಣೆಯ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ತೆರಳಿ ಕಾನ್‍ಸ್ಟೇಬಲ್ ಗುರಪ್ಪನ್ನನ್ನು ರಕ್ಷಣೆ ಮಾಡಿದ್ದಾರೆ. ಘಟನೆ ನಂತರ ಮಹಿಳೆಯಿಂದ ಪೇದೆ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಗುರಪ್ಪನ್ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.