ಚಿಕ್ಕಮಗಳೂರು: ಬುರುಡೆ ಗ್ಯಾಂಗ್ ಧರ್ಮಸ್ಥಳದ (Dharmasthala Case) ವಿರುದ್ಧ ಯಾವ ಉದ್ದೇಶದಿದಂದ ಷಡ್ಯಂತ್ರ ರೂಪಿಸಿ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಕುಟುಂಬದ ವಿರುದ್ಧ ಅಪಪ್ರಚಾರ ಮಾಡಿದ್ದಾರೆ ಎಂದು ತನಿಖೆಯಾಗಬೇಕು. ನಕ್ಸಲ್ ಬೆಂಬಲಿಸುವ, ಅರಾಜಕತೆಯನ್ನೇ ಉಸಿರಾಗಿಸಿಕೊಂಡಿರೋ ಪ್ರಕಾಶ್ ರಾಜ್ ಈ ಸೂತ್ರದಲ್ಲಿ ಪಾಲುದಾರ ಎನ್ನುವ ಮಾಹಿತಿ ಇದೆ. ಸರ್ಕಾರಕ್ಕೆ ಪ್ರಾಮಾಣಿಕತೆ ಇದ್ದರೆ ಸುಮೋಟೋ ಕೇಸ್ ದಾಖಲಿಸಿಕೊಂಡು ಸಮಗ್ರ ತನಿಖೆ ನಡೆಸಬೇಕೆಂದು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ (CT Ravi) ಆಗ್ರಹಿಸಿದ್ದಾರೆ.
ಪ್ರಕರಣದಲ್ಲಿ ನಟ ಪ್ರಕಾಶ್ ರಾಜ್ (Prakash Raj) ಹೆಸರು ಕೇಳಿ ಬರುತ್ತಿದ್ದು ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. ಈ ಕುರಿತು ಮಾತನಾಡಿ, ಧರ್ಮಸ್ಥಳದಂತಹ ಸಂಸ್ಥೆ ಮೇಲೆ ದೊಡ್ಡ ಪ್ರಮಾಣದ ಷಡ್ಯಂತ್ರ ನಡೆದಿದೆ. ಇದು ಷಡ್ಯಂತ್ರ ನಾನು ಮೊದಲೇ ಹೇಳಿದ್ದೆ. ಆಗ ನನ್ನ ಮೇಲೆ ಎಲ್ಲರೂ ಮುಗಿಬಿದ್ದಿದ್ದರು. ಈಗ ಷಡ್ಯಂತ್ರ ಬಯಲಾಗಿದೆ. ಷಡ್ಯಂತ್ರದ ಹನ್ನಾರ ಧಾರ್ಮಿಕ ಕೇಂದ್ರದ ಬಗ್ಗೆ ಅಪನಂಬಿಕೆ ಹುಟ್ಟಿಸುವ ಸಂಚಿನ ಭಾಗವಾಗಿದೆ. ಇದು ಹೆಗ್ಗಡೆ ಕುಟುಂಬಕ್ಕೆ ಅಗೌರವ ತರುವ ದೊಡ್ಡ ಹುನ್ನಾರ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳದ ವಿರುದ್ಧ 200 ಕೋಟಿ ಷಡ್ಯಂತ್ರ – ಚಿನ್ನಯ್ಯನಿಗೆ ಕರೆ ಮಾಡಿ ಅಪ್ಪಿಕೊಳ್ಳುತ್ತೇನೆ ಎಂದಿದ್ದ ಪ್ರಕಾಶ್ ರಾಜ್

ಬುರುಡೆ ಗ್ಯಾಂಗಿನವರನ್ನು ಎಲ್ಲಿ ಇಡಬೇಕೋ ಅಲ್ಲಿಯೇ ಇಡಬೇಕು. ಇವರನ್ನ ಚುನಾವಣಾ ಪ್ರಚಾರದಲ್ಲೂ ಕಾಂಗ್ರೆಸಿನವರು ಬಳಕೆ ಮಾಡಿಕೊಂಡಿದ್ದೀರಿ. ಬುರುಡೆ ಗ್ಯಾಂಗ್ ಅನ್ನು ನಿಮ್ಮ ಕೃಪಾಪೋಷಿತ ನಾಟಕ ಮಂಡಳಿಯಾಗಿ ಸಾಕಬೇಡಿ. ತನಿಖೆಗೂ ಮುನ್ನ ಗೃಹ ಸಚಿವರೇ ಸರ್ಟಿಫಿಕೇಟ್ ಕೊಡೋ ಕೆಲಸ ಮಾಡಬೇಡಿ. ತನಿಖೆಗೂ ಮೊದಲೇ ಸರ್ಟಿಫಿಕೇಟ್ ಕೊಟ್ಟರೆ ಪಕ್ಷಪಾತಿಗಳಾಗುತ್ತೀರಿ. ಪ್ರಕರಣ ಮುಚ್ಚಿ ಹಾಕುವ ಮನಸ್ಥಿತಿ ಇರುವಂತೆ ಜನರಲ್ಲಿ ಭಾವನೆ ಬರುತ್ತದೆ ಎಂದು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಧರ್ಮಸ್ಥಳ ಹಾಗೂ ಹೆಗ್ಗಡೆ ಕುಟುಂಬದ ಮೇಲೆ ಷಡ್ಯಂತ್ರ ಮಾಡೋದು ಒಳ್ಳೆಯ ಕೆಲಸನಾ? ಕೋಟ್ಯಂತರ ಜನರ ನಂಬಿಕೆಯ ಶ್ರದ್ಧಾಕೇಂದ್ರದ ಮೇಲೆ ನಡೆದ ಅಪಪ್ರಚಾರಕ್ಕೆ ಒಳ್ಳೆ ಕೆಲಸ ಅಂತ ಸರ್ಟಿಫಿಕೇಟ್ ಕೊಡ್ತೀರಾ? ಸರ್ಟಿಫಿಕೇಟ್ ಕೊಡುವಾಗ ಗೃಹ ಸಚಿವರು ಎಂಬ ಪ್ರಜ್ಞೆ ಇರಲಿ. ಹಾಲಿ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಇನ್ನೊಂದು ಆಯಾಮದಲ್ಲಿ ಇದರ ತನಿಖೆ ನಡೆಸಬೇಕು. ಧರ್ಮಾಧಿಕಾರಿ ಕುಟುಂಬದ ವಿರುದ್ಧ ಷಡ್ಯಂತ್ರ ಏಕೆ ಮಾಡಿದರು? ಇವರಿಗೆ ಹಣ ಎಲ್ಲಿಂದ ಬಂತು ಎಂದು ತನಿಖೆಯಾಗಲಿ. ಇದರ ಹಿಂದೆ ಮತಾಂತರದ ಮಾಫಿಯಾದ ಕಾರಣವೇನಾದರೂ ಇದಿಯಾ? ಅಥವಾ ವ್ಯವಹಾರ ಇದಿಯಾ ಎನ್ನುವುದರ ಕುರಿತು ಸಂಪೂರ್ಣ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ಸರ್ಕಾರದ ನೇತೃತ್ವದ ಸಮಗ್ರ ತನಿಖೆಯಿಂದ ನ್ಯಾಯ ಒದಗಿಸಲು ಸಾಧ್ಯವಿಲ್ಲ. ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಪ್ರಕರಣದ ಇನ್ನೊಂದು ಕೋನದ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆಯಾಗಬೇಕು. ನಮ್ಮದು ಧರ್ಮಸ್ಥಳದ್ದು ತಲೆಮಾರುಗಳ ಸಂಬಂಧ. ಹಿಂದೆ ದೇವಸ್ಥಾನಕ್ಕೆ ನಮ್ಮ ಕೈಯಲ್ಲಿ ಮುಡುಪು ಹಾಕಿಸೋರು. ಹೆಗ್ಗಡೆ ಕುಟುಂಬದ ಮೇಲಿನ ಆರೋಪವನ್ನ ನನ್ನ ಮನಸ್ಸು ಒಪ್ಪಿಕೊಂಡಿರಲಿಲ್ಲ ಎಂದು ಸಿ.ಟಿ ರವಿ ಹೇಳಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಕೇಸ್- ತಿಮರೋಡಿ, ಮಟ್ಟಣ್ಣನವರ್, ಜಯಂತ್, ವಿಠಲ ಗೌಡ, ಜಯಂತ್ ಪಾತ್ರ ಏನು?
