ಬಾಲಿವುಡ್‌ನ (Bollywood) ಫೇಮಸ್ ನಟ ಅಕ್ಷಯ್ ಕುಮಾರ್ (Akshay Kumar) ಇತ್ತೀಚೆಗೆ ತಮ್ಮ ಹೊಸ ಸಿನಿಮಾ ‘ವೆಲ್‌ಕಮ್ ಟು ದ ಜಂಗಲ್’ ಚಿತ್ರದ ಟ್ರೈಲರ್ ರಿಲೀಸ್ ವೇಳೆ ತಮ್ಮ ನಿವೃತ್ತಿ ಬಗ್ಗೆ ಮಾತನಾಡಿ ಎಲ್ಲರ ಗಮನ ಸೆಳೆದಿದ್ದಾರೆ.
ಕಳೆದ 36 ವರ್ಷಗಳಿಂದ ಬಾಲಿವುಡ್ ರಂಗದಲ್ಲಿ ಹಿಟ್ ನಟರ ಸಾಲಿನಲ್ಲಿರುವ ಅಕ್ಷಯ್ ಕುಮಾರ್, ಇತ್ತೀಚೆಗೆ ತಮ್ಮ ನಿವೃತ್ತಿಯ ಬಗ್ಗೆ ಮಾತನಾಡಿದ್ದಾರೆ. ಅವರ ಅಬಿಪ್ರಾಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ವೆಲ್‌ಕಮ್ ಟು ದ ಜಂಗಲ್ ಚಿತ್ರದ ಟ್ರೈಲರ್ ಬಿಡುಗಡೆ ವೇಳೆ ಅವರು ತಮ್ಮ ಮನದಾಳದ ಮಾತು ಹಂಚಿಕೊಂಡಿದ್ದಾರೆ.
ಅಕ್ಷಯ್ ಕುಮಾರ್ ಅಭಿನಯದ ‘ವೆಲ್‌ಕಮ್ ಟು ದ ಜಂಗಲ್’ (Welcome to the jungle) ಸಿನಿಮಾ ಜೂನ್ 26ರಂದು ಬಿಡುಗಡೆಯಾಗಲಿದೆ. ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಕ್ಷಯ್ ಕುಮಾರ್ ಅವರನ್ನು ನಿವೃತ್ತಿ ಬಗ್ಗೆ ಪ್ರಶ್ನಿಸಲಾಯಿತು. ಇದಕ್ಕೆ ಉತ್ತರಿಸಿದ ಅವರು, ಬೆಳಗ್ಗೆ 4 ಗಂಟೆಗೆ ಎದ್ದಾಗ ಕೆಲವೊಮ್ಮೆ ನಿವೃತ್ತಿ ಬಗ್ಗೆ ಯೋಚನೆ ಬರುತ್ತದೆ. ಆದರೆ ಐದು ಸೆಕೆಂಡ್ ಬಳಿಕ ಶೂಟಿಂಗ್‌ಗೆ ಹೋಗಬೇಕು, ನನಗಾಗಿ ಶೂಟಿಂಗ್ ಸ್ಪಾಟ್‌ನಲ್ಲಿ 300 ಜನ ಕಾಯುತ್ತಾ ಇರುತ್ತಾರೆ ಎಂಬುದು ನೆನಪಾಗುತ್ತದೆ. ನಂತರ ನಿವೃತ್ತಿ ಬಗ್ಗೆ ನಾಳೆ ಯೋಚಿಸೋಣ ಎಂದುಕೊಂಡು ಶೂಟಿಂಗ್‌ಗೆ ಹೋಗುತ್ತೇನೆ. ಹೀಗೆ 36 ವರ್ಷಗಳಿಂದ ನಡೆಯುತ್ತಿದೆಎಂದು ಹಾಸ್ಯಾಸ್ಪದವಾಗಿ ಹೇಳಿದರು. ಇದನ್ನೂ ಓದಿ: ಆರೋಗ್ಯವಾಗಿದ್ದೇನೆ, ಸುಳ್ಳು ಸುದ್ದಿ ಹಬ್ಬಿಸಿದವರನ್ನು ಸುಮ್ನೆ ಬಿಡಲ್ಲ – ದೊಡ್ಡಣ್ಣ ರಿಯಾಕ್ಷನ್
ಅಕ್ಷಯ್ ತಮ್ಮ ರಿಟೈರ್ಮೆಂಟ್ ಪ್ಲ್ಯಾನ್ ಬಗ್ಗೆ ಮಾತನಾಡಿ, ನಾನು ನಿವೃತ್ತಿಯಾದರೆ ಮನೆಯಲ್ಲೇ ಕೂರಬೇಕಾಗುತ್ತದೆ. ಎಲೆಕ್ಟ್ರಿಷಿಯನ್ ಕೆಲಸ, ನಾಯಿಯನ್ನು ವಾಕ್ ಮಾಡಿಸುವ ಕೆಲಸ, ತೋಟದ ಕೆಲಸ ಸೇರಿದಂತೆ ಮನೆಯ ಎಲ್ಲ ಕೆಲಸಗಳನ್ನೂ ನಾನೇ ಮಾಡಬೇಕಾಗುತ್ತದೆ. ಅದಕ್ಕಿಂತ ಕೆಲಸ ಸಿನಿಮಾಗಳನ್ನ ಮಾಡೋದೇ ಉತ್ತಮ ಎಂದರು.
ಕುಟುಂಬದ ಜೊತೆ ಸಮಯ ಕಳೆಯುವ ಬಗ್ಗೆ ಮಾತನಾಡಿ, ನಾನು ಮನೆಯವರ ಜೊತೆ ಕೂತರೆ, ಮರುದಿನವೇ ಕೆಲಸಕ್ಕೆ ಹೋಗಿ ಎಂದು ಹೇಳುತ್ತಾರೆ ಎಂದು ಅಕ್ಷಯ್ ನಗುತ್ತಾ ಹೇಳಿದರು.
ನಿವೃತ್ತಿ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡ ಅವರು, ನನಗೆ ‘ರಿಟೈರ್ಮೆಂಟ್’ ಎಂಬ ಪದವೇ ಇಷ್ಟವಿಲ್ಲ. ಬದುಕಿನ ಕೊನೆಯ ಕ್ಷಣದವರೆಗೂ ಕೆಲಸ ಮಾಡಬೇಕು. ಎಲ್ಲರೂ ಕೆಲಸ ಮಾಡುತ್ತಲೇ ಇರಬೇಕು ಎಂದು ಹೇಳಿದರು. ಸದ್ಯ ಅಕ್ಷಯ್ ಕುಮಾರ್ ಅವರ ಈ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
‘ವೆಲ್‌ಕಮ್ ಟು ದ ಜಂಗಲ್’ ಚಿತ್ರದಲ್ಲಿ ಅಕ್ಷಯ್ ಕುಮಾರ್ ಜೊತೆಗೆ ಸುನೀಲ್ ಶೆಟ್ಟಿ, ದಿಶಾ ಪಟಾನಿ, ಜಾಕ್ವೆಲಿನ್ ಫರ್ನಾಂಡಿಸ್, ಅರ್ಷದ್ ವಾರ್ಸಿ, ಜಾಕಿ ಶ್ರಾಫ್, ಪರೇಶ್ ರಾವಲ್, ರವೀನಾ ಟಂಡನ್, ಲಾರಾ ದತ್ತಾ ಸೇರಿದಂತೆ 30ಕ್ಕೂ ಹೆಚ್ಚು ಕಲಾವಿದರು ನಟಿಸಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಕೇಸ್‌ನಲ್ಲಿ ಪ್ರಕಾಶ್ ರಾಜ್ ಹೆಸರು ತಳುಕು – ಎಕ್ಸ್ ಪೋಸ್ಟ್‌ನಲ್ಲಿ ನಟ ಸ್ಪಷ್ಟನೆ
