ಬೆಂಗಳೂರು: ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನ ಸರ್ಕಾರ ತಾತ್ಕಾಲಿಕವಾಗಿ ಮುಂದೂಡಿದೆ.
ಆಗಸ್ಟ್ 8 ಮತ್ತು 9 ರಂದು ನಡೆಯಬೇಕಿದ್ದ ಲಿಖಿತ ಪರೀಕ್ಷೆಯನ್ನ ಮುಂದೂಡುವ ಮೂಲಕ ವಿದ್ಯಾರ್ಥಿಗಳ ಹೋರಾಟಕ್ಕೆ ಜಯ ಸಿಕ್ಕಿದೆ. ಕೃಷಿ ಅಧಿಕಾರಿ ಹುದ್ದೆ ನೇಮಕಾತಿ ನಿಯಮಗಳ ಸಂಬಂಧ ಪ್ರತಿಭಟನೆ ಫ್ರೀಡಂ ಪಾರ್ಕಿನಲ್ಲಿ ನಡೆಯುತ್ತಿದ್ದ ಮುಷ್ಕರ ನಿರತರಾಗಿರುವ ಜಿಕೆವಿಕೆ ಕೃಷಿ ವಿಶ್ವವಿದ್ಯಾಲಯ ವಿದ್ಯಾರ್ಥಿಗಳನ್ನು ಇಂದು ಸಚಿವ ಪ್ರಿಯಾಂಕ್ ಖರ್ಗೆ ಭೇಟಿಯಾದ್ರು. ಇದನ್ನೂ ಓದಿ: ಭೀಕರ ರಸ್ತೆ ಅಪಘಾತಕ್ಕೆ ಗ್ಯಾಂಗ್‌ಸ್ಟರ್ ಅತೀಕ್ ಅಹ್ಮದ್ ಮಗ ಸೇರಿದಂತೆ ಮೂವರ ಸಾವು
ವಿದ್ಯಾರ್ಥಿಗಳ ಬೇಡಿಕೆಗಳನ್ನು ಆಲಿಸಿದ ಸಚಿವರು, ನಮ್ಮ ಕೃಷಿ ಪದವೀಧರರಿಗೆ ಕಿಂಚಿತ್ತೂ ಅನ್ಯಾಯವಾಗದಂತೆ, ಪರೀಕ್ಷೆ ನಡೆಸಲು ದೃಢಸಂಕಲ್ಪ ಮಾಡಿದೆ ಎಂದು ಸಿಎಂ ಸಂದೇಶವನ್ನ ವಿದ್ಯಾರ್ಥಿಗಳ ಗಮನಕ್ಕೆ ತಂದರು. ಇದನ್ನೂ ಓದಿ: ʻಕೆಲಸ ಮಾಡದಿದ್ರೆ, ಸಂಬಳ ಇಲ್ಲʼ – ಮುಷ್ಕರ ಹಿಂಪಡೆಯುವಂತೆ ವೈದ್ಯರಿಗೆ ಬಾಂಬೆ ಹೈಕೋರ್ಟ್ ಖಡಕ್ ಸೂಚನೆ



