ಲಕ್ನೋ: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ (Mayawati) ಗುರುವಾರ ತಮ್ಮ ಸೋದರಳಿಯ ಆಕಾಶ್ ಆನಂದ್ (Akash Anand) ಅವರನ್ನು ಬಹುಜನ ಸಮಾಜ ಪಕ್ಷ (BSP) ದಿಂದ ಎರಡನೇ ಬಾರಿಗೆ ಹೊರಹಾಕಿದ್ದಾರೆ.
ಕಳೆದ ವಾರ ಬಿಎಸ್ಪಿಯ ರಾಷ್ಟ್ರೀಯ ಸಂಯೋಜಕ ಸ್ಥಾನದಿಂದ ಆನಂದ್ ಅವರನ್ನು ತೆಗೆದು ಹಾಕಲಾಯಿತು. ಈಗ ಪಕ್ಷದಿಂದ ವಜಾಗೊಳಿಸಲಾಗಿದೆ ಎಂದು ಮಾಯಾವತಿ ಘೋಷಿಸಿದ್ದಾರೆ. ಇದನ್ನೂ ಓದಿ: UP Assembly Polls 2027 | ಚುನಾವಣೆಗೂ ಮುನ್ನ ಬಂಪರ್ – 1 ಕೋಟಿ ಮಹಿಳೆಯರಿಗೆ 1 ಲಕ್ಷದವರೆಗೆ ಬಡ್ಡಿರಹಿತ ಸಾಲ: ಯೋಗಿ
ಆನಂದ್‌ಗೆ ಹೆಚ್ಚಿನ ಪ್ರಬುದ್ಧತೆಯ ಅಗತ್ಯವಿದೆ. ಈ ಹಂತದಲ್ಲಿ ಅವರಿಗೆ ಪಕ್ಷದ ಪ್ರಮುಖ ಜವಾಬ್ದಾರಿಗಳನ್ನು ವಹಿಸುವುದು ಸೂಕ್ತವಲ್ಲ ಎಂದು ಕಳೆದ ವಾರ ಮಾಯಾವತಿ ಹೇಳಿದ್ದರು. ತಮ್ಮ ಕಿರಿಯ ಸೋದರಳಿಯ ಇಶಾನ್ ಆನಂದ್ ಅವರನ್ನು ಪಕ್ಷದ ನಾಯಕರಿಗೆ ಮಾಯಾವತಿ ಪರಿಚಯಿಸಿದ್ದರು.
2024ರ ಮೇನಲ್ಲಿ ಲೋಕಸಭಾ ಚುನಾವಣಾ ಪ್ರಚಾರದ ಸಮಯದಲ್ಲಿ ಮಾಯಾವತಿ ಅವರು ಆಕಾಶ್ ಆನಂದ್ ಅವರನ್ನು ರಾಷ್ಟ್ರೀಯ ಸಂಯೋಜಕ ಹುದ್ದೆಯಿಂದ ತೆಗೆದುಹಾಕಿದ್ದರು. ಅವರು ಇನ್ಮುಂದೆ ತಮ್ಮ ಉತ್ತರಾಧಿಕಾರಿಯಲ್ಲ ಎಂದು ಹೇಳಿದ್ದರು. ಇದನ್ನೂ ಓದಿ: ಮುಂಬೈ-ಗೋವಾ ಹೆದ್ದಾರಿ ಕಾಮಗಾರಿ ವಿಳಂಬಕ್ಕೆ ನಾಚಿಕೆಯಾಗುತ್ತಿದೆ, ಉದ್ಘಾಟನೆಗೆ ನಾನು ಬರಲ್ಲ: ಗಡ್ಕರಿ ಗರಂ
ಮಾಯಾವತಿ 2024ರ ಆಗಸ್ಟ್‌ನಲ್ಲಿ ಆಕಾಶ್ ಆನಂದ್ ಅವರನ್ನು ಮತ್ತೆ ನೇಮಿಸಿಕೊಂಡಿದ್ದರು. ಹರಿಯಾಣ, ಮಹಾರಾಷ್ಟ್ರ, ಜಾರ್ಖಂಡ್ ಮತ್ತು ದೆಹಲಿಯಲ್ಲಿ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಪ್ರಚಾರವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಅವರಿಗೆ ವಹಿಸಿದ್ದರು.

