ಚಂಡೀಗಢ: ಮುಂದಿನ ವರ್ಷ ನಡೆಯಲಿರುವ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ (BJP) ಅಧಿಕಾರಕ್ಕೆ ಬಂದರೆ, 2029ರ ಡಿಸೆಂಬರ್ 31ರೊಳಗೆ ಪಂಜಾಬ್‌ನ್ನು (Punjab) ಮಾದಕವಸ್ತು ಮುಕ್ತ ರಾಜ್ಯವನ್ನಾಗಿ ಮಾಡುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಭರವಸೆ ನೀಡಿದ್ದಾರೆ.
ಜಲಂಧರ್‌ನಲ್ಲಿ ಬಿಜೆಪಿ ಆಯೋಜಿಸಿದ್ದ `ನಶಾ ಮುಕ್ತ ಪಂಜಾಬ್ ಯಾತ್ರೆ’ ಕಾರ್ಯಕ್ರಮದ ವೇಳೆ ಅವರು ಮಾತನಾಡಿದರು. ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಮಾದಕವಸ್ತುಗಳ ವಿರುದ್ಧದ ಹೋರಾಟವನ್ನು ಪ್ರಮುಖ ಚುನಾವಣಾ ವಿಷಯವನ್ನಾಗಿ ಬಿಜೆಪಿ ಮುಂದಿಡಲಿದೆ ಎಂದು ಅಮಿತ್ ಶಾ ಹೇಳಿದರು. ಇದನ್ನೂ ಓದಿ: ಬಿಟ್ ಕಾಯಿನ್ ಹಗರಣ – ಶ್ರೀಕಿ, ರಾಬಿನ್ ಖಂಡೇಲವಾಲಗೆ ಜಾಮೀನು ಮಂಜೂರು
ಆಮ್ ಆದ್ಮಿ ಪಕ್ಷದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ರಾಜ್ಯದಲ್ಲಿ ಸಿಂಥೆಟಿಕ್ ಡ್ರಗ್ಸ್‌ಗಳ ವ್ಯಾಪಾರ ಬಹಿರಂಗವಾಗಿ ನಡೆಯಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ ಎಂದು ಆರೋಪಿಸಿದರು. ರೈತರು, ಕೈಗಾರಿಕೆ, ಕಾನೂನು ಸುವ್ಯವಸ್ಥೆ ಹಾಗೂ ಮಹಿಳೆಯರ ಸುರಕ್ಷತೆ ಸೇರಿದಂತೆ ಪಂಜಾಬ್ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಕಮಲದ ಗುರುತಿಗೆ ಮತ ನೀಡಿದರೆ, 2029ರ ಡಿಸೆಂಬರ್ 31ರೊಳಗೆ ಪಂಜಾಬ್‌ನಿಂದ ಸಿಂಥೆಟಿಕ್ ಡ್ರಗ್ಸ್ ವ್ಯಾಪಾರವನ್ನು ನಿರ್ಮೂಲನೆ ಮಾಡುತ್ತೇವೆ ಎಂದರು. ಇದನ್ನೂ ಓದಿ: ಸ್ಫೋಟಕ ದ್ವಿಶತಕ ಸಿಡಿಸಿ ವಿಶ್ವದಾಖಲೆ ಬರೆದ ಶುಭಮನ್ ಗಿಲ್
4,000 ಕಿ.ಮೀ. ನಶಾ ಮುಕ್ತ್ ಪಂಜಾಬ್ ಯಾತ್ರೆ:
`ನಶಾ ಮುಕ್ತ ಪಂಜಾಬ್ ಯಾತ್ರೆ’ ಪಠಾಣ್‌ಕೋಟ್‌ನಿಂದ ಆರಂಭವಾಗಿದ್ದು, ಸುಮಾರು 4,000 ಕಿಲೋಮೀಟರ್‌ಗಳಷ್ಟು ದೂರ ಸಂಚರಿಸಿದೆ ಎಂದು ಅಮಿತ್ ಶಾ ಹೇಳಿದರು. 13 ದಿನಗಳ ಅವಧಿಯಲ್ಲಿ ಪಂಜಾಬ್‌ನ ಎಲ್ಲಾ 117 ವಿಧಾನಸಭಾ ಕ್ಷೇತ್ರಗಳಿಗೆ ಯಾತ್ರೆ ತೆರಳಿ ಜಲಂಧರ್‌ನಲ್ಲಿ ಅಂತ್ಯಗೊಂಡಿದೆ ಎಂದು ತಿಳಿಸಿದರು. ಇದನ್ನೂ ಓದಿ: ಚುನಾವಣಾ ಆಯೋಗದ ವಿರುದ್ಧ ಇಂಡಿ ಒಕ್ಕೂಟದಿಂದ ಅ.2ರಿಂದ 8ರವರೆಗೆ `ಪ್ರಜಾಪ್ರಭುತ್ವ ಉಳಿಸಿ’ ಜಾಥಾ

ಭಗವಂತ್ ಮಾನ್ ವಿರುದ್ಧವೂ ಟೀಕೆ:
ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಹೆಸರನ್ನು ನೇರವಾಗಿ ಉಲ್ಲೇಖಿಸದೆ ಅಮಿತ್ ಶಾ ಟೀಕಿಸಿದರು. ಮಾದಕ ವಸ್ತು ಸೇವಿಸುವ ಹಾಗೂ ಧಾರ್ಮಿಕ ಗುರುಗಳನ್ನು ಅವಮಾನಿಸುವ ವ್ಯಕ್ತಿಯಿಂದ ಪಂಜಾಬ್ ಅನ್ನು ಡ್ರಗ್ಸ್ ಮುಕ್ತಗೊಳಿಸಲು ಸಾಧ್ಯವಿಲ್ಲ. ಪಂಜಾಬ್ ಅನ್ನು ಮಾದಕವಸ್ತುಗಳ ಸಮಸ್ಯೆಯಿಂದ ಮುಕ್ತಗೊಳಿಸುವ ಸಾಮರ್ಥ್ಯ ಬಿಜೆಪಿಗೆ ಮಾತ್ರ ಇದೆ ಎಂದು ಹರಿಹಾಯ್ದರು. ಇದನ್ನೂ ಓದಿ: 2,700 ಬೆಲೆಯ ಕ್ಯಾನ್ಸರ್ ಔಷಧಿಗೆ 27,000 ರೂ. ನಿಗದಿ: ಇದು ಹಗಲು ದರೋಡೆ ಅಲ್ಲದೆ ಮತ್ತೇನು?: ಸುಪ್ರೀಂ ಕೆಂಡಾಮಂಡಲ
ಡ್ರಗ್ಸ್ ವಶಪಡಿಸಿಕೊಂಡ ಅಂಕಿ-ಅಂಶ ಉಲ್ಲೇಖ:
ಮಾದಕವಸ್ತುಗಳ ವಿರುದ್ಧದ ಕ್ರಮವನ್ನು ವಿವರಿಸುವ ಸಂದರ್ಭದಲ್ಲಿ ವಿವಿಧ ಸರ್ಕಾರಗಳ ಅವಧಿಯಲ್ಲಿ ವಶಪಡಿಸಿಕೊಳ್ಳಲಾದ ಡ್ರಗ್ಸ್ ಪ್ರಮಾಣದ ಅಂಕಿ-ಅಂಶಗಳನ್ನು ಅಮಿತ್ ಶಾ ಉಲ್ಲೇಖಿಸಿದರು. ಅವರ ಪ್ರಕಾರ, 2004ರಿಂದ 2014ರವರೆಗೆ ಕಾಂಗ್ರೆಸ್ ನೇತೃತ್ವದ ಸರ್ಕಾರದ ಅವಧಿಯಲ್ಲಿ ದೇಶಾದ್ಯಂತ ಸುಮಾರು 26 ಲಕ್ಷ ಕೆ.ಜಿ. ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. 2014ರಿಂದ 2024ರವರೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಸುಮಾರು 1.2 ಕೋಟಿ ಕೆ.ಜಿ. ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಟಿಪ್ಪು ಜಯಂತಿ ಬಳಿಕ ಉರ್ದು ಹಬ್ಬ- ವಿಧಾನಸೌಧದ ಮೆಟ್ಟಿಲುಗಳ ಮೇಲೆ ಕಾರ್ಯಕ್ರಮ
ಕಾಂಗ್ರೆಸ್ ನೇತೃತ್ವದ ಅವಧಿಯಲ್ಲಿ ಸುಮಾರು 40,000 ಕೋಟಿ ರೂ. ಮೌಲ್ಯದ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಸುಮಾರು 1.90 ಲಕ್ಷ ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಮುಂದಿನ 3 ಗಂಟೆಗಳಲ್ಲಿ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ – 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

