ಶಿವಮೊಗ್ಗ: ಜಿಲ್ಲೆಯಲ್ಲಿ (Shivamogga) ಬೆಳೆ ವಿಮೆ (Crop Insurance) ಹಂಚಿಕೆ ತಾರತಮ್ಯ ಖಂಡಿಸಿ ರೈತರು (Farmers) ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ನಾವು ಕಟ್ಟಿದ ಸಾವಿರಾರು ರೂ. ವಿಮೆ ಹಣ ಕೂಡ ವಾಪಸ್ ಬರುತ್ತಿಲ್ಲ ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ.
ಶಿವಮೊಗ್ಗದ ಬೆಳೆ ವಿಮೆ ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಶರಾವತಿ ಹಿನ್ನೀರು ಭಾಗದ ಕರೂರು, ಬಾರಂಗಿ, ನಿಟ್ಟೂರು ವ್ಯಾಪ್ತಿಯ ಸಾವಿರಾರು ರೈತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಶಿವಮೊಗ್ಗ ನಗರದ ಸರ್ಕ್ಯೂಟ್ ಹೌಸ್- ಬಸ್ ನಿಲ್ದಾಣ- ಗೋಪಿ ಸರ್ಕಲ್ ಮಾರ್ಗವಾಗಿ ರ್ಯಾಲಿ ನಡೆಸಿ ಡಿಸಿ ಕಚೇರಿಗೆ ರೈತರು ಆಗಮಿಸಿದ್ದಾರೆ. ಇದನ್ನೂ ಓದಿ: ಲವ್ ಮ್ಯಾರೇಜ್ ವಿಚಾರಕ್ಕೆ ಎರಡು ಸಮುದಾಯದ ನಡುವೆ ಮಾರಾಮಾರಿ – ಹಲವರಿಗೆ ಗಂಭೀರ ಗಾಯ
ವಿಮಾ ಹಣ ಪಂಚಾಯತ್ನಿಂದ ಪಂಚಾಯತ್ಗೆ ಸಾವಿರಾರು ರೂ. ವ್ಯತ್ಯಾಸ ಕಂಡು ಬಂದಿದೆ. ಗ್ರಾಮದ ಒಂದೇ ಸರ್ವೇ ನಂಬರ್ಗಳಲ್ಲಿರುವ ರೈತರಿಗೆ ಪರಿಹಾರ ವ್ಯತ್ಯಾಸವಾಗುತ್ತಿದೆ. ಮಳೆಮಾಪನ ಕೇಂದ್ರ ಹಾಗೂ ಅಧಿಕಾರಿಗಳ ಯಡವಟ್ಟಿಗೆ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ರೈತರು ಆಕ್ರೋಶ ಹೊರಹಾಕುತ್ತಿದ್ದಾರೆ.
ರೈತರ ಪ್ರತಿಭಟನೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ಭಾಗಿಯಾಗಿ ಬೆಂಬಲ ಸೂಚಿಸಿದ್ದಾರೆ. ರೈತರ ಪ್ರತಿಭಟನೆ ಹಿನ್ನೆಲೆ ಪೊಲೀಸರು ಬಿಗಿ ಭದ್ರತೆಕೈಗೊಂಡಿದ್ದಾರೆ. ಇದನ್ನೂ ಓದಿ: ಹೆನ್ನಂಗಿಯಲ್ಲಿ ಕಾಡಾನೆ ದಾಳಿಗೆ ರೈತ ಬಲಿ – ಎನ್ಆರ್ಪುರ ಸಂಪೂರ್ಣ ಬಂದ್

