ಲಕ್ನೋ: ಮಾಫಿಯಾ ಡಾನ್, ಗುಂಡೇಟಿಗೆ ಬಲಿಯಾಗಿದ್ದ ರಾಜಕಾರಣಿ ಅತೀಕ್ ಅಹ್ಮದ್‌ನ(Atiq Ahmed) ಕಿರಿಯ ಪುತ್ರ ಆಬಾನ್ ಅಹ್ಮದ್(Aaban Ahmed) ಸೇರಿದಂತೆ ಮೂವರು ಭೀಕರ ರಸ್ತೆ ಅಪಘಾತದಲ್ಲಿ (Accident) ಮೃತಪಟ್ಟಿದ್ದಾರೆ.
ಝಾನ್ಸಿಯ ಪುಂಚ್ ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಇವರು ಪ್ರಯಾಣಿಸುತ್ತಿದ್ದ ಕಾರು (Car) ವೇಗವಾಗಿ ಬಂದು ರಸ್ತೆ ವಿಭಜಕಕ್ಕೆ (ಡಿವೈಡರ್) ಬಲವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.
ಈ ಕಾರಿನಲ್ಲಿದ್ದ ಮೂವರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಅತೀಕ್ ಅಹ್ಮದ್ 1,169 ಕೋಟಿ ರೂ. ಒಡೆಯ- ಹುಡುಕಿದಷ್ಟು ಸಿಗುತ್ತಿದೆ ಗ್ಯಾಂಗಸ್ಟರ್‌ನ ಆಸ್ತಿ

ಯಾರಿದು ಅತೀಕ್ ಅಹ್ಮದ್?
ಅತೀಕ್ ಅಹ್ಮದ್ ಉತ್ತರ ಪ್ರದೇಶದ ಒಬ್ಬ ಪ್ರಮುಖ ಗ್ಯಾಂಗ್‌ಸ್ಟರ್ ಮತ್ತು ಮಾಜಿ ರಾಜಕಾರಣಿ. ಭಾರತೀಯ ಅಪರಾಧ ಲೋಕ ಮತ್ತು ರಾಜಕೀಯದಲ್ಲಿ ಅತ್ಯಂತ ವಿವಾದಾತ್ಮಕ ವ್ಯಕ್ತಿಯಾಗಿದ್ದ ಈತ ಸುಮಾರು ನಾಲ್ಕು ದಶಕಗಳ ಕಾಲ ಅಪರಾಧ ಲೋಕದಲ್ಲಿ ಸಕ್ರಿಯನಾಗಿದ್ದ.
ಈತನ ಮೇಲೆ ಕೊಲೆ, ಅಪಹರಣ, ಸುಲಿಗೆ ಸೇರಿದಂತೆ 100ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು. ಇದರ ನಡುವೆಯೂ ರಾಜಕೀಯ ಪ್ರವೇಶಿಸಿ, ಉತ್ತರ ಪ್ರದೇಶದ ಐದು ಬಾರಿ ಶಾಸಕ ಮತ್ತು ಸಮಾಜವಾದಿ ಪಕ್ಷದ (SP) ಸಂಸದನಾಗಿಯೂ ಆಯ್ಕೆಯಾಗಿದ್ದ. ಇದನ್ನೂ ಓದಿ: ಗ್ಯಾಂಗ್‌ಸ್ಟರ್ ಅತೀಕ್ ಜಮೀನಿನಲ್ಲಿ ಮನೆಗಳನ್ನು ನಿರ್ಮಿಸಿ ಬಡವರಿಗೆ ಹಂಚಿದ ಯೋಗಿ ಆದಿತ್ಯನಾಥ್
ಮಗನ ಎನ್‌ಕೌಂಟರ್ ನಡೆದ ಕೇವಲ ಎರಡು ದಿನಗಳ ಬಳಿಕ ಅಂದರೆ 2023ರ ಏಪ್ರಿಲ್ 15ರಂದು, ಪೊಲೀಸ್ ಕಾವಲಿನಲ್ಲಿದ್ದ ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್ ಅಹ್ಮದ್‌ನನ್ನು ವೈದ್ಯಕೀಯ ತಪಾಸಣೆಗೆ ಕರೆದೊಯ್ಯುವಾಗ ಮಾಧ್ಯಮ ಪ್ರತಿನಿಧಿಗಳ ಸೋಗಿನಲ್ಲಿ ಬಂದ ಮೂವರು ದುಷ್ಕರ್ಮಿಗಳು ಲೈವ್ ಟಿವಿಯ ಕ್ಯಾಮೆರಾಗಳ ಮುಂದೆಯೇ ಗುಂಡಿಕ್ಕಿ ಹತ್ಯೆ ಮಾಡಿದ್ದರು.

