ಕೊಪ್ಪಳ: ಹನುಮ ಹುಟ್ಟಿದ ನಾಡು ಅಂಜನಾದ್ರಿಗೆ (Anjanadri Hills) ಸಂಸದ ಯದುವೀರ್ (MP Yaduveer) ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಕೊಪ್ಪಳ ಜಿಲ್ಲೆ (Koppal) ಗಂಗಾವತಿ (Gangavathi) ತಾಲೂಕಿನಲ್ಲಿರುವ ಐತಿಹಾಸಿಕ ಅಂಜನಾದ್ರಿ ಪರ್ವತಕ್ಕೆ ಯದುವೀರ್ ಅವರು ಭೇಟಿ ನೀಡಿದ್ದಾರೆ. ಬೆಟ್ಟದ 575 ಮೆಟ್ಟಿಲೇರುವ ಮೂಲಕ ಹನುಮನ ದರ್ಶನ ಪಡೆದಿದ್ದಾರೆ. ಈ ವೇಳೆ ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.


