ಭೋಪಾಲ್: ಕಂದಾಯ ಅಧಿಕಾರಿಯೊಬ್ಬ ಚರಂಡಿ ದಾಟಲು ವೃದ್ಧನ ಬೆನ್ನೇರಿ ಕುಳಿತ ಪ್ರಸಂಗ ಮಧ್ಯಪ್ರದೇಶದ (Madhya Pradesh) ಸಿಧಿ ಜಿಲ್ಲೆಯ ಮಾತಾ ಗ್ರಾಪಂನಲ್ಲಿ ನಡೆದಿದೆ. ದೃಶ್ಯದ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕಾಡು ಪ್ರಾಣಿಗಳಿಂದ ಉಂಟಾದ ಹಾನಿಯ ಅಂದಾಜು ಮಾಡಲು ಗ್ರಾಮಕ್ಕೆ ಅಧಿಕಾರಿ ಪಟ್ವಾರಿ ನಿಲೇಶ್ ನಾಮ್‌ದೇವ್ ಭೇಟಿ ಕೊಟ್ಟಿದ್ದ. ಕೇವಾತ್ ಎಂಬ ವೃದ್ಧನ ಮನೆ ಚರಂಡಿಯ ಆಚೆ ಇತ್ತು. ‘ಚರಂಡಿಯಲ್ಲಿ ನಡೆದರೆ ಶೂ ಒದ್ದೆಯಾಗಲಿದೆ. ಚರಂಡಿ ದಾಟಿಸಿದರೆ ಮಾತ್ರ ಸಮೀಕ್ಷೆ ಮಾಡುವುದಾಗಿ’ ಅಧಿಕಾರಿ ಹೇಳಿದ್ದ. ಈ ಹಿನ್ನೆಲೆ ಅಧಿಕಾರಿಯನ್ನು ಬೆನ್ನ ಮೇಲೆ ಹೊತ್ತು ವೃದ್ಧ ಸಾಗಿದ್ದ. ಇದನ್ನೂ ಓದಿ: ಸೋದರಳಿಯ ಆಕಾಶ್ ಆನಂದ್‌ನನ್ನು BSPಯಿಂದ ಹೊರಹಾಕಿದ ಮಾಯಾವತಿ
ಸ್ಥಳೀಯರು ಇದನ್ನು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದರು. ಸಿಧಿ ಜಿಲ್ಲಾಧಿಕಾರಿ ವಿಕಾಸ್ ಮಿಶ್ರಾ, ಈ ವಿಡಿಯೋ ಈಗ ಬಹಿರಂಗಗೊಂಡಿದೆ. ದೂರು ಸ್ವೀಕರಿಸಿದ ನಂತರ ಕಠಿಣ ಕ್ರಮ ಕೈಗೊಳ್ಳಲಾಗುವುದು. ವಿಡಿಯೋದ ಬಗ್ಗೆ ಪ್ರಸ್ತುತ ತನಿಖೆ ನಡೆಸಲಾಗುತ್ತಿದೆ. ತನಿಖೆಯಿಂದ ಹೊರಬರುವ ಯಾವುದೇ ಸಂಗತಿಗಳನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು.
ಅಧಿಕಾರಿಯ ನಡೆಗೆ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಬಳಿಕ ಅಧಿಕಾರಿಯನ್ನು ಅಮಾನತು ಮಾಡಿ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಪ್ರಿಯಾ ಪಾಠಕ್ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಡೆಮಾಲಿಷನ್ ಕೆಲಸದ ವೇಳೆ ನೀರಿನ ಟ್ಯಾಂಕ್‌ನ ಸ್ಲ್ಯಾಬ್ ಕುಸಿತ – ಇಬ್ಬರು ಕಾರ್ಮಿಕರು ಸಾವು, ಮೂವರ ರಕ್ಷಣೆ

